ರಾಷ್ಟ್ರೀಯ

ದೆವ್ವಗಳನ್ನು ಹಿಡಿಯಲು ಮುಂದಾದ ಉತ್ತರ ಪ್ರದೇಶ ಪೊಲೀಸರು !

Pinterest LinkedIn Tumblr

new-ghostಅಲಹಾಬಾದ್:  ನಾಯಿ, ಕೋಳಿ, ಕಳ್ಳರು ಹಾಗೂ ಸಚಿವ ಅಜಂ ಖಾನ್ ಕೋಣಗಳನ್ನು  ಹಿಡಿದು ಸುಸ್ತಾಗಿರುವ ಪೊಲೀಸರಿಗೆ ಉತ್ತರ ಪ್ರದೇಶ ಸರ್ಕಾರ ಈಗ ದೆವ್ವಗಳನ್ನು ಹಿಡಿಯೋ ಕೆಲಸ ಕೊಟ್ಟಿದೆ.

ಅಲಹಾಬಾದ್ ನಗರದಲ್ಲಿರುವ ನಿವಾಸಿಗಳಿಗೆ  ದೆವ್ವ ಪ್ರತಿ ನಿತ್ಯ ಕಿರುಕುಳ ನೀಡುತ್ತಿದೆಯಂತೆ. ಹೀಗಾಗಿ ಉತ್ತರ ಪ್ರದೇಶ ಸರ್ಕಾರ ದೆವ್ವಗಳನ್ನು ಹಿಡಿಯಲು ಪೊಲೀಸರನ್ನು ನಿಯೋಜಿಸಿದೆ.

ಅಲಹಾಬಾದ್ ನ ನಿರಂಕರಿ ರೈಲ್ವೆ ನಿಲ್ದಾಣದ ಬಳಿ ಇರುವ ದೆವ್ವವೊಂದು ಪ್ರತಿ ದಿನ ಇಲ್ಲಿ ಓಡಾಡುವ ನಾಗರಿಕರಿಗೆ ತೊಂದರೆ ಕೊಡುತ್ತಿದೆಯಂತೆ. ಈ ರೀತಿಯ ಗಾಳಿಸುದ್ದಿಗಳು ಸಾಮಾಜಿಕ ಮಾಧ್ಯಮ ಹಾಗೂ ವಾಟ್ಸ್ ಆಪ್ ನಲ್ಲಿ ಹರಿದಾಡುತ್ತಿದೆ.

ಹೆಣ್ಣು ದೆವ್ವವೊಂದು ಅಲ್ಲಿನ ಜನರನ್ನು ಹಿಂಬಾಲಿಸುತ್ತಿದೆಯಂತೆ. ಹೀಗಾಗಿ ಅಲ್ಲಿನ ಜನ ದೆವ್ವಕ್ಕೆ ಹೆದರಿ ತಾವು ಸಂಚರಿಸುವ ಮಾರ್ಗವನ್ನೆ ಬದಲಾಯಿಸುತ್ತಿದ್ದಾರಂತೆ.

ಹೀಗಾಗಿ ಜಿಲ್ಲಾ ಎಸ್ಎಸ್ ಪಿ ಕೀದ್ ಗಂಜ್, ಇದರ ಹಿಂದೆ ಕಳ್ಳ ಕಾಕರ ಕೈವಾಡವಿದೆಯಂದು ಶಂಕಿಸಿದ್ದಾರೆ. ಪೊಲೀಸರು ಪ್ರತಿ ದಿನ ಗಸ್ತು ತಿರುಗಿ ದೆವ್ವದ ಸಂಚಾರದ ಬಗ್ಗೆ ಗಮನ ಹರಿಸುವಂತೆ ಸೂಚಿಸಿದ್ದಾರೆ.

Write A Comment