ರಾಷ್ಟ್ರೀಯ

ಮಾಜಿ ಗೆಳತಿಯ ಅಶ್ಲೀಲ ಚಿತ್ರ ನೆಟ್‍ಗೆ ಹರಿಬಿಟ್ಟ ಯುವಕನ ಬಂಧನ

Pinterest LinkedIn Tumblr

facebookಅಗರ್ತಲ್: ಪ್ರೀತಿ ನಿರಾಕರಿಸಿದ್ದ ಗೆಳತಿಯ ಅಶ್ಲೀಲ ಚಿತ್ರಗಳನ್ನು ಫೇಸ್‌ಬುಕ್‌ಗೆ ಹರಿಬಿಟ್ಟಿದ್ದ ತ್ರಿಪುರ ಯುವಕನನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.

ಪಶ್ಚಿಮ ಬಂಗಾಳದ ಅಪರಾಧ ಪತ್ತೆ ದಳ(ಸಿಐಡಿ) ಅಧಿಕಾರಿಗಳು ತ್ರಿಪುರ ಪೊಲೀಸ್ ಅಧಿಕಾರಿಗಳ ನೆರವಿನೊಂದಿಗೆ ಅರೂಪ್ ದೇಬ್ ಎಂಬಾತನನ್ನು ಶನಿವಾರ ಬಂಧಿಸಿದ್ದು, ಭಾನುವಾರ ಕೊಲ್ಕತ್ತಾಗೆ ಕರೆದುಕೊಂಡು ಬರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿ ಅರೂಪ್ ದೇಬ್ ನಿಂದ ನಾಲ್ಕು ಮೊಬೈಲ್ ಫೋನ್, ಕಂಪ್ಯೂಟರ್ ಹಾರ್ಡ್ ಡಿಸ್ಕ್ ನ್ನು ಸಿಐಡಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಪ್ರೀತಿ ನಿರಾಕರಿಸಿದ ಗೆಳತಿಯ ಅಶ್ಲೀಲ ಚಿತ್ರಗಳನ್ನು ನೆಟ್ ಗೆ ಅಪ್ ಲೋಡ್ ಮಾಡಿದ್ದಾನೆ ಎಂದು ಯುವತಿಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು.

ವಿಚಾರಣೆ ವೇಳೆ ಆರೋಪಿ ದೇಬ್ ಈ ಹಿಂದೆ ಯುವತಿಯ ಪೋಷಕರು ದೂರವಾಣಿ ಕರೆ ಮಾಡಿ ನಮ್ಮ ಪೋಷಕರನ್ನು ನಿಂದಿಸಿದ್ದರು. ಈ ಕಾರಣಕ್ಕಾಗಿ ಪತ್ರಿಕಾರ ತೀರಿಸಿಕೊಳ್ಳಲು ಈ ರೀತಿ ಮಾಡಿರುವುದಾಗಿ ತ್ರಿಪುರ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Write A Comment