ರಾಷ್ಟ್ರೀಯ

ಹಾಸಿಗೆಯಲ್ಲಿ ಮೂತ್ರ ಮಾಡಿದ ಬಾಲಕಿ: ಗುಪ್ತಾಂಗಕ್ಕೆ ಖಾರದ ಪುಡಿ ಹಾಕಿ ಉಜ್ಜಿದ ಪಾಪಿ ತಾಯಿ

Pinterest LinkedIn Tumblr

2765chilli_powder_16x9ಹಾಸಿಗೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ ಹೆಣ್ಣು ಮಗುವಿನ ಗುಪ್ತಾಂಗಕ್ಕೆ ತಾಯಿಯೊಬ್ಬಳು ಖಾರದ ಪುಡಿ ಹಾಕಿ ಉಜ್ಜಿದ ಅಮಾನವೀಯ ಘಟನೆಯೊಂದು ನಡೆದಿದೆ.

ಪಶ್ಚಿಮ ಬಂಗಾಳದಲ್ಲಿ ಈ ಘಟನೆ ನಡೆದಿದ್ದು 6 ವರ್ಷ ಪ್ರಾಯದ ಮಗುವೊಂದು ಕಳೆದ ವಾರ ಹಾಸಿಗೆಯ ಮೇಲೆ ಮೂತ್ರ ಮಾಡಿದ್ದಳು. ಈ ಹಿನ್ನೆಲೆಯಲ್ಲಿ ಆಕ್ರೋಶಗೊಂಡ  ಮಗುವಿನ ತಾಯಿ ಆಕೆಯ ಗುಪ್ತಾಂಗಕ್ಕೆ ಮೆಣಸಿನ ಪುಡಿ ಹಾಕಿ ಉಜ್ಜಿದ್ದಾಳೆ. ಈ ಘಟನೆಯಿಂದ ಮಗುವಿನ ಆರೋಗ್ಯ ಏರುಪೇರಾಗಿದ್ದು  ಆರ್‌ಜಿ ಕರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

ವಿಶೇಷವೆಂದರೆ ಈ  ತಾಯಿ ಸಂಧ್ಯಾ ಸೇನ್ ಎಂಬ ಈ ಮಹಾತಾಯಿ ಹೆಣ್ಣುಮಗುವನ್ನು ನೆರೆಮನೆಯವರಿಂದ ದತ್ತುಪಡೆದಿದ್ದರು ಎನ್ನಲಾಗಿದ್ದು ಈ ದತ್ತು ಪ್ರಕ್ರಿಯೆಯೂ ಕಾನೂನು ಬಾಹಿರವಾಗಿ ನಡೆದಿದೆ ಎಂಬ ಮಾಹಿತಿ ಇದ್ದು ಈಗಾಗಲೇ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ತಾಯಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Write A Comment