ರಾಷ್ಟ್ರೀಯ

60 ವರ್ಷದ ಮಹಿಳೆಯೊಬ್ಬರು 10 ತಿಂಗಳಲ್ಲಿ 5 ಭಾರಿ ಗರ್ಭಧಾರಣೆ !

Pinterest LinkedIn Tumblr

pregnant

ಬರೇಲಿ: ಉತ್ತರ ಪ್ರದೇಶದಲ್ಲಿ ಜನನಿ ಸುರಕ್ಷಾ ಯೋಜನೆಯ ಫಲಾನುಭವಿಗಳ ಬಗ್ಗೆ ನಡೆದ ಸಮೀಕ್ಷೆ ಹಲವು ಅಚ್ಚರಿಗಳನ್ನು ಹೊರಹಾಕಿದೆ.

ಒಬ್ಬರು ನಾಲ್ಕು ತಿಂಗಳಲ್ಲಿ 3 ಬಾರಿ ಗರ್ಭಿಣಿ ಆದರೆ, ಬಹರೇಚ್‌ನ 60 ವರ್ಷದ ಮಹಿಳೆಯೊಬ್ಬರು 10 ತಿಂಗಳಲ್ಲಿ 5 ಭಾರಿ ಗರ್ಭ ಧರಿಸಿದ್ದಾರೆ- ಹೆರಿಗೆ ನಂತರ ತಾಯಿ ಮತ್ತು ಮಗುವಿಗೆ ಉತ್ತಮ ಆಹಾರ ಒದಗಿಸಲು ನೀಡುವ ಆರ್ಥಿಕ ನೆರವಿನ ಯೋಜನೆಯಡಿ ಲಾಭ ಪಡೆಯಲು ಮಹಿಳೆಯರು ಈ ರೀತಿ ಅನೇಕ ಬಾರಿ ಗರ್ಭ ಧರಿಸಿರುವುದಾಗಿ ಘೋಷಿಸಲಾಗಿದೆ.

ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ, ಗ್ರಾಮೀಣ ಪ್ರದೇಶಗಳ ಅಮಾಯಕ ಮಹಿಳೆಯರ ಹೆಸರಿನಲ್ಲಿ ಹಣ ಲಪಾಟಿಸಿರುವ ಅಂಶ ಗಮನಕ್ಕೆ ಬಂದಿದೆ. ಮಹಿಳೆಯರಿಗೆ ಒಂದಿಷ್ಟು ಹಣ ನೀಡಿ, ದೊಡ್ಡ ಮೊತ್ತವನ್ನು ಜೇಬಿಗೆ ಇಳಿಸಿದ್ದಾರೆ.

ಬೌಂದಿ ಪ್ರಾಥಮಿಕ ಆರೋಗ್ಯ ಕೇಂದ್ರವೊಂದರಲ್ಲೇ ಇಂಥ 200 ಪ್ರಕರಣಗಳು ಪತ್ತೆಯಾಗಿವೆ. ಆರೋಗ್ಯ ಕೇಂದ್ರದ ಐವರು ನೌಕರರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದ್ದು, ಘಟನೆ ಸಂಬಂಧ ಜಿಲ್ಲಾಧಿಕಾರಿ ತನಿಖೆಗೆ ಆದೇಶಸಿದ್ದಾರೆ. ಯೋಜನೆ ಜಾರಿಗೊಳಿಸಲು ನಿಯೋಜಿಸಿದ್ದ ಅಧಿಕಾರಿಗಳನ್ನು ಹಗರಣ ಸಂಬಂಧ ವಿಚಾರಣೆಗೆ ಒಳಪಡಿಸಲಾಗಿದೆ.

ಬಡ ಮಹಿಳೆಯರಿಗೆ ನೆರವಾಗುವ ನಿಟ್ಟಿನಲ್ಲಿ 2005ರಲ್ಲಿ ಜನನಿ ಸುರಕ್ಷಾ ಯೋಜನೆ ಜಾರಿಗೊಳಿಸಲಾಗಿತ್ತು. ಹೆರಿಗೆ ನಂತರ ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಒತ್ತು ನೀಡುವುದು ಯೋಜನೆ ಉದ್ದೇಶ. ಪೌಷ್ಠಿಕ ಆಹಾರ ಸೇವನೆಗಾಗಿ ಮಹಿಳೆಗೆ 1,400 ರೂ. ಸಹಾಯಧನ ನೀಡಲಾಗುತ್ತಿದೆ.

Write A Comment