ರಾಷ್ಟ್ರೀಯ

ಸಚಿವೆ ಸುಷ್ಮಾ, ವಸಂಧುರಾ, ಶಿವರಾಜ್‌ಸಿಂಗ್‌ ಚೌಹಾಣ್‌ ರಾಜೀನಾಮೆಗೆ ಬಿಗಿಪಟ್ಟು ಮುಂದುವರಿಕೆ; ಸಂಸತ್ ಕಲಾಪ ಒಂದು ದಿನ ಮುಂದೂಡಿಕೆ

Pinterest LinkedIn Tumblr

ww

ಹೊಸದಿಲ್ಲಿ: ಲೋಕಸಭೆ ಹಾಗೂ ರಾಜ್ಯಸಭೆಗಳಲ್ಲಿ ಪ್ರತಿಪಕ್ಷಗಳ ಗದ್ದಲ ಮುಂದುವರಿದ ಹಿನ್ನೆಲೆಯಲ್ಲಿ ಉಭಯ ಸದನಗಳ ಕಲಾಪವನ್ನು ಶುಕ್ರವಾರಕ್ಕೆ ಮುಂದೂಡಲಾಗಿದೆ.

ಉಭಯ ಸದನಗಳಲ್ಲೂ ಕಾಂಗ್ರೆಸ್‌ ಸೇರಿದಂತೆ ಪ್ರತಿಪಕ್ಷಗಳು ಕಳಂಕಿತ ಐಪಿಎಲ್‌ ಮಾಜಿ ಅಧ್ಯಕ್ಷ ಲಲಿತ್‌ ಮೋದಿಗೆ ನೆರವಾಗಿದ್ದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ರಾಜೀನಾಮೆಗೆ ಒತ್ತಾಯಿಸಿದವು.

ಲಲಿತ್‌ ಮೋದಿಗೆ ನೆರವಾಗಿರುವ ಸುಷ್ಮಾ ಸ್ವರಾಜ್‌, ರಾಜಸ್ಥಾನದ ಮುಖ್ಯಮಂತ್ರಿ ವಸಂಧುರಾ ರಾಜೇ ಹಾಗೂ ವ್ಯಾಪಂ ಹಗರಣದ ಹಿನ್ನೆಲೆಯಲ್ಲಿ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್‌ಸಿಂಗ್‌ ಚೌಹಾಣ್‌ ರಾಜೀನಾಮೆಗೆ ಒತ್ತಾಯಿಸಿ ಕೋಲಾಹಲ ಎಬ್ಬಿಸಿದ ಪ್ರತಿಪಕ್ಷಗಳ ನಡೆಯಿಂದ ಬುಧವಾರ ಕೂಡ ಇಡೀ ದಿನದ ಕಲಾಪವು ವ್ಯರ್ಥವಾಗಿತ್ತು.

ಮಧ್ಯಾಹ್ನವರೆಗೆ ಮುಂದಕ್ಕೆ:

ಸಂಸತ್ ಕಲಾಪದ ಮೂರನೇ ದಿನವಾದ ಗುರುವಾರ ಪ್ರತಿಪಕ್ಷಗಳ ತೀವ್ರ ಗದ್ದಲ, ಕೋಲಾಹಲದ ಹಿನ್ನೆಯಲ್ಲಿ ರಾಜ್ಯ ಸಭೆ ಕಲಾಪವನ್ನು ಆರಂಭದಲ್ಲಿ 12 ಗಂಟೆಗೆ ಬಳಿಕ 2 ಗಂಟೆಗೆ ಮುಂದೂಡಲಾಗಿತ್ತು. ಬಳಿಕ ಕಲಾಪವನ್ನೇ ನಡೆಸಲು ಸಾಧ್ಯವಾಗದ ಪರಿಸ್ಥಿತಿ ಹಿನ್ನೆಲೆಯಲ್ಲಿ
ಶುಕ್ರವಾರಕ್ಕೆ ಮುಂದೂಡಲಾಯಿತು.

ಅದಕ್ಕೂ ಮುನ್ನ ಲೋಕಸಭೆಯಲ್ಲೂ ಆಡಳಿತ ಹಾಗೂ ಪ್ರತಿಪಕ್ಷಗಳ ನಡುವೆ ತೀವ್ರ ಮಾತಿನ ಚಕಮಕಿ ನಡೆದು ಯಾರು ಯಾರಿಗೆ ಏನು ಹೇಳುತ್ತಿದ್ಧಾರೆಂದೇ ಅರ್ಥವಾಗದ ಸ್ಥಿತಿ ನಿರ್ಮಾಣವಾಗಿತ್ತು.

ಕಪ್ಪು ರಿಬ್ಬನ್ ಧರಿಸಿ ಬಂದಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಪ್ರತಿಪಕ್ಷಗಳ ಆರೋಪಗಳ ಬಗ್ಗೆ ಚರ್ಚೆ ನಡೆಸುವ ಸರಕಾರದ ಪ್ರಸ್ತಾಪವನ್ನು ತಿರಸ್ಕರಿಸಿದರು. ಪ್ರಧಾನಿ ಮೋದಿ ಪ್ರತಿಭಟನೆಯನ್ನು ಹತ್ತಿಕ್ಕುವ ತಂತ್ರ ಅನುಸರಿಸುತ್ತಿದ್ದಾರೆ. ಅವರು ನಮಗಾಗಲಿ ಈ ದೇಶದ ಜನರಿಗಾಗಲಿ ಉತ್ತರಿಸುವ ಗೋಜಿಗೆ ಹೋಗುವುದಿಲ್ಲ ಎಂದು ದೂರಿದರು.

ಪ್ರಧಾನಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿಗೆ ಪ್ರತಿಕ್ರಿಯಿಸಿದ ಸರಕಾರ, ಮೊದಲು ಕಾಂಗ್ರೆಸ್‌ ನಡೆಸಿದ ಹಗರಣಗಳ ಬಗ್ಗೆ ರಾಹುಲ್‌ ಗಾಂಧಿ ಉತ್ತರ ಹೇಳಲಿ ಎಂದು ವಾದಿಸಿತು.

ರಾಜ್ಯಸಭೆಯಲ್ಲಿ ಎರಡು ಸಾವಿರ ಕೋಟಿ ರೂಪಾಯಿಗಳ ವ್ಯಾಪಂ ಹಗರಣ ಎಂಬ ಪೋಸ್ಟರ್ ಪ್ರದರ್ಶಿಸಿದ ಕಾಂಗ್ರೆಸ್ ಸಂಸದ ಹನುಮಂತ ರಾವ್, ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ರಾಜೀನಾಮೆಗೆ ಆಗ್ರಹಿಸಿದರು.

Write A Comment