ರಾಷ್ಟ್ರೀಯ

ಪಾಕ್‌ನಲ್ಲಿ ವೈದ್ಯ ತರಬೇತಿ ಪಡೆದ ಹಿಂದೂಗಳು ಗುಜರಾತ್‌ನಲ್ಲಿ ಚಪ್ಪಲಿ ಮಾರಿ ಜೀವನ ನಿರ್ವಹಣೆ

Pinterest LinkedIn Tumblr

Dasharathಅಹಮದಾಬಾದ್: ಸಿಂಧ್ ಪ್ರಾಂತ್ಯದಲ್ಲಿ ಹಿಂದೂ ಹೆಣ್ಣು ಮಕ್ಕಳ ಅಪಹರಣ ಹೆಚ್ಚಿದ ಹಿನ್ನೆಲೆಯಲ್ಲಿ ಭದ್ರತೆ ಕಾರಣದಿಂದ ಪಾಕಿಸ್ತಾನದಿಂದ ಗುಜರಾತ್ ಗೆ ವಲಸೆ ಬಂದ 200ಕ್ಕೂ ಹೆಚ್ಚು ಪಾಕಿಸ್ತಾನಿ ವೈದ್ಯರು ಸದ್ಯ ಜೀವನ ನಿರ್ವಹಣೆಗಾಗಿ ಚಪ್ಪಲಿ ಮಾಡುತ್ತಿದ್ದಾರೆ.

ಪಾಕಿಸ್ತಾನದಲ್ಲಿ ವೈದ್ಯ ತರಬೇತಿ ಪಡೆದ 200ಕ್ಕೂ ಹೆಚ್ಚು ಜನರು ಗುಜರಾತ್ ನ ಅಹಮದಬಾದ್ ನಲ್ಲಿ ಚಪ್ಪಲಿ ವ್ಯಾಪಾರ ಅಥವಾ ಸಂಬಂಧಿಕರ ಮೊಬೈಲ್ ಅಂಗಡಿಗಳಲ್ಲಿ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ.

ಕರಾಚಿ ವಿಶ್ವವಿದ್ಯಾಲಯದಲ್ಲಿ ಎಂಬಿಬಿಎಸ್ ಪಾಸ್ ಮಾಡಿದ 38 ವರ್ಷದ ದಶರಥ್ ಕೇಳ ಹೇಳುವ ಪ್ರಕಾರ, ಪಾಕಿಸ್ತಾನ ವೈದ್ಯರಿಗೆ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ ಇಲ್ಲಿ ವೈದ್ಯರಾಗಿ ಕೆಲಸ ಮಾಡಲು ಅನುಮತಿ ನೀಡುತ್ತಿಲ್ಲ. ಹೀಗಾಗಿ, ಭದ್ರತೆ ಕಾರಣದಿಂದಾಗಿ ಪಾಕಿಸ್ತಾನ ಬಿಟ್ಟು ಗುಜರಾತ್‘ಗೆ ಬಂದಿರುವ 200ಕ್ಕೂ ಅಧಿಕ ಹಿಂದೂ ವೈದ್ಯರು ಇದೀಗ ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ಜೀವನ ಸಾಗುಸುತ್ತಿದ್ದಾರೆ.

ಸಿಂಧ್ ಪ್ರಾಂತ್ಯದಲ್ಲಿ ಹಿಂದೂ ಹೆಣ್ಮಕ್ಕಳ ಅಪಹರಣ ಹೆಚ್ಚಿದ ಹಿನ್ನೆಲೆಯಲ್ಲಿ ಭದ್ರತೆ ಕಾರಣದಿಂದ ನೂರಾರು ಹಿಂದೂ ವೈದ್ಯರು ಗುಜರಾತ್‘ಗೆ ವಲಸೆ ಬಂದಿದ್ದರು. ಆದರೆ, ಇಲ್ಲಿ ಈ ವೈದ್ಯರಿಗೆ ಕೆಲಸದ ಭದ್ರತೆ ಇಲ್ಲದಂತಾಗಿದೆ.

Write A Comment