ರಾಷ್ಟ್ರೀಯ

ಪ್ರಧಾನಿ ಮೋದಿ ಹಾಗೂ ಅಮಿತ್‌ಷಾ ಪೋಸ್ಟರ್ ಗೆ ಮಸಿ

Pinterest LinkedIn Tumblr

Modi-an-amith-shah

ಕಾನ್ಪುರ, ಜು.11: ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ಷಾ ಅವರ ಪೋಸ್ಟರ್ ಮತ್ತು ಬ್ಯಾನರ್‌ಗಳಲ್ಲಿರುವ ಇಬ್ಬರು ನಾಯಕರ ಭಾವಚಿತ್ರಗಳಿಗೆ ಮಸಿ ಬಳಿದಿರುವ ಘಟನೆ ಕಾನ್ಪುರದಲ್ಲಿ ನಡೆದಿದೆ.

ರಾಜ್ಯ ಬಿಜೆಪಿ ನಾಯಕರ ಜೊತೆ ಸಭೆ ನಡೆಸಲು ಇಂದು ಅಮಿತ್ ಷಾ ಇಲ್ಲಿಗೆ ಬರುವವರಿದ್ದರು. ಅದಕ್ಕಾಗಿ ಕಾರ್ಯಕರ್ತರು ಬೀದಿ ಬೀದಿಯಲ್ಲಿ ಪ್ರಧಾನಿ ಮೋದಿ ಹಾಗೂ ಅಮಿತ್ ಷಾರ ಫೋಟೋಗಳನ್ನೊಳಗೊಂಡ ದೊಡ್ಡ ದೊಡ್ಡ ಬ್ಯಾನರಗಳು, ಪೋಸ್ಟರ್‌ಗಳನ್ನು ಕಟ್ಟಿದ್ದರು. ಈ ಎಲ್ಲಾ ಪೋಸ್ಟರ್, ಬ್ಯಾನರ್‌ಗಳಲ್ಲಿನ ಮೋದಿ ಹಾಗೂ ಷಾ ಅವರ ಭಾವಚಿತ್ರಗಳಿಗೆ ಮಸಿ ಬಳಿಯಲಾಗಿದೆ. ಯಾರೋ ಅಪರಿಚಿತ ದುಷ್ಕರ್ಮಿಗಳು ಈ ಕೆಲಸ ಮಾಡಿದ್ದಾರೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಸುರೇಂದ್ರ ಮೈಥಾನಿ ಹೇಳಿದ್ದಾರೆ.

ಪೊಲೀಸರಿಗೆ ದೂರು ನೀಡಲಾಗಿದ್ದು ಈ ಪ್ರಕರಣದ ಆರೋಪಿಗಳನ್ನು ಇನ್ನಷ್ಟೆ ಪಠಿತ್ತೆ ಹಚ್ಚಬೇಕಾಗಿದೆ. 2017ರ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಇಂದು ಷಾ ರಾಜ್ಯ ನಾಯಕರ ಜೊತೆ ಚರ್ಚಿಸುವ ಕಾರ್ಯಕ್ರಮವಿದೆ.

Write A Comment