ರಾಷ್ಟ್ರೀಯ

ಸಹೋದರಿಯ ಶವ ಭಕ್ಷಿಸಿದ್ದನೇ ಈ ಇಂಜಿನಿಯರ್..?

Pinterest LinkedIn Tumblr

savaಪಶ್ಚಿಮ ಬಂಗಾಳ: ಕೋಲ್ಕತ್ತಾದ ರಾಬಿನ್ಸನ್ ರಸ್ತೆಯ ನಿಗೂಢ ಬಂಗಲೆಯ ರಹಸ್ಯ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಈ ಮನೆಯಲ್ಲಿ ಸಹೋದರಿಯ ಶವದ ಜೊತೆ ಆರು ತಿಂಗಳು ಕಾಲ ಕಳೆದಿದ್ದ ಇಂಜಿನಿಯರ್ ಆಕೆಯ ಮಾಂಸ ಭಕ್ಷಿಸಿದ್ದನೇ ಎಂಬ ಅನುಮಾನ ಪೊಲೀಸರನ್ನು ಕಾಡುತ್ತಿದೆ.

ಮಾನಸಿಕ ಅಸ್ವಸ್ಥನಂತೆ ಕಾಣುತ್ತಿದ್ದ ಪಾರ್ಥ ಡೇ ಎಂಬ ಇಂಜಿನಿಯರ್ ಗೆ ಆಸ್ಪತ್ರೆಯಲ್ಲಿ ಇನ್ನೂ ಚಿಕಿತ್ಸೆ ನೀಡಲಾಗುತ್ತಿದ್ದು, ಆತನ ಗೊಂದಲಮಯ ಹೇಳಿಕೆಗಳು ಪೊಲೀಸರ ತಲೆ ಕೆಡಿಸಿದೆ. ಈ ಮನೆಯಲ್ಲಿ ಸಿಕ್ಕ ಈತನ ಸಹೋದರಿಯ ಶವ ಹಾಗೂ ಎರಡು ನಾಯಿಗಳ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಪೊಲೀಸರು ಕಳುಹಿಸಿದ್ದು ಅಂತಿಮ ವರದಿ ಇನ್ನೂ ಬಂದಿಲ್ಲವೆನ್ನಲಾಗಿದೆ.

ಆತನ ಸಹೋದರಿ ದೇಬ್ಜಾನಿಯ ಶವ ಆರು ತಿಂಗಳುಗಳ ಕಾಲ ಮನೆಯಲ್ಲಿದ್ದರೂ ಅಕ್ಕಪಕ್ಕದವರಿಗೆ ವಾಸನೆ ಬರದಿರುವುದು ಪೊಲೀಸರಿಗೆ ಪಾರ್ಥ ಡೇ ಶವದ ಮಾಂಸ ಭಕ್ಷಿಸಿದ್ದನೇ ಎಂಬ ಅನುಮಾನ ಮೂಡಲು ಕಾರಣವಾಗಿದೆ. ಶವವೊಂದು ಕೊಳೆಯಲಾರಂಭಿಸಿದರೆ ಸಹಿಸಲಸಾಧ್ಯವಾದ ದುರ್ವಾಸನೆ ಬರಬೇಕಿದ್ದು, ಆದರೆ ಈ ಪ್ರಕರಣದಲ್ಲಿ ಅಂತಹ ಮಾಹಿತಿ ಸಿಕ್ಕಿಲ್ಲವೆನ್ನಲಾಗಿದೆ. ಅಲ್ಲದೇ ಅಸ್ತವ್ಯಸ್ತವಾಗಿದ್ದ ಮನೆಯಲ್ಲಿ ಎರಡು ಚಾಕುಗಳನ್ನು ಮಾತ್ರ ಚೆನ್ನಾಗಿ ತೊಳೆದಿಟ್ಟಿರುವುದೂ ಪೊಲೀಸರ ಅನುಮಾನಕ್ಕೆ ಪುಷ್ಟಿ ನೀಡಿದೆ.

Write A Comment