ರಾಷ್ಟ್ರೀಯ

ಕೇಂದ್ರಿಯ ಶಾಲೆಗಳಲ್ಲಿ ಯೋಗ ಪಠ್ಯಕ್ರಮ

Pinterest LinkedIn Tumblr

yoga

ನವದೆಹಲಿ: ವಿಶ್ವದಾದ್ಯಂತ ಭಾನುವಾರ ನಡೆದ ಅಂತರಾಷ್ಟ್ರೀಯ ಯೋಗ ದಿನದಂದು ಎರಡು ವಿಶ್ವದಾಖಲೆಗಳನ್ನು ಸೃಷ್ಟಿಸಿದ ಮರುದಿನವಾದ ಸೋಮವಾರ ಕೇಂದ್ರ ಸರ್ಕಾರ ತನ್ನ ವ್ಯಾಪ್ತಿಯಡಿ ಬರುವ ಕೇಂದ್ರಿಯ ಶಾಲೆಗಳಲ್ಲಿ ಓದುತ್ತಿರುವ ಲಕ್ಷಾಂತರ ವಿದ್ಯಾರ್ಥಿಗಳಿಗೆ ಯೋಗವನ್ನು ಬೋಧಿಸುವ ಮಹಾತ್ವಾಕಾಂಕ್ಷಿ ಯೋಜನೆಗೆ ಚಾಲನೆ ನೀಡಿದೆ.

ನವದೆಹಲಿಯಲ್ಲಿ ನಡೆದ ಎರಡು ದಿನಗಳ ಸಮ್ಮೇಳನದಲ್ಲಿ 6 ನೇ ತರಗತಿಯಿಂದ 10 ನೇ ತರಗತಿಗಳವರೆಗಿನ ಮಕ್ಕಳಿಗೆ ಯೋಗದ ಪಠ್ಯ ವಸ್ತು ಮತ್ತು ಪಠ್ಯಕ್ರವನ್ನು  ಮಾನವ ಸಂಪನ್ಮೂಲ ಖಾತೆ ಸಚಿವೆ ಸ್ಮೃತಿ ಇರಾನಿ ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು  ಈ ವಿಷಯವನ್ನು ಮಕ್ಕಳಿಗೆ ಹೆಚ್ಚುವರಿ ಹೊರೆಯಾಗಿ ಹೇರುತ್ತಿಲ್ಲ. 80 ಪ್ರತಿಶತ ಅಂಕವನ್ನು ಪ್ರಾಯೋಗಿಕ ಪರೀಕ್ಷೆಗೆ ನಿಗದಿ ಪಡಿಸಲಾಗಿದ್ದು, 20 ಪ್ರತಿಶತ ಅಂಕದ ಥಿಯರಿ ಪತ್ರಿಕೆ ಇರುತ್ತದೆ ಎಂದು ಹೇಳಿದ್ದಾರೆ.

ಸಮಾರಂಭದ ಅಂತ್ಯದಲ್ಲಿ ಮಾತನಾಡುತ್ತಿದ್ದ  ಮಾತನಾಡುತ್ತಿದ್ದ ಇರಾನಿ, “ಹಿರಿಯ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳಿಗೆ ಯೋಗವನ್ನು ಬೋಧಿಸಲಾಗುತ್ತದೆ. ನಾವು 80 ಶೇಕಡಾ ಅಂಕವನ್ನು ಪ್ರಾಯೋಗಿಕ ಪರೀಕ್ಷೆಗೆ ಕಾಯ್ದಿರಿಸುತ್ತೇನೆ. ಆದಾಗ್ಯೂ, ವಿದ್ಯಾರ್ಥಿಗಳಿಂದ ನಾನು ಸಂಪೂರ್ಣ ಬದ್ಧತೆಯಿಂದ ಪ್ರಾಯೋಗಿಕ ಪರೀಕ್ಷೆಯನ್ನು ನಿರ್ವಹಿಸುತ್ತೇವೆ ಎಂಬ ಭರವಸೆಯನ್ನು ಬಯಸುತ್ತೇನೆ”, ಎಂದು ಹೇಳಿದ್ದಾರೆ.

“ಕೇಂದ್ರೀಯ ಶಾಲೆಗಳಲ್ಲಿ ಪ್ರಾಚೀನ ಅಭ್ಯಾಸಕ್ರಮವಾದ ಯೋಗವನ್ನು ದೈಹಿಕ ಶಿಕ್ಷಣದ ಅವಿಭಾಜ್ಯ ಭಾಗವಾಗಿಸುತ್ತಿರುವುದು ನಿಜ, ಆದರೆ ರಾಜ್ಯ ಸರ್ಕಾರದ ಅಡಿಯಲ್ಲಿ ಬರುವ ಶಾಲೆಗಳಲ್ಲಿ ಸಹ ಇದನ್ನು ಜಾರಿಗೆ ತರುವುದು ಆಯಾ ರಾಜ್ಯ ಸರ್ಕಾರಗಳ ಆಯ್ಕೆಗೆ ಬಿಟ್ಟಿದ್ದು”, ಎಂದು ಅವರು ಹೇಳಿದ್ದಾರೆ.

ಯೋಗವನ್ನು ಈಗಾಗಲೇ ಸಹಶಿಕ್ಷಣ ಚಟುವಟಿಕೆ ಅಡಿಯಲ್ಲಿ ಕೇಂದ್ರೀಯ ವಿದ್ಯಾಲಯಗಳು ಮತ್ತು ನವೋದಯ ವಿದ್ಯಾಲಯಗಳಲ್ಲಿ ಐಚ್ಛಿಕ ವಿಷಯವಾಗಿ ಕಲಿಸಲಾಗುತ್ತದೆ.

Write A Comment