ರಾಷ್ಟ್ರೀಯ

ಮನೆಗೆ ಒಳಾಂಗಣದ ಅಲಂಕಾರಕ್ಕಿಲ್ಲಿವೆ ಟಿಪ್ಸ್

Pinterest LinkedIn Tumblr

house-1ಒಂದು ಕಾಲದಲ್ಲಿ ಮನೆಕಟ್ಟಿನೋಡು ಮದುವೆ ಮಾಡಿನೋಡು ಎಂಬ ಗಾದೆ ಚಾಲ್ತಿಯಲ್ಲಿತ್ತು. ಆದರೆ, ಈಗ ಕಾಲ ಬದಲಾಗಿದೆ ಅದಕ್ಕೆ ತಕ್ಕಹಾಗೆ ಎಲ್ಲವೂ ಬದಲಾಗಿದೆ. ಮನೆಕಟ್ಟುವುದು ದೊಡ್ಡ ವಿಷಯವೇನಲ್ಲ, ಅದನ್ನು ಅಲಂಕರಿಸುವುದೇ ಇಂದಿನ ಹೊಸ ಟ್ರೆಂಡ್. ಮನೆ ಹೇಗೆ ಇದ್ದರೂ ಅದು ಈ ಮಾಡರ್ನ್ ಯುಗಕ್ಕೆ ಹೊಂದಿಕೊಳ್ಳುವಂತಿರಬೇಕು. ಯಾವ ರೂಂನಲ್ಲಿ ಏನಿರಬೇಕು, ಹಾಲ್‍ನಲ್ಲಿ ಏನಿರಬಾರದು, ಯಾವ ವಸ್ತುಗಳನ್ನು ಹೇಗೆ ಜೋಡಿಸಿರಬೇಕು, ಎಷ್ಟು ವಸ್ತುಗಳಿರಬೇಕು ಹೀಗೆ ಮನೆಯ ಅಲಂಕಾರವೂ ಕೂಡ ಒಂದು ಫ್ಯಾಷನ್ ಆಗಿ ಬದಲಾಗಿದೆ.  ಇತ್ತೀಚೆಗೆ ಪಟ್ಟಣಗಳಲ್ಲಿ ಬೆಳೆಯುತ್ತಿರುವ ಜನಸಂಖ್ಯೆಯಿಂದಾಗಿ ಹಳೆಯ ಮನೆಗಳನ್ನೆಲ್ಲಾ ಕೆಡವಿ ಹಲವಾರು ಮಹಡಿಗಳ ಅಪಾರ್ಟ್‍ಮೆಂಟ್‍ಗಳನ್ನು ನಿರ್ಮಿಸುತ್ತಿದ್ದಾರೆ. ಇದರಲ್ಲಿ ಸಾಮಾನ್ಯವಾಗಿ ಎರಡರಿಂದ ಮೂರು ಕೋಣೆಗಳಿದ್ದು, ಇದನ್ನು ಫ್ಲ್ಯಾಟ್ ಎನ್ನಲಾಗುತ್ತದೆ. ಹಿಂದಿನ ಕಾಲದಲ್ಲಿ ಮನೆ ಸಣ್ಣದಾದರೂ, ಎಲ್ಲರೂ ಒಟ್ಟಿಗೆ ಜೀವನ ನಡೆಸುತ್ತಿದ್ದರು, ಆದರೆ ಈಗ ಕಾಲ ಬದಲಾಗಿದೆ, ಮೂರು ಕೋಣೆಗಳಿರುವ ಫ್ಲ್ಯಾಟ್ ನಾಲ್ಕು ಜನರಿರುವ ಕುಟುಂಬಕ್ಕೆ ಸಾಕಾಗುತ್ತಿಲ್ಲ.  ಆದರೂ ಇದನ್ನು ನಿಭಾಯಿಸಬೇಕಾಗಿದೆ.

