ರಾಷ್ಟ್ರೀಯ

ಹಿಂದೆ ನಾವು ಬರುತ್ತೇವೆ ಎಂದರೂ ಬರಲು ಬಿಡಲಿಲ್ಲ…ಈಗ ನಾವು ಬರಲು ರೆಡಿ ಇಲ್ಲ: ಚೋಟಾ ಶಕೀಲ್

Pinterest LinkedIn Tumblr

chota shakeel

ನವದೆಹಲಿ, ಜು.4-ನಾನು ಇನ್ನೆಂದೂ ಭಾರತಕ್ಕೆ ಹಿಂದಿರುಗಲಾರೆ. 1993ರ ಮುಂಬೈ ಸರಣಿ ಬಾಂಬ್ ಸ್ಫೋಟದ ಬಳಿಕ ಭಾರತಕ್ಕೆ ಬರುತ್ತೇವೆಂಬ ನಮ್ಮ ಮನವಿಯನ್ನು ಸರ್ಕಾರ ಸಾರಾಸಗಟಾಗಿ ತಳ್ಳಿ ಹಾಕಿತ್ತು. ಈಗ ನಾವು ಕರೆದರೂ ಬರುವುದಿಲ್ಲ. ನಮಗದು ಇಷ್ಟವಿಲ್ಲ ಎಂದು ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಬಲಗೈ ಭಂಟ ಚೋಟಾ ಶಕೀಲ್ ಹೇಳಿದ್ದಾನೆ.

ನಾವು ಬರುತ್ತೇವೆಂದಾಗ ನೀವು ಅವಕಾಶ ಕೊಡಲಿಲ್ಲ ಭಯ್ಯ(ದಾವೂದ್) ಲಂಡನ್‌ನಲ್ಲಿ ರಾಮ್ ಜೇಠ್ಮಲಾನಿ ಜೊತೆ ಮಾತನಾಡಿ, ಭಾರತಕ್ಕೆ ಬರುವುದಾಗಿ ಹೇಳಿದ್ದ. ಆದರೆ ನಿಮ್ಮ ಸಚಿವ ಸಂಪುಟ ಒಪ್ಪಲಿಲ್ಲ. ಬಿಜೆಪಿ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಒಂದು ಪ್ರಹಸನವನ್ನೇ ಸೃಷ್ಟಿಸಿದ್ದರು ಎಂದು ಚೋಟಾ ಶಕೀಲ್, ಕರಾಚಿಯಿಂದ ದೂರವಾಣಿ ಮೂಲಕ ನೀಡಿದ ವಿಶೇಷ ಸಂದರ್ಶನದಲ್ಲಿ ಹೇಳಿದ್ದಾನೆ.

ಚೋಟಾ ರಾಜನ್ ಹತ್ಯೆಗೆ ಸಂಚು (ನಿನ್ನೆ ಪ್ರಕಟವಾಗಿತ್ತು) ರೂಪಿಸಿದ್ದು , ಕ್ರಿಕೆಟ್ ಬೆಟ್ಟಿಂಗ್, ಐಪಿಎಲ್ ಮ್ಯಾಚ್ ಫಿಕ್ಸಿಂಗ್ ಸೇರಿದಂತೆ ಹಲವು ವಿಷಯಗಳನ್ನು ಪ್ರಸ್ತಾಪಿಸಿರುವ ಶಕೀಲ್ ಭಯ್ಯನಿಗೆ ಭಾರತದಲ್ಲಿ ಉದ್ಯಮ ಮುಂದುವರೆಸುವ ಮನಸಿತ್ತು ಎಂದು ಹೇಳಿದ್ದಾನೆ.

ಕಳೆದ ಸೆಪ್ಟೆಂಬರ್‌ನಲ್ಲಿ ಶಕೀಲ್ ಮಗಳು ಜೋಯಾಳ ಮದುವೆಗೆ ಕರಾಚಿಗೆ ದಾವೂದ್ ಬಂದಾಗ ಅವನನ್ನು ಹತ್ಯೆ ಮಾಡಬಹುದೆಂಬ ಭಯವಿತ್ತು. ಹಾಗಾಗಿ ಭಾರೀ ಭದ್ರತೆ ಏರ್ಪಡಿಸಲಾಗಿತ್ತು ಎಂಬ ಗುಪ್ತಚರ ಇಲಾಖೆ ಮಾಹಿತಿ ಬಗ್ಗೆ ಪ್ರಸ್ತಾಪಿಸಿದಾಗ ಶಕೀಲ್ ಕ್ಷಣಕಾಲ ವಿಚಲಿತನಾದ. ನಂತರ ಇವೆಲ್ಲ ಸುಳ್ಳು , ನಾನು ಅವಕ್ಕೆ ಉತ್ತರಿಸುವುದಿಲ್ಲ ಎಂದು ಹೇಳಿದ್ದಾನೆ. ನಮ್ಮ ಗ್ಯಾಂಗ್‌ಗಳಲ್ಲೇ ಭಾರತ ಸರ್ಕಾರ ತಾರತಮ್ಯ ಮಾಡುತ್ತಿದೆ ಚೋಟಾ ರಾಜನ್‌ನನ್ನು ಭಾರತಕ್ಕೆ ಕರೆತರುವ ಬಗ್ಗೆ ಏಕೆ ಮಾತನಾಡುವುದಿಲ್ಲ? ನಾನು ಅವನ ಹತ್ಯೆಗೆ ಸಂಚು ನಡೆಸಿದೆ ಎಂದಾದರೆ ಈಗ ಅವನು ಎಲ್ಲಿದ್ದಾನೆ? ಅವನೂ ಜನರ ಹತ್ಯೆ ಮಾಡಿಲ್ಲವೇ? ಅವನನ್ನೆಕೇ ಕರೆತರಬಾರದು? ಎಂದು ಶಕೀಲ್ ಪ್ರಶ್ನೆ ಮೇಲೆ ಪ್ರಶ್ನೆ ಕೇಳಿದ್ದಾನೆ. ನಾನು ಯಾವುದೇ ಅಮಾಯಕರನ್ನು ಕೊಲ್ಲುವುದಿಲ್ಲ. ಚೋಟಾ ರಾಜನ್ ಉತ್ತರಪ್ರದೇಶದಿಂದ ಶೂಟರ್‌ಗಳನ್ನು ಕರೆಸಿ ಜನರ ಹತ್ಯೆ ಮಾಡಿ ಅದನ್ನು ನಮ್ಮ ತಲೆಗೆ ಕಟ್ಟುತ್ತಾನೆ ಎಂದು ಶಕೀಲ್, ಚೋಟಾ ರಾಜನ್ ವಿರುದ್ದ ಹರಿಹಾಯ್ದಿದ್ದಾನೆ.

Write A Comment