ರಾಷ್ಟ್ರೀಯ

ಭಾರತದಲ್ಲಿ ತುರ್ತುಪರಿಸ್ಥಿತಿ ಮರುಕಳಿಸಲು ಸಾಧ್ಯವಿಲ್ಲ: ಅರುಣ್ ಜೇಟ್ಲಿ

Pinterest LinkedIn Tumblr

Jaitley at BSE

ನವದೆಹಲಿ: ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ತುರ್ತುಪರಿಸ್ಥಿತಿ ಹೇಳಿಕೆಯನ್ನು ತಿರಸ್ಕರಿಸಿರುವ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ದೇಶದಲ್ಲಿ ತುರ್ತುಪರಿಸ್ಥಿತಿ ಮತ್ತೆ ಬರಲು ಸಾಧ್ಯವೇ ಇಲ್ಲ ಎಂದು ಬುಧವಾರ ಹೇಳಿದ್ದಾರೆ.

1957-77 ರವರೆಗಿನ ವರ್ಷಗಳು ಸ್ವತಂತ್ರ ಭಾರತದ ಕಪ್ಪು ಛಾಯೆ ಮೂಡಿದ ವರ್ಷಗಳಾಗಿದ್ದವು. ಭಾರತ ಇಂದು ಪ್ರಜಾಪ್ರಭುತ್ವ ರಾಷ್ಟ್ರವಾಗಿ ಉನ್ನತ ಸ್ಥಾನಕ್ಕೇರುತ್ತಿದೆ. ಹಾಗಾಗಿ ಅಭಿವೃದ್ಧಿ ಶೀಲ ಹಾಗೂ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಮತ್ತೆ ಇಂತಹ ಕಪ್ಪು ಛಾಯೆ ಬೀಳುವ ವರ್ಷಗಳು ಎಂದಿಗೂ ದೇಶದ ಮೇಲೆ ಬೀಳದು ಎಂದು ಹೇಳಿದ್ದಾರೆ.

ಖಾಸಗಿ ಮಾಧ್ಯಮದ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಅವರು, ಬಿಜೆಪಿಯ ನಾಯಕ ಪ್ರಧಾನಿ ಮೋದಿ ವಿರುದ್ಧ ಕಿಡಿಕಾರಿದ್ದರು. ಪ್ರಸ್ತುತ ಅಧಿಕಾರದಲ್ಲಿರುವ ನಾಯಕರು ಬಹಳ ಪ್ರಬುದ್ಧರಾಗಿದ್ದಾರೆ. ಆದರೆ, ಇದರಲ್ಲಿ ಕೆಲವು ನ್ಯೂನ್ಯತೆಗಳಿದ್ದು, ತುರ್ತು ಪರಿಸ್ಥಿತಿ ಮತ್ತೆ ಬರಲು ಸಾಧ್ಯವಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ದೇಶದಲ್ಲಿ ತುರ್ತು ಪರಿಸ್ಥಿತಿ ಮತ್ತೆ ಮರುಕಳಿಸದರೂ ಆಶ್ಚರ್ಯವಿಲ್ಲ ಎಂದು ಹೇಳಿದ್ದರು.

ಅಡ್ವಾಣಿ ಅವರ ಈ ಹೇಳಿಕೆ ತಮ್ಮ ಪಕ್ಷದಲ್ಲೇ ಹಲವು ತಿಕ್ಕಾಟಕ್ಕೆ ಕಾರಣವಾಗಿದ್ದವು. ಹೀಗಾಗಿ ಹೇಳಿಕೆ ಕುರಿತಂತೆ ಸ್ಪಷ್ಟನೆ ನೀಡಿದ್ದ ಅಡ್ವಾಣಿ ಅವರು, ತುರ್ತು ಪರಿಸ್ಥಿತಿ ಹೇಳಿಕೆ ನೀಡಿದ್ದು ಕಾಂಗ್ರೆಸ್ ಪಕ್ಷವನ್ನು ಉದ್ದೇಶಿಸಿಯೇ ಹೊರತು ಬೇರಾವುದೇ ಪಕ್ಷದ ನಾಯಕರ ಕುರಿತಾಗಿ ಅಲ್ಲ. ನಲವತ್ತು ವರ್ಷಗಳ ಹಿಂದಿನ ಪರಿಸ್ಥಿತಿಯನ್ನು ಮನಸ್ಸಿನಲ್ಲಿರಿಸಿ ನಾನು ಆ ಹೇಳಿಕೆ ನೀಡಿದ್ದೆ. ತುರ್ತು ಪರಿಸ್ಥಿತಿ ಬಳಿಕ ಕಾಂಗ್ರೆಸ್ ಪಕ್ಷ ಮುಂದೆ ಇಂತಹ ಘಟನೆ ಮರುಕಳಿಸುವುದಿಲ್ಲ ಎಂದು ಹೇಳಿತ್ತು. ಆದರೆ, ಅದಾದ ನಂತರವೂ ಕಾಂಗ್ರೆಸ್ ಧೋರಣೆಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಪ್ರಜಾತಂತ್ರದ ವಿರುದ್ಧ ಅದೆಂಥ ಘೋರ ಅಪರಾಧ ಎಂಬ ಸಂಗತಿಯನ್ನು ಆ ಪಕ್ಷ ಇದುವರೆಗೆ ಮನಗಂಡಿಲ್ಲ ಎಂದು ಹೇಳಿದ್ದರು.

ಅಡ್ವಾಣಿ ಅವರ ಈ ಹೇಳಿಕೆ ಸುಪ್ರೀಂಕೋರ್ಟ್ ನಲ್ಲೂ ಪ್ರತಿಧ್ವನಿಸಿತ್ತಲ್ಲದೇ, ಪ್ರತಿ ಪಕ್ಷಗಳು ಎನ್ ಡಿಎ ಸರ್ಕಾರದ ವಿರುದ್ಧ ಹರಿಹಾಯ್ದಿದ್ದವು.

Write A Comment