ಅಂತರಾಷ್ಟ್ರೀಯ

ಆಫ್ರಿಕಾದಲ್ಲಿ ಕೊಹ್ಲಿ, ಅನುಷ್ಕಾ ಮೋಜು; ರಜೆಯ ಮಜ…

Pinterest LinkedIn Tumblr

virat-kohli_anushka-sharma

ನವದೆಹಲಿ, ಜು.6: ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಮತ್ತೆ ಜಾಲಿ ಮೂಡ್‌ನಲ್ಲಿದ್ದಾರೆ. ಬಾಳಸಂಗಾತಿಯಾಗುವ ನಟಿ ಅನುಷ್ಕಾ ಶರ್ಮಾಳೊಂದಿಗೆ ದಕ್ಷಿಣ ಆಫ್ರಿಕಾದಲ್ಲಿ ಕೊಹ್ಲಿ ರಜೆಯನ್ನು ಮಜವಾಗಿ ಕಳೆಯುತ್ತಿದ್ದಾರಂತೆ.

ಬಾಂಗ್ಲಾ ವಿರುದ್ಧ ನಡೆದ ಸರಣಿಯಲ್ಲಿ ಸೋಲನ್ನು ಕಾಣಲು ಟೀಂ ಇಂಡಿಯಾದ ನಾಯಕ ಎಂ.ಎಸ್. ಧೋನಿ ಅವರ ಎಡವಟ್ಟುಗಳೇ ಕಾರಣ ಎಂದು ಹರಿಹಾಯ್ದಿದ್ದ ಕೊಹ್ಲಿ ಇದೀಗ ಅನುಷ್ಕಾ ಶರ್ಮಾಳೊಂದಿಗೆ ಜಾಲಿಯಾಗಿ ಕಾಲಕಳೆಯುತ್ತಿದ್ದಾರಂತೆ.

ದಕ್ಷಿಣ ಆಫ್ರಿಕಾದ ಚೆಫ್ ಆಫ್ ದಿ ಸಬಿ ಅರ್ಥ್ ಲಾಡ್ಜ್‌ನಲ್ಲಿರುವ ಈಜುಕೊಳದಲ್ಲಿ ಎರಡು ಪ್ರಣಯ ಪಕ್ಷಿಗಳು ಈಜುತ್ತಾ ವಿಶ್ರಾಂತಿ ಪಡೆಯುತ್ತಿರುವ ಚಿತ್ರವನ್ನು ಸಾಮಾಜಿಕ ತಾಣದಲ್ಲಿ ಪ್ರಕಟಿಸಿದ್ದಾರೆ.

ನಾನು, ನನ್ನ ಪ್ರೀತಿಯೊಂದಿಗೆ ದಕ್ಷಿಣ ಆಫ್ರಿಕಾದಲ್ಲಿ ಕಾಲಕಳೆಯುತ್ತಿರುವುದು ಅದ್ಭುತ ಕ್ಷಣವಾಗಿದೆ. ಶೀಘ್ರದಲ್ಲೇ ವಾಪಸ್ ಬರ್ತೀವಿ. ಎಂಜಾಯ್ ಗಾಯ್ಸ್ ಎಂದು ಟ್ವೀಟ್ ಮಾಡಿದ್ದಾರೆ ವಿರಾಟ್.

Write A Comment