ರಾಷ್ಟ್ರೀಯ

ಭ್ರಷ್ಟಾಚಾರ: 5 ವರ್ಷಗಳಲ್ಲಿ 100 ಐಎಎಸ್ ಅಧಿಕಾರಿಗಳ ವಿರುದ್ಧ ಸಿಬಿಐ ಕೇಸ್

Pinterest LinkedIn Tumblr

cbiನವದೆಹಲಿ: ವಿವಿಧ ಭ್ರಷ್ಟಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಳೆದ ಐದು ವರ್ಷಗಳಲ್ಲಿ ಸಿಬಿಐ 100 ಐಎಎಸ್ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿದೆ. ಈ ಪೈಕಿ 66 ಅಧಿಕಾರಿಗಳ ವಿರುದ್ಧ ಪ್ರಾಸಿಕ್ಯೂಷನ್‌ಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ.

2010ರಿಂದ ಇಲ್ಲಿಯವರೆಗೆ 10 ಸಿಎಎಸ್‌ಎಸ್(ಕೇಂದ್ರ ಸಚಿವಾಲಯ ಸೇವೆ) ಗ್ರೂಪ್ ಎ ಅಧಿಕಾರಿಗಳು ಹಾಗೂ 9 ಸಿಬಿಐ ಗ್ರೂಪ್ ಎ ಅಧಿಕಾರಿಗಳು ಸೇರಿದಂತೆ ಒಟ್ಟು 100 ಐಎಎಸ್ ಅಧಿಕಾರಿಗಳ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ಸಿಬಿಐ ಮನವಿ ಸಲ್ಲಿಸಿದೆ ಎಂದು ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಹಾಗೂ ಪಿಂಚಣಿ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರು ಇಂದು ರಾಜ್ಯಸಭೆಗೆ ಲಿಖಿತ ಉತ್ತರ ನೀಡಿದ್ದಾರೆ.

8 ಸಿಎಸ್‌ಎಸ್ ಗ್ರೂಪ್ ಎ ಹಾಗೂ 6 ಸಿಬಿಐ ಗ್ರೂಪ್ ಎ ಅಧಿಕಾರಿಗಳು ಸೇರಿದಂತೆ ಕೇಂದ್ರ ಸರ್ಕಾರ ಇದುವರೆಗೆ ಒಟ್ಟು 66 ಅಧಿಕಾರಿಗಳ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದೆ ಸಚಿವರು ತಿಳಿಸಿದ್ದಾರೆ.

Write A Comment