ಇದರಿಂದಾಗಿ ಮನೆಯನ್ನು ಅಲಂಕರಿಸುವಾಗ ತುಂಬಾ ಎಚ್ಚರಿಕೆ ವಹಿಸಿ ಹೆಚ್ಚಿನ ಜಾಗ ಉಳಿಯುವಂತೆ ನೋಡಿಕೊಳ್ಳಬೇಕು.  ಇಂದಿನ ದಿನಗಳಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡಗಳ ಫ್ಲ್ಯಾಟ್‍ಗಳಲ್ಲಿ ಮೊದಲಿನಂತೆ ಹೆಚ್ಚಿನ ಜಾಗ ಕೂಡ ಇಲ್ಲದಾಗಿದೆ. ಪ್ರತಿಯೊಬ್ಬರಿಗೂ ಐಷಾರಾಮಿ ಫ್ಲ್ಯಾಟ್‍ಗಳನ್ನು ಖರೀದಿಸುವುದು ಸಾಧ್ಯವಾಗದ ಮಾತು. ಇದರಿಂದ ನೀವು ಜಾಣ್ಮೆಯಿಂದ ಕೋಣೆಗಳನ್ನು ಅಲಂಕಾರ ಮಾಡಿ ಹೆಚ್ಚಿನ ಜಾಗ ಉಳಿಯುವಂತೆ ನೋಡಿಕೊಳ್ಳುವುದರ ಜೊತೆಗೆ ಸ್ವಚ್ಛತೆಗೂ ಆದ್ಯತೆ ನೀಡುವುದನ್ನು ನೋಡಿಕೊಳ್ಳಿ. ಅಲಂಕಾರಕ್ಕೆ ಮೊದಲು ಸಣ್ಣ ಕೋಣೆಗಳನ್ನು ಸಿಂಗರಿಸುವಾಗ ಮಾಡುವಂತಹ ಕೆಲವೊಂದು ಸಣ್ಣ ತಪ್ಪುಗಳ ಬಗ್ಗೆ ಎಚ್ಚರಿಕೆ ವಹಿಸಬೇಕು.  ಹೌದು, ಕೋಣೆಯನ್ನು ಸರಳವಾಗಿಡಬೇಕೆಂದು ನೀವು ಬಯಸಿದರೂ ಅದರಲ್ಲಿ ಸಾಮಗ್ರಿಗಳು ತುಂಬಿ ಇಕ್ಕಟ್ಟಾಗಬಹುದು. ನೀವು ಯಾರಾದರೂ ಇಂಟೀರಿಯರ್ ಡೆಕೋರೇಟರ್‍ನ್ನು ಸಂಪರ್ಕಿಸಿ ಅಥವಾ ನೀವೇ ಕೋಣೆಗಳನ್ನು ಅಲಂಕರಿಸಿ. ಕೋಣೆಗಳನ್ನು ಅಲಂಕರಿಸುವಾಗ ಮಾಡುವಂತಹ ಕೆಲವೊಂದು ಸಣ್ಣ ತಪ್ಪುಗಳ ಬಗ್ಗೆ ನಿಮಗೆ ಅರಿವಿದ್ದರೆ ಆಗ ಅಂತಹ ತಪ್ಪುಗಳು ಪುನರಾವರ್ತನೆಯಾಗುವುದು ತಪ್ಪುತ್ತದೆ.

ಗೋಡೆ  ಅಂದವನ್ನು ಹೆಚ್ಚಿಸಿ :

