ರಾಷ್ಟ್ರೀಯ

ಯುವತಿಯನ್ನು ವಿವಸ್ತ್ರಗೊಳಿಸಿದ ಬೀದಿ ಕಾಮಣ್ಣರು ಮೊಬೈಲ್‌ನಲ್ಲಿ ಸೆರೆ ಹಿಡಿದು ವಾಟ್ಸ್‌ ಆ್ಯಪ್‌ಗೆ ವಿಡಿಯೋ ಹಾಕಿದರು…

Pinterest LinkedIn Tumblr

ba

ಉಧಮ್‌ಪುರ: ಜಮ್ಮು ಕಾಶ್ಮೀರದ ಉಧಮ್‌ಪುರ್‌ ಜಿಲ್ಲೆಯಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದಿರುವ ದುರುಳರು, ವಾಟ್ಸ್‌ ಆ್ಯಪ್‌ನಲ್ಲಿ ವಿಡಿಯೋ ಅಪ್‌ಲೋಡ್‌ ಮಾಡಿರುವ ಘಟನೆ ದಿಗ್ಭ್ರಮೆ ಮೂಡಿಸಿದೆ.

ಘಟನೆ ಸಂಬಂಧ ತನಿಖೆ ನಡೆಸಿರುವ ಪೊಲೀಸರು, ಅಪ್ರಾಪ್ತ ಬಾಲಕ ಸೇರಿ ಮೂವರನ್ನು ಉಧಮ್‌ಪುರದಲ್ಲಿ ಬಂಧಿಸಿದ್ದಾರೆ. ಘಟನೆಯಲ್ಲಿ ಭಾಗಿಯಾಗಿದ್ದರು ಎನ್ನಲಾದ ಇನ್ನಿಬ್ಬರು ಕಿಡಿಗೇಡಿಗಳ ಬಂಧನಕ್ಕೆ ಜಾಲ ಬೀಸಿದ್ದಾರೆ. ದೌರ್ಜನ್ಯಕ್ಕೆ ಈಡಾದ ಮಹಿಳೆಯ ಪತ್ತೆಗೂ ಪೊಲೀಸರು ಯತ್ನಿಸಿದ್ದಾರೆ.

ವಸ್ತ್ರವನ್ನು ನೀಡುವಂತೆ ದುಷ್ಟರ ಬಳಿ ಯುವತಿ ಅಂಗಲಾಚುತ್ತಿರುವ ವಿಡಿಯೋ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದೆ. ಉಧಮ್‌ಪುರದ ಹೊರವಲಯದಲ್ಲಿ ಗೆಳೆಯನ ಜತೆ ಇದ್ದ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಬಗ್ಗೆ ಪ್ರಶ್ನಿಸಿದ ನಂತರ ಬೀದಿ ಕಾಮಣ್ಣರು ಆಕೆಯನ್ನು ವಿವಸ್ತ್ರಗೊಳಿಸಿದ್ದಾರೆ. ಇಡೀ ದೃಶ್ಯವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡಿದ್ದಾರೆ. ಯುವತಿ ಜತೆ ಇದ್ದ ಗೆಳೆಯನನ್ನು ನಿಂದಿಸಿ, ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಕಳೆದ ರಾತ್ರಿ ವಿಡಿಯೋ ಬಹಿರಂಗಗೊಂಡಿದೆ. ಘಟನೆ ಸಂಬಂಧ ಅಧಿಕೃತ ದೂರು ದಾಖಲಾಗದಿದ್ದರೂ, ಪೊಲೀಸರು ತನಿಖೆ ಆರಂಭಿಸಿದ್ದಾರೆ.

Write A Comment