ರಾಷ್ಟ್ರೀಯ

ಮೋದಿ ಅಣತಿಯಂತೆ ನಜೀಬ್ ಜಂಗ್ ವರ್ತಿಸುತ್ತಿದ್ದಾರೆ: ಕೇಜ್ರಿವಾಲ್

Pinterest LinkedIn Tumblr

kejri-newನವದೆಹಲಿ: ದೆಹಲಿ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್, ಪ್ರದಾನಿ ನರೇಂದ್ರ ಮೋದಿ ಅವರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ.

ಈ ಸಂಬಂಧ ನಜೀಬ್ ಜಂಗ್ ಅವರಿಗೆ ಪತ್ರ ಬರೆದಿರುವ ಕೇಜ್ರಿವಾಲ್, ಒಬ್ಬ ವ್ಯಕ್ತಿ  ಸರ್ಕಾರವಾಗಲು ಸಾಧ್ಯವಿಲ್ಲ ಎಂದು ಟಾಂಗ್ ನೀಡಿದ್ದಾರೆ. ಒಬ್ಬ ವ್ಯಕ್ತಿ ತಾನೇ ಸರ್ಕಾರ ಎಂದು ಘೋಷಿಸಿಕೊಂಡರೇ ಜನಾದೇಶ ಪಡೆದು ಎಲ್ಲಾ ಸೀಟುಗಳಲ್ಲಿ ಜಯಗಳಿಸಿ ಸರ್ಕಾರ ರಚನೆ ಮಾಡಿರುವ ನಾವು ಏನು ಎಂದು ಕೇಜ್ರಿವಾಲ್ ನಜೀಬ್ ಜಂಗ್ ಅವರನ್ನು ಪ್ರಶ್ನಿಸಿದ್ದಾರೆ.

ಸರ್ಕಾರದ ಎಲ್ಲಾ ವಿಷಯಗಳಲ್ಲೂ ಮೂಗು ತೂರಿಸುತ್ತಿರುವ ನಜೀಬ್ ಜಂಗ್ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ ಎಂದು ದೂರಿದ್ದಾರೆ. ದೆಹಲಿ ಮಹಿಳಾ ಆಯೋಗದ ಅಧ್ಯಕ್ಷರಾಗಿ ನೇಮಕವಾಗಿರುವ ಸ್ವಾತಿ ಮಲವಾಲಿ ಅವರಿಗೆ ಬರೆದಿರುವ ಪತ್ರದಲ್ಲಿ ನಾನೇ ಸರ್ಕಾರ ಎಂದು ಗವರ್ನರ್ ನಜೀಬ್ ಜಂಗ್ ಉಲ್ಲೇಖಿಸಿದ್ದಾರೆ.

Write A Comment