ರಾಷ್ಟ್ರೀಯ

ಬಿಹಾರದ ಶಾಲೆಯಲ್ಲಿ ‘ಬಿಸಿಯೂಟ’ ಸೇವಿಸಿ 50 ಮಕ್ಕಳು ಅಸ್ವಸ್ಥ

Pinterest LinkedIn Tumblr

mid_day_meal1_PTIಪಾಟ್ನಾ: ಬಿಹಾರದ ಪಾಟ್ನಾ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ಗುರುವಾರ ಮಧ್ಯಾಹ್ನದ ಬಿಸಿಯೂಟ ಸೇವಿಸಿ ಕನಿಷ್ಠ ೫೦ ಮಕ್ಕಳು ಅಸ್ವಸ್ಥರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

“ಶಾಲಾ ಮಕ್ಕಳು ನೌಬತ್ಪುರ ಬ್ಲಾಕಿನ ತಂಗ್ರೈಲಾ ಗ್ರಾಮದ ಮಾಧ್ಯಮಿಕ ಶಾಲೆಯಲ್ಲಿ ಬಿಸಿಯೂಟ ಸೇವಿಸಿದಾಕ್ಷಣ ಕೆಲವರು ವಾಂತಿ ಮಾಡಿಕೊಂಡಿದ್ದಾರೆ ಹಾಗು ತಲೆ ಸುತ್ತಿ ಬಿದ್ದಿದ್ದಾರೆ” ಎಂದು ಜಿಲ್ಲೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪಾಟ್ನಾದಿಂದ ೨೫ ಕಿಮೀ ದೂರದಲ್ಲಿರುವ ನೌಬತ್ಪುರದ ರೆಫರಲ್ ಆಸ್ಪತ್ರಗೆ ಮಕ್ಕಳನ್ನು ದಾಖಲು ಮಾಡಲಾಗಿದೆ. “ಎಲ್ಲ ಮಕ್ಕಳನ್ನು ಗುರುವಾರ ರಾತ್ರಿ ಆಸ್ಪತ್ರೆಯಿಂದ ಮನೆಗೆ ಕಳುಹಿಸಲಾಗುವುದು” ಎಂದು ಅಧಿಕಾರಿ ತಿಳಿಸಿದ್ದಾರೆ.

ತಪಾಸಣೆಗಾಗಿ ಊಟದ ತುಣುಕುಗಳನ್ನು ಸಂಗ್ರಹಿಸಲಾಗಿದೆ. ಮಕ್ಕಳನ್ನು ಪರಿಶೀಲಿಸಿದ ವೈದ್ಯರು ಅವರ ದೇಹದಲ್ಲಿ ಯಾವುದೇ ಹಾನಿಕಾರಕ ವಿಷಾಂಶ ಪತ್ತೆಯಾಗಿಲ್ಲ ಎಂದು ತಿಳಿಸಿದ್ದಾರೆ.

ಈ ವಾರದ ಮೊದಲ ಭಾಗದಲ್ಲಿ ಬಿಹಾರದ ಎರಡು ಶಾಲೆಗಳಲ್ಲಿ ಬಿಸಿಯೂಟ ಸೇವಿಸಿ ೭೨ ಮಕ್ಕಳು ಅಸ್ವಸ್ಥರಾಗಿದ್ದರು ಹಾಗೂ ಮತ್ತೊಂದು ಶಾಲೆಯ ಬಿಸಿಯೂಟದಲ್ಲಿ ಸತ್ತ ಹಲ್ಲಿ ಕಂಡುಬಂದಿತ್ತು.

೨೦೧೩ರಲ್ಲಿ ಸರನ್ ಜಿಲ್ಲೆಯ ಪ್ರಾಥಮಿಕ ಶಾಲೆಯಲ್ಲಿ ಬಿಸಿಯೂಟ ಸೇವಿಸಿ ೨೩ ವಿದ್ಯಾರ್ಥಿಗಳು ಮೃತಪಟ್ಟಿದ್ದರು.

ಬಿಹಾರದಾದ್ಯಂತ ೭೨ ಸಾವಿರ ಶಾಲೆಗಳಲ್ಲಿ ೧೬ ದಶಲಕ್ಷ ವಿದ್ಯಾರ್ಥಿಗಳು ಬಿಸಿಯೂಟ ಸೇವಿಸುತ್ತಾರೆ.

Write A Comment