ರಾಷ್ಟ್ರೀಯ

ಮೋದಿ ಆರು ದೇಶಗಳ ಪ್ರವಾಸ; ರಷ್ಯಾದಲ್ಲಿ ನವಾಜ್ ಶರೀಫ್ ಜೊತೆ ಮಾತುಕತೆ

Pinterest LinkedIn Tumblr

Nepal-South-Asia-Summ_Richನವದೆಹಲಿ: ರಷ್ಯಾದ ಉಫಾದಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಘದ ವಾರ್ಷಿಕ ಸಮಾವೇಶದಲ್ಲಿ ಭಾಗವಹಿಸಲು ಅಲ್ಲಿಗೆ ತೆರಳಲಿರುವ ಭಾರತ ಪ್ರಧಾನಿ ನರೇಂದ್ರ ಮೋದಿ, ಸಮಾವೇಶದ ಜೊತೆ ಜೊತೆಗೇ ಪಾಕಿಸ್ತಾನಿ ಪ್ರಧಾನಿ ನವಾಜ್ ಶರೀಫ್ ಅವರನ್ನು ಜುಲೈ ೧೦ರಂದು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.

ಪ್ರಧಾನಿಯವರ ರಷ್ಯಾ ಪ್ರವಾಸದ ಕೊನೆಯ ದಿನದಂದು ಈ ಭೇಟಿ ನಡೆಯಲಿದೆ. ಮೋದಿ ಅವರ ಮ್ಯಾರಥಾನ್ ಆರು ದೇಶಗಳ ಪ್ರವಾಸದ ಮೂರನೇ ದೇಶ ರಷ್ಯಾ.

ಈ ಇಬ್ಬರು ಪ್ರಧಾನಿಗಳ ನಡುವಿನ ಮೂರನೆ ಭೇಟಿ ಇದಾಗಲಿದೆ. ಮೊದಲು ಮೋದಿ ಅವರು ಅಧಿಕಾರ ಪ್ರಮಾಣವಚನ ಸಮಾರಂಭದಲ್ಲಿ ನವಾಜ್ ಶರೀಫ್ ಮೋದಿ ಅವರ ಕೈಕುಲುಕುಕಿದ್ದರು, ನಂತರ ಖಟ್ಮಂಡುವಿನಲ್ಲಿ ಕಳೆದ ವರ್ಷ ನಡೆದ ಸಾರ್ಕ್ ಸಮ್ಮೇಳನದಲ್ಲಿ ಕೂಡ ಭೇಟಿಯಾಗಿದ್ದರು. ಭಾರತ ಮತ್ತು ಪಾಕಿಸ್ತಾನ ನಡುವೆ ಹದಗೆಟ್ಟ ಸಂಬಂಧದ ಈ ಸ್ಥಿತಿಯಲ್ಲಿ ಈ ಸಭೆ ನಡೆಯುತ್ತಿರುವುದು ಕುತೂಹಲ ಕೆರಳಿಸಿದೆ. ಪಾಕಿಸ್ತಾನದ ರಾಯಭಾರಿ ಹುರಿಯತ್ ನಾಯಕರನ್ನು ಭೇಟಿ ಮಾಡಿದ್ದ ಹಿನ್ನಲೆಯಲ್ಲಿ ವಿದೇಶಾಂಗ ಕಾರ್ಯದರ್ಶಿಗಳ ಉನ್ನತ ಮಟ್ಟದ ಮಾತುಕತೆಗಳನ್ನು ರದ್ದುಪಡಿಸಲಾಗಿತ್ತು.

Write A Comment