ರಾಷ್ಟ್ರೀಯ

30ರಂದು ಯಾಕೂಬ್ ಮೆಮೋನ್ ಗೆ ಗಲ್ಲು ಖಾಯಂ

Pinterest LinkedIn Tumblr

meನವದೆಹಲಿ, ಜು.22-ಮುಂಬೈ ಸರಣಿ ಸ್ಪೋಟದ ರೂವಾರಿ ಅಬ್ದುಲ್ ರಜಾಕ್ ಯಾಕೂಬ್ ಮೆಮೋನ್ ಸಲ್ಲಿಸಿದ್ದ ಕ್ಯುರೇಟಿವ್ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯ ತಳ್ಳಿಹಾಕಿದ್ದು, ಗಲ್ಲುಶಿಕ್ಷೆ ಖಾಯಂ ಆಗಿದೆ.
1993ರ ಮಾಚ್ 12 ರಂದು ಮುಂಬೈಯಲ್ಲಿ ನಡೆದಿದ್ದ ಸರಣಿ ಸ್ಫೋಟದಲ್ಲಿ 263 ಜನ ಮೃತಪಟ್ಟು ನೂರಾರು ಜನ ಗಾಯಗೊಂಡಿದ್ದರು. ಈ ಸ್ಫೋಟದ ರೂವಾರಿ ಮೆಮೋನ್ ಎಂಬುದು ಖಾಯಂ ಆಗುತ್ತಿದ್ದಂತೆ ಮುಂಬೈನ ವಿಶೇಷ ತಾಡಾ ನ್ಯಾಯಾಲಯ 2007ರ ಜುಲೈ 27 ರಂದು ಈ ಉಗ್ರನಿಗೆ ಮರಣ ದಂಡನೆ ಶಿಕ್ಷೆ ವಿಧಿಸಿತ್ತು.

ಆದರೆ ಈ ಶಿಕ್ಷೆಯನ್ನು ಪ್ರಶ್ನಿಸಿ ಮೆಮೋನ್ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದ.
ಆದರೆ ನ್ಯಾಯಾಲಯ ಮೆಮೋನ್‌ನ ಈ ಅರ್ಜಿಯನ್ನು ತಿರಸ್ಕರಿಸಿತ್ತು. ನಂತರ ಮೆಮೋನ್ ರಾಷ್ಟ್ರಪತಿಯವರಿಗೆ ಕ್ಷಮಾಧಾನ ಮನವಿ ಸಲ್ಲಿಸಿದ್ದ. ಕಳೆದ ವರ್ಷ ರಾಷ್ಟ್ರಪತಿಯವರು ಅವನ ಈ ಅರ್ಜಿಯನ್ನು ವಜಾ ಮಾಡಿದ್ದರು.
ಈ ಹಿನ್ನೆಲೆಯಲ್ಲಿ ಮೆಮೋನ್ ಪರ ವಕೀಲರು ಮತ್ತೆ ಸುಪ್ರೀಂ ಕೋರ್ಟ್‌ನಲ್ಲಿ ಕ್ಯುರೇಟಿವ್ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ನ್ಯಾಯಾಲಯ ಇಂದು ಕೈಗೆತ್ತಿಕೊಂಡಿದ್ದು ವಾದ-ಪ್ರತಿವಾದ ಆಲಿಸಿ ಅರ್ಜಿಯನ್ನು ವಜಾಗೊಳಿಸಿತು. ಇದರಿಂದಾಗಿ ಈ ಮೊದಲು ನಿಗದಿಪಡಿಸಿದಂತೆ ಜುಲೈ 30 ರಂದು ಮೆಮೋನ್‌ನನ್ನು ಗಲ್ಲಿಗೇರಿಸುವುದು ಖಚಿತವಾದಂತಾಗಿದೆ.

Write A Comment