ರಾಷ್ಟ್ರೀಯ

ಜಮ್ಮು–ಕಾಶ್ಮೀರಕ್ಕೆ ಭೇಟಿ ನೀಡಿದ ಪ್ರಧಾನಿ; ಈಗ ಎಂಥೆಂಥ ಅಳಿಯಂದಿರಿದ್ದಾರೆ; ಮೋದಿ ಪ್ರಶ್ನೆ

Pinterest LinkedIn Tumblr

modiwebಜಮ್ಮು (ಐಎಎನ್‌ಎಸ್‌): ಗಡಿಯಲ್ಲಿ ಮತ್ತೆ ಪಾಕ್‌ ಕದನ ವಿರಾಮ ಉಲ್ಲಂಘಿಸಿರುವ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಕಣಿವೆ ರಾಜ್ಯ ಜಮ್ಮು–ಕಾಶ್ಮೀರಕ್ಕೆ ಭೇಟಿ ನೀಡಿದರು.  ಇಲ್ಲಿ ನಡೆದ ಮಾಜಿ ಕಾಂಗ್ರೆಸ್‌ ಸಚಿವ, ಸಂಸದ ಗಿರ್ಧಾರಿ ಲಾಲ್‌ ಡೋಗ್ರಾ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿದರು.

‘ಗಿರ್ಧಾರಿ ಲಾಲ್‌ ಅವರು ಸ್ವಜನಪಕ್ಷಪಾತವಿಲ್ಲದೆ ದೇಶಕ್ಕಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದ್ದಾರೆ. ಹಣ ಮತ್ತು ಅಧಿಕಾರದ ಆಸೆ ಇಲ್ಲದ ರಾಜಕೀಯ ಕಾಲಘಟ್ಟಕ್ಕೆ ಸೇರಿದವರು ಅವರು.  ಅವರೆಂದೂ ತಮ್ಮ ಕುಟುಂಬವರನ್ನು ರಾಜಕೀಯಕ್ಕೆ ಕರೆತರಲಿಲ್ಲ. ಅಳಿಯ ಅರುಣ್‌ ಜೇಟ್ಲಿ ಅವರಿಗೂ ನೆರವಾದವರಲ್ಲ ಎಂದ ಅವರು, ಈಗ ಎಂಥೆಂಥ ಅಳಿಯಂದಿರನ್ನು ನೋಡುತ್ತಿದ್ದೇವೆ ಎಂದು ಪರೋಕ್ಷವಾಗಿ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್‌ ವಾದ್ರಾ  ಅವರನ್ನು ಪ್ರಸ್ತಾಪಿಸಿದರು.

ರಾಜಕೀಯದಲ್ಲಿ ಅಸ್ಪೃಶ್ಯತೆ ಸಲ್ಲ. ಎಲ್ಲರ ಕೊಡುಗೆಯನ್ನೂ ಗೌರವಿಸಬೇಕು ಎಂದ ಅವರು, ದೇಶದ ಪರಂಪರೆ ಎಲ್ಲರಿಗೂ ಸಮಾನವಾದುದು. ರಾಜಕೀಯ ಉದ್ದೇಶಕ್ಕಾಗಿ ಅದನ್ನು ಒಡೆಯುವುದು ಸರಿಯಲ್ಲ ಎಂದರು.

Write A Comment