ರಾಷ್ಟ್ರೀಯ

‘ಮಾರುತಿ’ ಟ್ಯಾಗ್ ಕೈ ಬಿಟ್ಟ ಸುಜುಕಿ; ಎಸ್-ಕ್ರಾಸ್ ಮೂಲಕ ಮಾರುಕಟ್ಟೆಗೆ ಕಾರು ಬಿಡುಗಡೆ

Pinterest LinkedIn Tumblr

S-crossನವದೆಹಲಿ: ಮಧ್ಯಮ ವರ್ಗದ ಭಾರತೀಯರಿಗೂ ಕೈಗೆಟುಕುವ ದರದಲ್ಲಿ ಕಾರುಗಳನ್ನು ನೀಡಿದ್ದು, ಮಾರುತಿ ಸುಜುಕಿ. ಇನ್ನು ಮುಂದೆ ಮಾರುತಿ ಸುಜುಕಿ ಕಂಪನಿಯ ದೊಡ್ಡ ಕಾರುಗಳಲ್ಲಿ ‘ಮಾರುತಿ’ ಟ್ಯಾಗ್ ಕಣ್ಮರೆಯಾಗಲಿದೆ.

ಯುವಜನರನ್ನು ದೃಷ್ಟಿಯಲ್ಲಿಟ್ಟುಕೊಂಡು ಸುಜುಕಿಯ ದೊಡ್ಡ ಕಾರುಗಳನ್ನು ತಯಾರಿಸುತ್ತಿದ್ದು ಕಾರಿನ ಮಾಡೆಲ್, ಲೋಗೋ, ಎಂಜಿನ್ ಗಾತ್ರಗಳು ಬದಲಾಗಿದೆ. ಈ ಕಾರುಗಳೆಲ್ಲಾ ‘ಎಸ್’ ಟ್ಯಾಗ್‌ ಮೂಲಕ ಮಾರುಕಟ್ಟೆಗೆ ಬರಲಿದೆ.

ಆಲ್ಟೋ, ಸ್ವಿಫ್ಟ್ ಮತ್ತು ವ್ಯಾಗನ್ಆರ್‌ನಂಥ ಸಣ್ಣ ಕಾರುಗಳು, ಡಿಸೈರ್ ಸಿಯಾಜ್‌ನಂಥ ಕಾರುಗಳ ಮುಂಭಾಗದಲ್ಲಿ ಮಾರುತಿ ಸುಜುಕಿ ಟ್ಯಾಗ್‌ಗಳಿರುತ್ತವೆ. ಆದರೆ, ನೆಕ್ಸಾದಿಂದ ಮಾರಾಟವಾಗುವ ಕಾರುಗಳಿಗೆ ಎಸ್ ಟ್ಯಾಗ್ ಇರಲಿದೆ ಎಂದು ಮಾರುತಿ ಸುಜುಕಿ ಕಾರ್ಯಕಾರಿ ನಿರ್ದೇಶಕ ಆರ್.ಎಸ್ ಖಲ್ಸಿ ತಿಳಿಸಿದ್ದಾರೆ.

‘ಈ ಆರ್ಥಿಕ ವರ್ಷದ ಅಂತ್ಯದ ವೇಳೆಗ ನೆಕ್ಸಾ ಸುಮಾರು 100 ಮಾರಾಟ ಮಳಿಗೆಗಳನ್ನು ಹೊಂದಲಿದ್ದು, ಅಲ್ಲಿ ಮಾರಾಟವಾಗುವ ಕಾರುಗಳಿಗೆ ಹೊಸ ಟ್ಯಾಗ್‌ಗಳಿರುತ್ತವೆ. ಹೊಸದಾಗಿ ಮಾರುಕಟ್ಟೆಗೆ ಬಿಡುಗಡೆಯಾಗುತ್ತಿರುವ ಎಸ್‌ಯುವಿ, ಹೆಚ್ಚಿನ ಬೆಲೆಯ ಕಾರುಗಳು ಹಾಗೂ ಪ್ರೀಮಿಯಂ ಸೆಡನ್‌ಗಳಿಗೆ ಈ ಹೊಸ ಟ್ಯಾಗ್‌ಗಳಿರುತ್ತವೆ,’ ಎಂದು ಖಲ್ಸಿ ಸ್ಪಷ್ಟಪಡಿಸಿದ್ದಾರೆ.

Write A Comment