ಮಾನವನ ಬದುಕಿಗೆ ಆಸರೆಯಾಗಿರುವ ಮನೆಯ ಗೋಡೆಯ ಅಲಂಕಾರಕ್ಕೆ ಮನಸು ಸದಾ ತುಡಿಯುತ್ತಲೇ ಇರುತ್ತದೆ. ಅದಕ್ಕೆ ಬಣ್ಣ ಬಳಿಯುವುಐದರಿಂದ ಹಿಡಿದು, ಅದರ ಮೇಲೆ ನೇತು ಹಾಕುವ ಫೆÇೀಟೋಗಳು, ಗಡಿಯಾರಗಳು, ಅಲಂಕಾರಿಕ ಉಪಕರಣಗಳು ಹೇಗಿರಬೇಕೆಂದು ಮನಸು ಚಿಂತಿಸುತ್ತಲೇ ಇರುತ್ತದೆ. ಮನೆಯ ಗೋಡೆಗಳ ಅಲಂಕಾರದ ವಿವಿಧ ವಿನ್ಯಾಸಗಳನ್ನು ತಿಳಿಸುವ ಉಚಿತ ಮೊಬೈಲï ತಂತ್ರಾಂಶಗಳು ಲಭ್ಯವಿದೆ. ನಾನಾ ನಮೂನೆಯ ಅಲಂಕಾರದ ಟಿಪ್ಸ್‍ಗಳನ್ನು ಆ ಆ್ಯಪ್ ಹೊಂದಿದೆ.  ಸೀನರಿ, ವಾಲ್‍ಕ್ಲಾಕ್ ಹಾಗೂ ಗೋಡೆಯ ಅಲಂಕಾರಿಕ ಚಿತ್ರಗಳ ಆಯ್ಕೆಯಲ್ಲಿ ಹೆಚ್ಚು ಗಮನಹರಿಸಿ.  ಕರ್ಟನ್‍ಗಳ ಅಳತೆಗಳ ಬಗ್ಗೆ ಗಮನಹರಿಸಿ     ದೊಡ್ಡದಾದ ಕರ್ಟನ್ ಅನ್ನು ಸಣ್ಣ ಕೋಣೆಗಳ ಅಲಂಕಾರಕ್ಕೆ ಬಳಸಿಕೊಳ್ಳುವುದು ಮಾಡುವಂತಹ ಸಣ್ಣ ತಪ್ಪು. ಉದ್ದನೆಯ ಕರ್ಟನ್‍ಗಳಿದ್ದರೆ ಆಗ ನಿಮ್ಮ ನೆಲದ ಅರ್ಧಭಾಗವನ್ನು ಅದು ಆವರಿಸಿಕೊಳ್ಳುತ್ತದೆ ಮತ್ತು ಇಕ್ಕಟ್ಟಾದಂತೆ ಕಾಣಿಸುತ್ತದೆ.

ಗೋ ಗ್ರೀನ್ :

