ರಾಷ್ಟ್ರೀಯ

ಮೋದಿ ವಿರುದ್ಧದ ಟ್ವೀಟ್‌: ಹೇಳಿಕೆಗೆ ಬದ್ಧ ಎಂದು ನಟಿ ಶೃತಿ ಸೇತ್

Pinterest LinkedIn Tumblr

0507-2-2-SOCIAL-MEDIA-KEYBOARDಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದ ‘ಸೆಲ್ಫೀವಿತ್‌ಡಾಟರ್‌‌’ ಟ್ವೀಟರ್ ಅಭಿಯಾನಕ್ಕೆ ಟೀಕಿಸಿದ್ದ ಕಿರುತೆರೆ ನಟಿ ಶೃತಿ ಸೇತ್‌ಗೆ ಪ್ರತಿಕ್ರಿಯೆಗಳ ಪ್ರವಾಹವೇ ಹರಿದು ಬಂದಿತ್ತು. ನಂತರ ತನ್ನ ಮೂಲ ಟ್ವೀಟ್ ಅನ್ನು ತೆಗೆದು ಹಾಕಿದ್ದ ಇವರು, ಇದೀಗ ದೇಶಕ್ಕೊಂದು ಅವರು ಬಹಿರಂಗ ಪತ್ರ ಬರೆದಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಮತ್ತೊಂದು ಟ್ರೆಂಡ್ ಆಗಿದೆ.

ಮೋದಿಗೆ ‘ಸೆಲ್ಪೀ ಗೀಳು’ ಎಂದಿದ್ದ ಶೃತಿ ಟ್ವೀಟ್‌ಗೆ ಎರಡು ದಿನಗಳಲ್ಲಿ ಲಕ್ಷಾಂತರ ಟೀಕೆಗಳು ವ್ಯಕ್ತವಾಗಿದ್ದು, ನಿಂದನಾ ಸಂದೇಶಗಳೂ ಹರಿದು ಬಂದಿದ್ದವು.

ಪತ್ರದಲ್ಲಿ ಏನಿದೆ?: ಒಬ್ಬಿಬ್ಬರಿಂದ ದೇಶದಲ್ಲಿ ಯಾವ ಬದಲಾವಣೆಯನ್ನೂ ತರಲು ಸಾಧ್ಯವಿಲ್ಲದ ಕಾರಣ, ಇಡೇ ದೇಶವನ್ನು ಉದ್ದೇಶಿಸಿ ಪತ್ರ ಬರೆಯುತ್ತಿದ್ದೇನೆ, ಎಂದೇ ಪತ್ರ ಆರಂಭಿಸಿರುವ ಶೃತಿ, ‘ಹೆಣ್ಣು ಭ್ರೂಣ ರಕ್ಷಣೆಗಾಗಿ ಮೋದಿ ಆರಂಭಿಸಿದ ಅಭಿಯಾನವನ್ನು ಟೀಕಿಸಿ ತಪ್ಪು ಮಾಡಿದೆ,’ ಎಂದು ಹೇಳಿಕೊಂಡಿದ್ದಾರೆ. ಆದರೆ, ‘ಸಂವೇದನಾರಹಿತ ಅಭಿಯಾನಕ್ಕಿಂತ, ಪುರುಷ ಧೋರಣೆಗಳು ಕಾಲಘಟ್ಟಕ್ಕೆ ಹೊಂದಿಕೊಳ್ಳುವಂತೆ ಬದಲಾಗಬೇಕು’, ಎಂದು ಕರೆ ನೀಡಿದ್ದಾರೆ.

‘ಟ್ಟೀಟ್‌ಗೆ ಬಂದ ಪ್ರತಿಕ್ರಿಯೆಯಲ್ಲಿ ನನ್ನ ಕುಟುಂಬ, ನನ್ನ ಮುಸ್ಲಿಂ ಪತಿ, 11 ತಿಂಗಳ ಮಗಳನ್ನೂ ಟೀಕಿಸಲಾಗಿದೆ. ಅದೂ ಕೇವಲ ಪ್ರಧಾನಿಗೆ ಸೆಲ್ಫೀ ಗೀಳು ಎಂದು ಕರೆದಿದ್ದಕ್ಕೆ ಇಂಥ ಟೀಕೆಗಳನ್ನು ಎದುರಿಸಬೇಕಾಗಿ ಬಂದಿದ್ದು ದುರಂತ,’ ಎಂದು ವ್ಯಥೆ ಪಟ್ಟು ಕೊಂಡಿದ್ದಾರೆ.

‘ಭಾರತೀಯ ನಾಗರಿಕರಾಗಿ ದೇಶದ ಪ್ರಧಾನಿ ಕೈಗೊಂಡ ಅಭಿಯಾನವನ್ನು ಟೀಕಿಸುವ ಹಕ್ಕಿಲ್ಲವೇ?,’ ಎಂದು ಪ್ರಶ್ನಿಸಿರುವ ಶೃತಿ, ಟೀಕೆಗಳಿಂದ ‘ಮತ್ತೊಬ್ಬರ ಮಗಳ ಮಾನ ಹಾನಿ ಮಾಡಿದ್ದೀರಿ,’ ಎಂದು ಖಂಡಿಸಿದ್ದಾರೆ.

‘ನೀನು ಅತ್ಯಾಚಾರಕ್ಕೆ ಹುಟ್ಟಿದವಳಾ? ವೈಶ್ಯೆನಾ? ನಿನ್ನ ಮಗಳನ್ನೂ ಅದೇ ವೃತ್ತಿಗೆ ತರಲು ಇಚ್ಛಿಸುತ್ತೀಯಾ?….ಇಂಥ ನೂರಾರು ಪ್ರಶ್ನೆಗಳ ಮಹಾಪೂರವೇ ಹರಿದಿಬಂದಿವೆ. ಇಂಥ ದ್ವೇಷಪೂರಿತ ಟ್ವೀಟ್‌ಗಳು ನಿಮ್ಮ ಮಗಳಿಗೆ ಬಂದರೆ ನಿಮ್ಮ ಪ್ರತಿಕ್ರಿಯೆ ಹೇಗಿರುತ್ತೆ?’, ಎಂದು ಪ್ರಶ್ನಿಸಿ, ‘ಹೆಣ್ಣು ಭ್ರೂಣವನ್ನು ಉಳಿಸುವ ಜತೆಗೆ ಆಕೆಗೆ ಸಲ್ಲಬೇಕಾದ ಗೌರವವನ್ನೂ ನೀಡುವುದೂ ಪುರುಷರ ಕರ್ತವ್ಯ,’ ಎನ್ನುವ ಮೂಲಕ ಪುರುಷ ಧೋರಣೆಗಳನ್ನು ವಿರೋಧಿಸುವ ಜತೆಗೆ, ತಮ್ಮ ಮೊದಲ ಟ್ವೀಟ್ ಅನ್ನು ಶೃತಿ ಸಮರ್ಥಿಸಿಕೊಂಡಿದ್ದಾರೆ.

Write A Comment