ರಾಷ್ಟ್ರೀಯ

ಕೇರಳದಲ್ಲಿ 200 ವರ್ಷ ಹಳೆಯ ಡಚ್ ಹಡಗು ಪತ್ತೆ

Pinterest LinkedIn Tumblr

DutchShipಕೇರಳದ ತಿರುವನಂತಪುರಂ ಜಿಲ್ಲೆಯ ಅಂಜ್ ತೆಂಙು ಎಂಬಲ್ಲಿ ಪತ್ತೆಯಾದ ಡಚ್ ಈಸ್ಟ್ ಇಂಡಿಯಾ ಕಂಪನಿಗೆ ಸೇರಿದ ವೆಮ್ಮೆನಮ್ ಹಡಗು
ತಿರುವನಂತಪುರಂ: 1752 ನೇ ಕಾಲದ ಡಚ್ ಹಡಗು ಕೇರಳದ ತಿರುವನಂತಪುರಂ ಜಿಲ್ಲೆಯ ಅಂಜ್ ತೆಂಙು ಎಂಬ ಪ್ರದೇಶದಲ್ಲಿ ಪತ್ತೆಯಾಗಿದೆ.

ಈ ಹಡಗನ್ನು ಡಚ್ ಈಸ್ಟ್ ಇಂಡಿಯಾ ಕಂಪನಿ ವಾರ್ಫ್ 1752 ಗಿಂತ ಎರಡು ವರ್ಷ ಮೊದಲು ತಯಾರಿಸಿತ್ತು. ಇದನ್ನು ವೆಮ್ಮೆನಮ್ ಎಂದು ಗುರಿತಿಸಲಾಗಿದೆ.

ಮಲಬಾರ್ ತೀರದ ಆಂಗ್ರಿಯನ್ಸ್ ದಾಳಿ ಮಾಡಿದ ಪರಿಣಾಮ ಈ ಹಡಗು ಬೆಂಕಿಗಾಹುತಿಯಾಗಿ ನೀರಿನಲ್ಲಿ ಮುಳುಗಿತ್ತು ಎಂದು ಈ ಹಡಗನ್ನು ಕಂಡು ಹಿಡಿದ ಸಂಶೋಧಕ ರಾಬರ್ಟ್ ಪಾನಿಪಿಲ್ಲಾ ಹೇಳಿದ್ದಾರೆ. ಆ್ಯಂಗ್ರಿಯನ್ಸ್ ಎಂಬುದು ಜರ್ಮನ್ ಪದವಾಗಿದ್ದು, ಇದಕ್ಕೆ ಕಡಲ್ಗಳ್ಳರು ಎಂದು ಕರೆಯಲಾಗುತ್ತದೆ.

ಇದು 1150 ಟನ್ ತೂಕ ಹೊಂದಿರುವ ಈ ಹಡಗು 42.25 ಮೀಟರ್ ಉದ್ದವಿದೆ. ಈ ಹಡಗನ್ನು ಸ್ಟೀಲ್ ನಿಂದ ಮಾಡಲಾಗಿದ್ದು, ಇದರ ತಯಾರಿಕೆಗಾಗಿ ಸುಮಾರು 356 ಮಂದಿ ದುಡಿದಿದ್ದಾರೆ. ಈ ಹಡಗಿನ ಕ್ಯಾಪ್ಟನ್ ಜೀನ್ ಲೂಯಿಸ್ ಫಿಲಿಪ್ಪಿ ಆಗಿದ್ದರು. ವೆಮ್ಮೆನಮ್ ಎಂಬುದು ಹಾಲ್ಯಾಂಡ್ ನಲ್ಲಿರುವ ಸ್ಥಳದ ಹೆಸರಾಗಿದೆ.

ತಿರುವನಂತಪುರಂ ಜಿಲ್ಲೆಯ ಅಂಜ್ ತೆಂಙು ಪ್ರದೇಶ ಈಶಾನ್ಯಭಾಗದಿಂದ 9.7 ಕಿ.ಮೀ ನಲ್ಲಿ ಪತ್ತೆಯಾಗಿರುವ ಈ ಹಡಗು, 43 ಮೀಟರ್ ಆಳದಲ್ಲಿದೆ. ಅಂದರೆ ಇದು 15 ಅಂತಸ್ತಿನ ಕಟ್ಟಡದ ಸಮವಾಗಿರುತ್ತದೆ. ಈ ಬಗ್ಗೆ ಇಲ್ಲಿನ ಮೀನುಗಾರರಿಗೆ ಹೆಚ್ಚಿನ ಮಾಹಿತಿ ಇದೆ.

ಈ ಹಡಗು ಡಚ್ ಈಸ್ಟ್ ಇಂಡಿಯಾ ಕಂಪನಿಗೆ ಸೇರಿದ್ದು. ಇದನ್ನು ಪತ್ತೆ ಹಚ್ಚಲು ಇಬ್ಬರು ಮೀನುಗಾರರು ಸಹಾಯ ಮಾಡಿದ್ದಾರೆ. ಶ್ರೀನಿವಾಸು ಮತ್ತು ಭೀಮ ಎನ್ನುವವರಿಗೆ ಈ ಹಡಗಿನ ಬಗ್ಗೆ ಮಾಹಿತಿ ಇದ್ದುದ್ದರಿಂದ ಅವರ ಸಹಾಯದ ಮೂಲಕ ನಾನು ಈ ಹಡಗನ್ನು ಪತ್ತೆ ಹಚ್ಚಿದ್ದೇನೆ ಎಂದು ರಾಬರ್ಟ್ ಹೇಳಿದ್ದಾರೆ.

Write A Comment