ಮನೆ ಹೊರಗೆ ಮತ್ತು ಒಳಗೆ ತುಂಬಾ ಹಸಿರು ಗಿಡಗಳಿದ್ದರೆ ತಾಜಾ ಮತ್ತು ಉಲ್ಲಾಸದ ಅನುಭವವನ್ನು ನೀಡುತ್ತವೆ. ಹಾಗೂ ಮನೆಯ ಸೌಂದರ್ಯವನ್ನೂ ಹೆಚ್ಚಿಸುತ್ತವೆ. ಆದರೆ, ಮನೆಯ  ಹೊರಭಾಗದಲ್ಲಿ ಯಾವ ಗಿಡಗಳಿರಬೇಕು ಹಾಗೂ ಒಳ ಭಾಗದಲ್ಲಿ ಯಾವ ಬಗೆಯ ಪಾಟ್‍ಗಳನ್ನು ಬಳಸುತ್ತೀರಿ ಎಂಬುದರ ಮೇಲೆ ನಿರ್ಧಾರವಾಗುತ್ತದೆ. ಕೆಲವು ಜಾಗರೂಕತೆಯ ಯೋಜನೆ ಹಾಕಿಕೊಳ್ಳುವುದರಿಂದ ಮತ್ತು ನಿಮ್ಮ ಮನೆಯ ಬಲಬದಿಯಲ್ಲಿ ಕೆಲವು ಗಿಡಗಳನ್ನು ಇಟ್ಟರೆ ನಿಮ್ಮ ಮನೆ ಹಸಿರು ನಂದನವನದಂತೆ ಕಂಗೊಳಿಸಿದರೆ ಅಚ್ಚರಿಯಿಲ್ಲ. ನಿಮ್ಮ ಕನಸಿನ ಮನೆಯನ್ನು ಅಲಂಕಾರ ಮಾಡುವಾಗ ಹಸಿರು ಗಿಡಗಳಿಗೂ ಜಾಗ ಕೊಡಿ. ಹೂದಾನಿಯ ಒಳಗೆ ಕೆಲವು ಹೂಗಳನ್ನು ಇಡುವ ಸಾಂಪ್ರದಾಯಿಕ ಅಲಂಕಾರದ ಬದಲು ಕೊಂಚ ವಿಭಿನ್ನವಾಗಿ ಯೋಚಿಸಿ. ನಿಮ್ಮ ಕೋಣೆಯ ಮೂಲೆಯೊಂದರಲ್ಲಿ ಶೆಲ್ಫ್‍ಗಳನ್ನು ಇಡಿ. ಇದರಲ್ಲಿ ಗಿಡಗಳನ್ನು ಮತ್ತು ಪುಸ್ತಕಗಳನ್ನು ಇಡಿ. ಇದು ಕೋಣೆಗೆ ತಾಜಾ ಲುಕ್ ನೀಡುತ್ತದೆ.
ಹೀಗೆ ಮನೆಯ ಅಂದ ಹೆಚ್ಚಿಸಲು ಇರುವ ಜಾಗದಲ್ಲೇ ಸರಳವಾಗಿ ಪ್ರಯತ್ನಿಸಿ. ಒಂದು ವಿಷಯವನ್ನು ಸದಾ ನೆನಪಿಡಿ. ಅಂದದ ಮನೆ ನಿಮ್ಮ ಜೀವನಶೈಲಿಯನ್ನು ಪ್ರತಿಬಿಂಬಿಸುವಂತಿರಲಿ. ಆಡಂಬರಕ್ಕೆ ಹೆಚ್ಚು ಒತ್ತು ಕೊಡದೆ ಸರಳತೆಗೆ ಮೊರೆಹೋಗಿ. ಅನಾವಶ್ಯಕ ವಸ್ತುಗಳನ್ನು ಸ್ಟೋರ್ ರೂಂ ಸೇರಿಸಿಬಿಡಿ. ಆಗ ಅಂದದ ಜೊತೆಗೆ ಮನೆಯ ಲುಕ್ ಕೂಡ ಆಕರ್ಷಕವಾಗಿರುತ್ತದೆ.

ನಿಮ್ಮ ಮನೆಯೊಳಗಿರಲಿ ಅಲೋವೆರಾ :

ಇದೇನಪ್ಪಾ ಎಂದು ಅಚ್ಚರಿ ಪಡಬೇಡಿ ಹೌದು.. ಇತ್ತೀಚಿನ ವೈದ್ಯಕೀಯ ವರದಿಗಳ ಪ್ರಕಾರ ಅಲೋವೆರಾ (ಲೋಳೆಸರ) ಇದು ಆರೋಗ್ಯದ ದೃಷ್ಟಿಯಿಂದ ಮನುಷ್ಯನಿಗೆ ಸಂಜೀವಿನಿ ಆಗಿದೆ ಎಂದು ದೃಢಪಟ್ಟಿದೆ. ನಮ್ಮ ಕೈ ತೋಟಗಳಲ್ಲಿ, ಕಾಡಿನಲ್ಲಿ ಬೆಳೆಯುತ್ತಿದ್ದ ಈ ಸಸಿಯನ್ನು  ಕೆಲ ಬುದ್ಧಿಜೀವಿಗಳು ಇತ್ತೀಚಿನ ದಿನಗಳಲ್ಲಿ ತಮ್ಮ ಮನೆಯ ಒಳಾಂಗಣಗಳಲ್ಲಿ ಪಾಟ್‍ಗಳಲ್ಲಿಟ್ಟು ಬೆಳೆಸಿಕೊಳ್ಳುತ್ತಿದ್ದಾರೆ.  ಆರೋಗ್ಯದ ಸದುದ್ದೇಶವನ್ನಿಟ್ಟುಕೊಂಡು ಮನೆಗಳಲ್ಲಿ ಇದನ್ನು ಬೆಳೆಸಲಾಗುತ್ತಿದೆ. ಮನೆಗಳಲ್ಲಿ ಏರ್‍ಫ್ರೆಷನರ್ ಥರ ಕಾರ್ಯ ನಿರ್ವಹಿಸುತ್ತದೆ. ಮನೆ ಒಳಗಡೆ ನಾವು ಉಸಿರಾಡುವ ಗಾಳಿಯನ್ನು ಶುದ್ಧಗೊಳಿಸುತ್ತದೆ. ಗಾಳಿಯಲ್ಲಿರುವಂತಹ ವಿಷಕಾರಿ ಅಂಶಗಳನ್ನು ಹೀರಿಕೊಂಡು ಆಮ್ಲಜನಕವನ್ನು ಹೊರಹಾಕುತ್ತದೆ. ಇದರಿಂದ ಬಿಡುಗಡೆಯಾದ ಆಮ್ಲಜನಕ ನಮ್ಮ ಮೆದುಳನ್ನು ಆರೋಗ್ಯದಿಂದ ಕಾರ್ಯ ನಿರ್ವಹಿಸಲು ಸಹಕಾರಿ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಬೆಡ್‍ರೂಂನಲ್ಲಿ ಮಂದಬೆಳಕಿನ ಬೆಡ್‍ಲೈಟ್ ಇರಲಿ :

