ರಾಷ್ಟ್ರೀಯ

ಕಚ್ಚಿದ ಹಾವಿನ ತಲೆಯನ್ನೇ ಕಚ್ಚಿ ಹಾಕಿದ ಯುವಕ !

Pinterest LinkedIn Tumblr

snake boy ranchi

ರಾಂಚಿ: ಹಾವು ನೋಡಿದ ತಕ್ಷಣ ಭಯಪಡುವವರೇ ಹೆಚ್ಚು. ಅಂತಹದರಲ್ಲಿ ಹಾವು ಕಚ್ಚಿತು ಎಂದರೆ ಕೂಡಲೇ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯುತ್ತಾರೆ. ಆದರೆ ರಾಂಚಿಯಲ್ಲೊಬ್ಬ ಯುವಕ ಹಾವಿನಿಂದ ಕಚ್ಚಿಸಿಕೊಂಡ ಬಳಿಕ ಅದನ್ನು ಹಿಡಿದು ಅದರ ತಲೆಯನ್ನೇ ಕಚ್ಚಿದ್ದಾನೆ.

ಹೌದು, ಇಂತಹವೊಂದು ವಿಚಿತ್ರ ಘಟನೆ ಜಾರ್ಖಂಡ್ ಸಿಂಡೆಗಾ ಜಿಲ್ಲೆಯಲ್ಲಿ ನಡೆದಿದೆ. ಇಲ್ಲಿನ ಜಲ್ದೇಗಾ ಪ್ರದೇಶದ ನಿವಾಸಿಯಾಗಿರುವ ಅನಿಲ್ ಬಾಗೆ ಎಂಬಾತ ಮನೆಯ ಸುತ್ತಮುತ್ತ ತಿರುಗಾಡುವಾಗ ಆತನಿಗೆ ಹಾವು ಕಚ್ಚಿದೆ. ಇದಾದ ತಕ್ಷಣ ಆತ ಹಾವನ್ನು ಹಿಡಿದು ಅದರ ತಲೆಯನ್ನೇ ಕಚ್ಚಿಹಾಕಿದ್ದಾನೆ.

ಇದಾದ ನಂತರ ಜಿಲ್ಲಾ ಆಸ್ಪತ್ರೆಗೆ ತೆರಳಿದ ಯುವಕ ನಡೆದ ವಿಷಯವನ್ನು ವಿವರಿಸಿದ್ದಾನೆ. ತಾನು ಹಾವನ್ನು ಕಚ್ಚಿದರೂ ತನಗೆ ವಿಷವೇರಿಲ್ಲ ಹೀಗಾಗಿ ಹಾವನ್ನು ಫ್ರೈಮಾಡಿ ತಿನ್ನುತ್ತೇನೆ ಎಂದು ಹೇಳಿದ್ದಾನೆ.

Write A Comment