ರಾಷ್ಟ್ರೀಯ

11 ವರ್ಷದ ಬಾಲಕನ ‘ಪೈಲೆಟ್’ ಆಗುವ ಕನಸು ಈಡೇರಿಸಿದ ವಾಯು ಸೇನೆ

Pinterest LinkedIn Tumblr

7169Pilot-of-IAFಚೆನ್ನೈ: ಮುಂದೆ ಪೈಲಟ್ ಆಗಬೇಕೆಂಬ ಕನಸು ಕಂಡಿದ್ದ ಆ 11 ವರ್ಷದ ಬಾಲಕ ಥಲೇಸೆಮಿಯಾ ಎಂಬ ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿದ್ದಾನೆ. ಆತನ ಕನಸನ್ನು ಈಡೇರಿಸಿರುವ ಭಾರತೀಯ ವಾಯು ಸೇನೆ ಒಂದು ದಿನದ ಮಟ್ಟಿಗೆ ಆತನನ್ನು ‘ಗೌರವ ಪೈಲೆಟ್’ ಮಾಡಿದೆ.

ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆ ಈ ನಿಟ್ಟಿನಲ್ಲಿ ಭಾರತೀಯ ವಾಯು ಸೇನೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದು, ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಹಿರಿಯ ಅಧಿಕಾರಿಗಳು, 33 ಮಂದಿ ಸ್ಟ್ವಾಡ್ರನ್ ಗಳ ಸಮ್ಮುಖದಲ್ಲಿ ಬಾಲಕ ಮುಕಿಲೇಶ್ ನ ಪೈಲೆಟ್ ಕನಸನ್ನು ನನಸು ಮಾಡಿದ್ದಾರೆ. ಪೈಲೆಟ್ ಗಳು ಧರಿಸುವ ಉಡುಪು, ಬ್ಯಾಡ್ಜ್, ಕ್ಯಾಪ್ ಎಲ್ಲವನ್ನೂ ಬಾಲಕನಿಗೆ ನೀಡಲಾಗಿತ್ತು ಎಂದು ವಾಯು ಸೇನೆ ವಕ್ತಾರರು ತಿಳಿಸಿದ್ದಾರೆ.

ಮುಕಿಲೇಶ್ ಗೆ ಕೊಯಮತ್ತೂರಿನ ವಾಯು ಸೇನೆ ನೆಲೆಯಲ್ಲಿ ಪೈಲೆಟ್ ಪಟ್ಟ ಪ್ರದಾನ ಮಾಡಿದ ಬಳಿಕ ಆತನನ್ನು ಸೇನೆಯ ನಿಯಾಮನುಸಾರದಂತೆ ಗೌರವಪೂರ್ವಕವಾಗಿ ವಿಮಾನದೊಳಕ್ಕೆ ಕರೆದುಕೊಂಡು ಹೋಗಲಾಗಿದ್ದು, ಏರ್ ಟ್ರಾಫಿಕ್ ಕಂಟ್ರೋಲ್ ಜೊತೆ ಮಾತನಾಡುವ ಅವಕಾಶವನ್ನೂ ಒದಗಿಸಲಾಗಿತ್ತು. ಈ ವೇಳೆ ಬಾಲಕನ ಮುಖದಲ್ಲಿ ಆನಂದ ತುಂಬಿ ತುಳುಕುತ್ತಿದ್ದು, ಇದನ್ನು ಕಂಡು ತಮ್ಮಗಳಿಗೂ ಆಪಾರ ಸಂತೋಷವಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

Write A Comment