ರಾಷ್ಟ್ರೀಯ

ಸುನಂದಾ ಪುಷ್ಕರ್ ನಿಗೂಢ ಸಾವು:ರಹಸ್ಯವನ್ನು ಬೇಧಿಸುತ್ತಾ ಎಫ್‌ಬಿಐ ವರದಿ?

Pinterest LinkedIn Tumblr

su

ನವದೆಹಲಿ: ನಿಗೂಢವಾಗಿ ಸಾವನ್ನಪ್ಪಿದ ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ ಶಶಿ ಥರೂರ್ ಅವರ ಪತ್ನಿ ಸುನಂದಾ ಪುಷ್ಕರ್ ಅವರ ದೇಹದ ಅಂಗಾಂಗಗಳ ಪರೀಕ್ಷಾ ವರದಿ ಮುಂದಿನ ತಿಂಗಳು ದೆಹಲಿ ಪೊಲೀಸರ ಕೈಗೆ ಸೇರುವ ನಿರೀಕ್ಷೆ ಇದೆ ಎಂದು ದೆಹಲಿ ಪೊಲೀಸ್ ಕಮಿಷನರ್ ಬಿ.ಎಸ್. ಬಸ್ಸಿ ತಿಳಿಸಿದ್ದಾರೆ. ಈ ವರದಿ ಸುನಂದಾ ದೇಹದಲ್ಲಿ  ಯಾವ ರೀತಿಯ ವಿಷ ಸೇರಿದೆ ಎಂಬುದನ್ನು ಬಹಿರಂಗಗೊಳಿಸಲಿದ್ದು ಕ್ಲಿಷ್ಟಕರವಾದ ಪ್ರಕರಣವನ್ನು ಬೇಧಿಸುವಲ್ಲಿ ಬಹುಮುಖ್ಯ ಪಾತ್ರ ವಹಿಸುವ ನಿರೀಕ್ಷೆ ಇದೆ.
ಅಮೇರಿಕದ ಎಫ್‌ಬಿಐ ಲ್ಯಾಬ್‌ನಲ್ಲಿ ಅಂಗಾಂಗಳ ಪರೀಕ್ಷೆ ನಡೆಸಲಾಗುತ್ತಿದೆ. ವರದಿಯನ್ನು ಮುಂಚಿತವಾಗಿ ನಿರೀಕ್ಷಿಸಿದ್ದೆವು. ಆದರೆ ವಿಶ್ವಾಸಾರ್ಹ ಲ್ಯಾಬ್‌ಗೆ ಬಯಸಿದಷ್ಟು ಸಮಯವನ್ನು ನೀಡಲು ನಿರ್ಧರಿಸಲಾಯಿತು ಎಂದು ಬಸ್ಸಿ ತಿಳಿಸಿದ್ದಾರೆ.

ಮೃತ ಸುನಂದಾರವರ ದೇಹದಲ್ಲಿ ವಿಷದ ಅಂಶ ಪತ್ತೆಯಾಗಿತ್ತು. ವಿಷದಿಂದಾಗಿ ಅವರ ಸಾವು ಸಂಭವಿಸಿದೆ ಎಂದು ಏಮ್ಸ್ ವೈದ್ಯರು ವರದಿ ನೀಡಿದ್ದರು. ಆದರೆ ಅದು ಹೇಗೆ ಅವರ ದೇಹ ಸೇರಿತ್ತು  ಮತ್ತು ಯಾವ ರೀತಿಯ ವಿಷ ಎಂಬುದು ಮಾತ್ರ ನಿಗೂಢವಾಗಿ ಉಳಿದಿದೆ.

ಸುನಂದಾ ಅವರ ಸಾವಿಗೆ ಯಾವ ವಿಷ ಕಾರಣವಾಗಿದೆ ಎಂಬುದನ್ನು ಕಂಡುಕೊಳ್ಳಲು ಒಳಾಂಗಗಳನ್ನು ಫೆಬ್ರುವರಿ ತಿಂಗಳಲ್ಲಿ ವಾಷಿಂಗ್ಟನ್‌ನ ಫೆಡರಲ್‌ ಬ್ಯೂರೊ ಆಫ್‌ ಇನ್‌ವೆಸ್ಟಿಗೇಷನ್‌ಗೆ (ಎಫ್‌ಬಿಐ) ಕಳುಹಿಸಲಾಗಿತ್ತು.

ಏತನ್ಮಧ್ಯೆ, ದೆಹಲಿ ಪೊಲೀಸ್ ಮೂರು ಪ್ರಧಾನ ಸಾಕ್ಷಿಗಳಿಗೆ ಸುಳ್ಳು ಪತ್ತೆ ಪರೀಕ್ಷೆ ನಡೆಸಿದೆ. ಅವಶ್ಯಕವೆನಿಸಿದ್ದಲ್ಲಿ ಈ ಮೂವರ ಮೇಲೆ ಹೆಚ್ಚಿನ ಪರೀಕ್ಷೆಗಳನ್ನು ನಡೆಸುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ದೆಹಲಿಯ ಪಂಚತಾರಾ ಹೊಟೇಲೊಂದರ ಕೊಠಡಿಯಲ್ಲಿ ಜನವರಿ 17, 2014ರಲ್ಲಿ ನಿಗೂಢವಾದ ರೀತಿಯಲ್ಲಿ ಸುನಂದಾ ಮೃತಸ್ಥಿತಿಯಲ್ಲಿ ಪತ್ತೆಯಾಗಿದ್ದರು.

Write A Comment