ರಾಷ್ಟ್ರೀಯ

ವಿಶ್ವದಲ್ಲಿ ಅತೀ ಹೆಚ್ಚು ಉದ್ಯೋಗವಕಾಶ ಕಲ್ಪಿಸುವ ಇಲಾಖೆಗಳ ಪಟ್ಟಿಯಲ್ಲಿ ಭಾರತೀಯ ಸೇನೆ ಮತ್ತು ಭಾರತೀಯ ರೇಲ್ವೆ

Pinterest LinkedIn Tumblr

indianarmy_fileನವದೆಹಲಿ: ಜಗತ್ತಿನಲ್ಲಿ ಅತೀ ಹೆಚ್ಚು ಉದ್ಯೋಗವಕಾಶಗಳನ್ನು ಕಲ್ಪಿಸುವ ಇಲಾಖೆಗಳ ಪಟ್ಟಿಯಲ್ಲಿ ಭಾರತೀಯ ಸೇನೆ ಮತ್ತು ಭಾರತೀಯ ರೇಲ್ವೆ ಸ್ಥಾನ ಗಿಟ್ಟಿಸಿಕೊಂಡಿದೆ. ಈ ಎರಡೂ ಇಲಾಖೆಗಳು 27 ಲಕ್ಷ ಜನರಿಗೆ ಉದ್ಯೋಗವನ್ನು ಕಲ್ಪಿಸುತ್ತಿದ್ದು, ಜಗತ್ತಿನ ಉದ್ಯೋಗ ಕಲ್ಪಿಸುವ ಇಲಾಖೆಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿವೆ. ವರ್ಲ್ಡ್ ಇಕಾನಮಿಕ್ ಫಾರಂ ಪ್ರಕಟಿಸಿದ ಅಧ್ಯಯನ ವರದಿಯೊಂದರಲ್ಲಿ ಈ ವಿಷಯ ಉಲ್ಲೇಖವಾಗಿದೆ.

ವರದಿಗಳ ಪ್ರಕಾರ 14 ಲಕ್ಷ ಜನರಿಗೆ ಉದ್ಯೋಗ ಕಲ್ಪಿಸುವ ಭಾರತೀಯ ರೇಲ್ವೆ 8ನೇ ಸ್ಥಾನ ಪಡೆದುಕೊಂಡಿದೆ. ಅದೇ ವೇಳೆ ಭಾರತೀಯ ಸೇನೆಯಲ್ಲಿ 13 ಲಕ್ಷ ಮಂದಿ ಕೆಲಸ ಮಾಡುತ್ತಿದ್ದಾರೆ. 32 ಲಕ್ಷ ನೌಕರರನ್ನು ಹೊಂದಿರುವ ಅಮೆರಿಕದ ರಕ್ಷಣಾ ಇಲಾಖೆ 32 ಲಕ್ಷ ಜನರಿಗೆ ಉದ್ಯೋಗ ಕಲ್ಪಿಸುವ ಮೂಲಕ ಪಟ್ಟಿಯಲ್ಲಿ ಮೊದಲ ಸ್ಥಾನ ಗಿಟ್ಟಿಸಿಕೊಂಡಿದೆ. 23 ಲಕ್ಷ ಜನರಿಗೆ ಉದ್ಯೋಗ ಕಲ್ಪಿಸಿರುವ ಚೀನಾ ಸೇನೆ ಎರಡನೇ ಸ್ಥಾನದಲ್ಲಿದೆ.

ಅಮೆರಿಕದ ಸೂಪರ್ ಮಾರ್ಕೆಟ್ ಶೃಂಖಲೆಯಾದ ವಾಲ್‌ಮಾರ್ಟ್ 21 ಲಕ್ಷ ನೌಕರರನ್ನು ಹೊಂದಿದ್ದು ಮೂರನೇ ಸ್ಥಾನದಲ್ಲಿದೆ. ನಾಲ್ಕನೇ ಸ್ಥಾನದಲ್ಲಿ ಮೆಕ್‌ಡೊನಾಲ್ಡ್, ಐದನೇ ಸ್ಥಾನದಲ್ಲಿ ಯು ಕೆ ನ್ಯಾಷನಲ್ ಹೆಲ್ತ್ ಸರ್ವೀಸ್ ಹಾಗು 6 ಮತ್ತು 7 ನೇ ಸ್ಥಾನವನ್ನು ಅಮೆರಿಕ ಹಾಗು ಚೀನಾದ ಎರಡು ವಾಣಿಜ್ಯ ಕಂಪನಿಗಳು ಗಿಟ್ಟಿಸಿಕೊಂಡಿವೆ.

Write A Comment