ಮನೋರಂಜನೆ

ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದ ಬಾಕ್ಸರ್ ಕೃಷ್ಣ ಇಂದು ಪಾಲಿಕೆಯಲ್ಲಿ ಚರಂಡಿಗಳಿಗೆ ಔಷಧ ಸಿಂಪಡಿಸುವ ಕಾರ್ಮಿಕ; ಒಳ್ಳೆಯ ಕೆಲಸಕ್ಕಾಗಿ ಪಶ್ಚಿಮ ಬಂಗಾಳದ ಸಿಎಂಗೆ ಮನವಿ

Pinterest LinkedIn Tumblr

krish

ಹೌರಾ: ಕಳೆದ ಹದಿನೈದು ವರ್ಷಗಳಿಂದ ಹೌರಾ ನಗರ ಪಾಲಿಕೆಯಲ್ಲಿ ತೆರೆದ ಚರಂಡಿಗಳನ್ನು ಸ್ವಚ್ಛಗೊಳಿಸುತ್ತಿದ್ದ ರಾಷ್ಟ್ರೀಯ ಮಾಜಿ ಬಾಕ್ಸರ್ ಕೃಷ್ಣ ರೌತ್ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಲ್ಲಿ ಯಾವುದಾದರೂ ಕಾಯಂ ಉದ್ಯೋಗ ನೀಡುವಂತೆ ಮನವಿ ಮಾಡಿಕೊಳ್ಳಲಿದ್ದಾರೆ.

”ಆರಂಭದಲ್ಲಿ ಐದು ವರ್ಷಗಳ ಕಾಲ ಗುಡಿಸುವ ಕೆಲಸ ಮಾಡುತ್ತಿದ್ದೆ, 2005ರಲ್ಲಿ ತೆರೆದ ಚರಂಡಿಗಳಿಗೆ ಔಷಧ ಸಿಂಪಡಿಸುವ ಕೆಲಸ ನೀಡಿದರು. ಕಳೆದ ಹತ್ತು ವರ್ಷಗಳಿಂದ ಈ ಕೆಲಸವನ್ನು ಮಾಡುತ್ತಿದ್ದೇನೆ, ” ಎಂದು 1987ರ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಹಾಗೂ 1992ರಲ್ಲಿ ಬೆಳ್ಳಿ ಪದಕ ಗೆದ್ದಿರುವ ಕೃಷ್ಣ ಹೇಳಿದ್ದಾರೆ.

krish1

”ಕ್ಷಯ ರೋಗದಿಂದ ಬಳಲುತ್ತಿರುವ ಸಹೋದರನ ಸಹಿತ ಆರು ಮಂದಿ ಸದಸ್ಯರ ಕುಟುಂಬವನ್ನು ಸಲಹುವುದು ಕಷ್ಟವಾಗುತ್ತಿದೆ. ಅದರಲ್ಲೂ ಸಹೋದರನ ಔಷಧಗಳಿಗಾಗಿ ಪ್ರತೀ ದಿನ 232 ರೂ. ಖರ್ಚಾಗುತ್ತಿದೆ,” ಎಂದು 1987ರಲ್ಲಿ ನಡೆದಿದ್ದ ಪಶ್ಚಿಮ ಬಂಗಾಳ ಓಪನ್ ಲಾಲ್‌ಚಂದ್ ರಾಯ್ ಸ್ಮಾರಕ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನ ವಿಜೇತ ಕೃಷ್ಣ ರೌತ್ ಅಳಲು ತೋಡಿಕೊಂಡಿದ್ದಾರೆ.

”ಗೌರವಯುವ ಜೀವನ ನಡೆಸುವಂತಾಗಲು ಕಾಯಂ ಉದ್ಯೋಗವೊಂದನ್ನು ನೀಡುವಂತೆ ಶೀಘ್ರದಲ್ಲೇ ಮುಖ್ಯಮಂತ್ರಿ ಮಮನಾ ಬ್ಯಾನರ್ಜಿಯವರಿಗೆ ಪತ್ರ ಬರೆಯಲಿದ್ದೇನೆ. ಉತ್ತಮ ಭವಿಷ್ಯದ ಕನಸು ಹೊತ್ತಿರುವ ಯಾರೂ ಕೂಡ ನನ್ನಂತೆ ನರಳುವುದು ಬೇಡ,” ಎಂದು ಅವರು ತಿಳಿಸಿದ್ದಾರೆ. ಚರಂಡಿಗಲಿಗೆ ಔಷಧ ಸಿಂಪಡಿಸುವ ಕೆಲಸ ಆರಂಭಿಸುವ ಮುನ್ನ 43ರ ಹರೆಯದ ಕೃಷ್ಣ ರೌತ್, 150 ಬಡ ಮಕ್ಕಳಿಗೆ ಬಾಕ್ಸಿಂಗ್ ತರಬೇತಿ ನೀಡುವ ಕಾರ್ಯ ಮಾಡುತ್ತಿದ್ದಾರೆ.

Write A Comment