ರಾಷ್ಟ್ರೀಯ

ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ ಮಧ್ಯಪ್ರದೇಶದಲ್ಲೇ ಹೆಚ್ಚು

Pinterest LinkedIn Tumblr

mall-nutriನವದೆಹಲಿ: ಮಧ್ಯಪ್ರದೇಶ ರಾಜ್ಯದಲ್ಲಿ ಅತಿ ಹೆಚ್ಚು ಪ್ರಮಾಣದ ಮಕ್ಕಳು ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ. ಅಂದರೆ ದೇಶಾದ್ಯಂತ ಶೇ. 74.1 ರಷ್ಟು ಅಪೌಷ್ಠಿಕತೆಯಿಂದ ಕೂಡಿದ್ದ ಮಕ್ಕಳಿದ್ದು, ಅದರಲ್ಲಿ ಶೇ. 60 ರಷ್ಟು ಮಕ್ಕಳು ಮಧ್ಯಪ್ರದೇಶದಲ್ಲಿಯೇ ಇದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.

ರಾಷ್ಟ್ರೀಯ ಕುಟುಂಬ ಆರೋಗ್ಯ ಇಲಾಖೆ ನಡೆಸಿದ ಸಮೀಕ್ಷೆಯಂತೆ 2005-06 ರಲ್ಲಿ ಶೇ.42.5 ರಷ್ಟು ಮಕ್ಕಳು ಅಪೌಷ್ಠಿಕತೆಯಿಂದ ಹಾಗೂ ಶೇ.69.5 ರಷ್ಟು ಮಕ್ಕಳು ರಕ್ತ ಹೀನತೆಯಿಂದ ಬಳಲುತ್ತಿದ್ದಾರೆ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮನೇಕಾ ಗಾಂಧಿ ರಾಜ್ಯ ಸಭೆಯಲ್ಲಿ ಲಿಖಿತ ಉತ್ತರ ನೀಡಿದ್ದಾರೆ.

ಶೇ.56.5 ರಷ್ಟು ಮಕ್ಕಳು ಜಾರ್ಖಂಡ್ ನಲ್ಲಿ ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ. ಉಳಿದಂತೆ ಛತ್ತೀಸ್ ಘಡದಲ್ಲಿ ಶೇ.55.9 ರಷ್ಟು ಮಕ್ಕಳು ರಕ್ತ ಹೀನತೆಯಿಂದ ಬಳಲುತ್ತಿದ್ದಾರೆ. ಹಾಗೂ ಆಂದ್ರಪ್ರದೇಶ ಅಪೌಷ್ಠಿಕತೆಯಲ್ಲಿ ಮೂರನೇ ಸ್ಥಾನ ಪಡೆದಿದೆ ಎಂದು ತಿಳಿಸಿದ್ದಾರೆ.

ಇನ್ನು ದೇಶಾದ್ಯಂತ ಶೇ.42 ರಷ್ಟು 5 ವರ್ಷದ ಮಕ್ಕಳು ಕಡಿಮೆ ತೂಕದಿಂದ ಬಳಲುತ್ತಿದ್ದಾರೆ. ಕಬ್ಬಿಣದ ಅಂಶದ ಕೊರತೆ ಹಾಗೂ  ವಿಟಮಿನ್ ಬಿ-12 ಕೊರತೆಯಿಂದಾಗಿ ರಕ್ತ ಹೀನತೆ ಉಂಟಾಗುತ್ತದೆ. ಹೀಗಾಗಿ ಸರ್ಕಾರ ವಿವಿಧ ಯೋಜನೆಯಡಿ ಮಕ್ಕಳಿಗೆ ಪೌಷ್ಠಿಕ ಆಹಾರ ನೀಡುವತ್ತ ಆದ್ಯತೆ  ನೀಡುತ್ತಿದೆ ಎಂದು ಮನೇಕಾ ಗಾಂಧಿ ಹೇಳಿದ್ದಾರೆ.

Write A Comment