ರಾಷ್ಟ್ರೀಯ

ಗುಜರಾತ್‌ನಲ್ಲಿ ಹಾರುವ ಹಾವು !

Pinterest LinkedIn Tumblr

snake

ಮೊರ್ಬಿ, ಜು.23: ಹಾರುವ ಹಾವನ್ನು ನೀವು ಎಲ್ಲಿಯಾದ್ರೂ ಕಂಡಿದ್ದೀರಾ? ಗುಜರಾತ್‌ನಲ್ಲಿ ಕಂಡುಬಂದಿದೆ. ಜನ ಆಗಸದಲ್ಲಿ ಹಾರುವ ಹಾವನ್ನು ಕಂಡು ಫೋಟೊ ತೆಗೆದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹಾರುವ ಹಾವು ಸಿಕ್ಕಾಪಟ್ಟೆ ಹಾರಾಡುತ್ತಿದೆ.

ಗುಜರಾತ್‌ನಲ್ಲಿ ಹಾವೊಂದು ಹಾರುತ್ತಿರುವ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ಸುದ್ದಿ ಮಾಡಿದೆ. ಆದರೆ, ಈ ಫೋಟೊಗಳು ನಿಜವೋ ಸುಳ್ಳೊ ಎಂಬುದು ದೃಢಪಟ್ಟಿಲ್ಲ.

ಕೆಲವು ಯುವಕರು ಹೇಳುವ ಪ್ರಕಾರ ಮಂಗಳವಾರ ಹಾರುತ್ತಿರುವ ಹಾವಿನ ಚಿತ್ರವನ್ನು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾಗಿ ಹೇಳಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಆ ಫೋಟೋಗಳನ್ನು ಅಪ್ಲೋಡ್ ಮಾಡಿದ್ದಾರೆ. ಕೆಲವರು ಹಾರುವ ಹಾವು ನಿರಂತರವಾಗಿ ಬೆಳವಣಿಗೆಯಾಗುತ್ತಿತ್ತು ಎಂದು ಹೇಳಿದ್ದಾರೆ.

ಆದರೆ, ಕೆಲವರು ಮಾತ್ರ ಇದು ಶುದ್ಧ ಸುಳ್ಳು ಎಂದಿದ್ದಾರೆ. ಚಿತ್ರದಲ್ಲಿ ಹಾವು ಹಾರುತ್ತಿರಲಿಲ್ಲ. ಬದಲಿಗೆ ಪಕ್ಷಿಗಳು ಕೊಂಡೊಯ್ದ ಹಾವು ಅವುಗಳ ಕಾಲುಗಳಿಂದ ಜಾರಿ ಬೀಳುವಾಗ ತೆಗೆದಿರಬಹುದಾದ ಫೋಟೊ ಆಗಿರಬಹುದು ಎನ್ನುತ್ತಿದ್ದಾರೆ. ಇನ್ನೂ ಕೆಲವರು ಇದೆಲ್ಲಾ ಫೋಟೊ ಶಾಪ್‌ನಲ್ಲಿನ ಎಡಿಟಿಂಗ್ ಕೈಚಳಕವಾಗಿದೆ ಎನ್ನುತ್ತಿದ್ದಾರೆ.

Write A Comment