ನಮ್ಮ ದಿನನಿತ್ಯದ ಜಂಜಾಟಗಳಿಂದ ಉಂಟಾಗುವ ಮಾನಸಿಕ ಒತ್ತಡವನ್ನು ನೀಗಿಸಿಕೊಳ್ಳಲು ನಿದ್ರೆ ಅತ್ಯವಶ್ಯಕ. ಚಿಂತೆ ಇಲ್ಲದವನಿಗೆ ಸಂತೆಯಲ್ಲಿಯೂ ಕೂಡ ನಿದ್ದೆ ಬರುವುದು ಎಷ್ಟು ನಿಜವೋ ಅಷ್ಟೇ ಸುಳ್ಳು. ಕೆಲವರಿಗೆ ನಿದ್ದೆ ಬರಲು ಒಂದು ಸೀಮಿತ ಜಾಗದ ಪ್ರಶಾಂತ ವಾತಾವರಣದಲ್ಲಿ ಮಾತ್ರ ಸಾಧ್ಯ. ಒಂದು ಅಧ್ಯಯನದ ಪ್ರಕಾರ ನಾವು ಮಲಗುವ ಕೋಣೆಯಲ್ಲಿ ನೆಮ್ಮದಿಯ ವಾತಾವರಣ ಅತಿ ಮುಖ್ಯ. ಬಣ್ಣ ಬಣ್ಣದ ಬೆಡ್‍ಲೈಟ್‍ಗಳಿಂದ ಮನಸ್ಸಿಗೆ ಕಿರಿಕಿರಿ ಉಂಟಾಗುತ್ತದೆ. ಇದರಿಂದ ನಮ್ಮ ನಿದ್ದೆಯೂ ಹಾಳಾಗಬಹುದು.
ಮಾರುಕಟ್ಟೆಯಲ್ಲಿ ಕಣ್ಣಿಗೆ ಕುಕ್ಕುವಂತಹ ದುಬಾರಿ ವೆಚ್ಚದ ಲೈಟ್‍ಗಳನ್ನು ತಂದು ಬೆಡ್ ರೂಂ ಅಲಂಕರಿಸುವುದಕ್ಕಿಂತ ಸರಳವಾಗಿ ಬೆಳಕು ಕೊಡುವಂತಹ ಬಲ್ಪ್‍ಗಳನ್ನು ಅಳವಡಿಸಿಕೊಳ್ಳುವುದರಿಂದ ಮನಸ್ಸಿಗೆ ಮುದ ನೀಡಿ ಖಿನ್ನತೆಯನ್ನು ದೂರ ಮಾಡಿ, ಸುಖ ನಿದ್ದೆಯನ್ನು ತರುತ್ತದೆ ಎಂಬುದು ಸಂಶೋಧನೆಯಿಂದ ತಿಳಿದುಬಂದಿದೆ.

Write A Comment