ರಾಷ್ಟ್ರೀಯ

ಸಿಎಂ ಚಂದ್ರಬಾಬು ನಾಯ್ಡು ಆಫರ್ ತಿರಸ್ಕರಿಸಿದ ಆಂಧ್ರ ಭಿಕ್ಷುಕರು

Pinterest LinkedIn Tumblr

chandra-babuರಾಜಮುಂಡ್ರಿ: ಆಂಧ್ರ ಪ್ರದೇಶದಲ್ಲಿ ನಡೆಯುತ್ತಿರುವ ಗೋದಾವರಿ ಪುಷ್ಕರಂ ನಿಂದ ದೂರ ಉಳಿಯುವ ಭಿಕ್ಷುಕರಿಗೆ 5 ಸಾವಿರ ರೂಪಾಯಿ ಹಣ ನೀಡುವುದಾಗಿ ಘೋಷಿಸಿದ್ದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಆಫರ್ ಅನ್ನು ಭಿಕ್ಷುಕರು ತಿರಸ್ಕರಿಸಿದ್ದಾರೆ.

ಗೋದಾವರಿ ಪುಷ್ಕರದಿಂದ ದೂರ ಉಳಿಯುವ ಭಿಕ್ಷುಕರಿಗೆ ತಲಾ ಐದು ಸಾವಿರ ರೂಪಾಯಿ ನೀಡುವ ಪ್ರಸ್ತಾಪವನ್ನು ಚಂದ್ರಬಾಬು ನಾಯ್ಡು ಹೇಳಿದ್ದರು. ನಂತರ 10 ಸಾವಿರ ರೂ.ಗಳಿಗೆ ಹಣದ ಮೊತ್ತವನ್ನು ಏರಿಸಲಾಯಿತು. ಆದರೆ ಈ ಹಣ ಪಡೆಯಲು ಆಸಕ್ತಿ ತೋರದ ಭಿಕ್ಷಕರು ಮುಖ್ಯಮಂತ್ರಿಗಳ ಹಣದ ಆಫರ್ ನಿರಾಕರಿಸಿದ್ದಾರೆ.

ಪುಷ್ಕರ ನಡೆಯುತ್ತಿರುವ ಘಾಟ್ ಗಳಲ್ಲಿ ಪ್ರಮುಖವಾಗಿ ಸ್ನಾನ ಮಾಡುವ ಕೋತಿಲಿಂಗಲ ಘಾಟ್, ಪುಶ್ಕರ್ ಘಾಟ್ ಗಳಲ್ಲಿ ಭಿಕ್ಷುಕರು ಬಹುದೊಡ್ಡ ತಲೆನೋವಾಗಿ ಪರಿಣಮಿಸಿದ್ದಾರೆ. ಜೊತೆಗೆ ಭಿಕ್ಷುಕರ ಜೀವನ ಶೈಲಿಯನ್ನು ಸುಧಾರಿಸಲು ಸಿಎಂ ಚಂದ್ರಬಾಬು ನಾಯ್ಡು 10 ಸಾವಿರ ಹಣ ನೀಡುವುದಾಗಿ ಘೋಷಿಸಿದ್ದರು,

ರಾಜಮುಂಡ್ರಿಯಲ್ಲಿರುವ ಭಿಕ್ಷುಕರು ಹೊರ ಪ್ರದೇಶಗಳಿಂದ ಬರುವ ಭಿಕ್ಷುಕರ ಜೊತೆ ಜಗಳ ನಡೆಸುತ್ತಿದ್ದರು. ಹೀಗಾಗಿ ಪುಷ್ಕರ ನಡೆಯುವ 12 ದಿನಗಳು ಭಿಕ್ಷಾಟನೆ ಮಾಡುವುದನ್ನು ನಿಷೇಧಿಸಲು ಆಂಧ್ರ ಪ್ರದೇಶ ಸರ್ಕಾರ ಚಿಂತಿಸಿತ್ತು. ಆದರೆ ಹಣ ಪಡೆಯಲು ನಿರಾಕರಿಸಿರುವ ಭಿಕ್ಷಕರು ತಮ್ಮ ವೃತ್ತಿ ಮುಂದುವರಿಸುವುದಾಗಿ ಪಟ್ಟು ಹಿಡಿದಿದ್ದಾರೆ.

Write A Comment