ರಾಷ್ಟ್ರೀಯ

ಪತ್ರಕರ್ತನ ಹತ್ಯೆ ಪ್ರಕರಣ: ಜೋಗಿಂದರ್ ತಂದೆಗೆ 20 ಲಕ್ಷ ರೂ, ಉದ್ಯೋಗ ಕೊಡಿಸುವ ಆಮಿಷವೊಡ್ಡಿದ ಆರೋಪಿ ಸಚಿವ

Pinterest LinkedIn Tumblr

cri

ಪತ್ರಕರ್ತ ಜೋಗಿಂದರ್ ಸಿಂಗ್ ಹತ್ಯೆ ಪ್ರಕರಣವನ್ನು ಮುಚ್ಚಿಹಾಕಲು ಉತ್ತರಪ್ರದೇಶ ಸರಕಾರ ಹಲವಾರು ಪ್ರಯತ್ನಗಳನ್ನು ನಡೆಸಿದೆ. ಇದೀಗ ಜೋಗಿಂದರ್ ಸಿಂಗ್ ತಂದೆಗೆ 20 ಲಕ್ಷ ರೂಪಾಯಿ ಹಾಗೂ ಸರಕಾರಿ ಉದ್ಯೋಗವನ್ನು ನೀಡುವ ಭರವಸೆಯನ್ನು ಆರೋಪಿ ಸಚಿವ ಒಡ್ಡಿದ್ದಾನೆ ಎನ್ನಲಾಗಿದೆ.

ಜೋಗಿಂದರ್ ಸಿಂಗ್ ಅಂತ್ಯಕ್ರಿಯೆಯಾಗಿ 13 ದಿನಗಳ ನಂತರ ವಿಧಿ ವಿಧಾನಗಳನ್ನು ಪೂರೈಸುತ್ತಿರುವ ಸಂದರ್ಭದಲ್ಲಿ ಆರೋಪಿ ಸಚಿವ ರಾಮಮೂರ್ತಿ ವರ್ಮಾಯವರ ಬೆಂಬಲಿಗನೊಬ್ಬ, ಜೋಗಿಂದರ್ ಸಿಂಗ್ ತಂದೆಯನ್ನು ಭೇಟಿ ಮಾಡಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಕಳೆದ ಜೂನ್ 1 ರಂದು ನಗರದ ಸದರ್ ಬಜಾರ್‌ನ ವಿಕಾಸ್ ಕಾಲೋನಿಯಲ್ಲಿ ವಾಸವಾಗಿದ್ದ ಪತ್ರಕರ್ತ ಜೋಗಿಂದರ್ ಸಿಂಗ್‌‌ನನ್ನು ಪೊಲೀಸು ಜೀವಂತವಾಗಿ ದಹಿಸಲು ಯತ್ನಿಸಿದ್ದರು. ಆದರೆ ಸುಟ್ಟಗಾಯಗಳಿಂದ ಆಸ್ಪತ್ರೆಗೆ ದಾಖಲಾಗಿ ಸುಮಾರು ಎಂಟು ದಿನಗಳ ನಂತರ ಸಾವನ್ನಪ್ಪಿದ್ದ. ನನ್ನ ಹತ್ಯೆಗೆ ಸಮಾಜವಾದಿ ಪಕ್ಷದ ಸಚಿವ ರಾಮಮೂರ್ತಿ ವರ್ಮಾ ಕಾರಣರಾಗಿದ್ದಾರೆ ಎಂದು ಹೇಳಿಕೆ ನೀಡಿದ್ದ.

ಸಚಿವ ರಾಮಮೂರ್ತಿ ಅಕ್ರಮ ಗಣಿಗಾರಿಕೆ, ಒತ್ತಾಯಪೂರ್ವಕವಾಗಿ ಭೂಮಿ ಕಬಳಿಕೆ ಸೇರಿದಂತೆ ಹಲವಾರು ಅಪರಾಧ ಚಟುವಟಿಕಗಳಲ್ಲಿ ಪಾಲ್ಗೊಂಡಿದ್ದಾರೆ ಎಂದು ಪತ್ರಕರ್ತ ಜೋಗಿಂದರ್ ಸಿಂಗ್ ವರದಿ ಮಾಡಿದ್ದರು.

ಪತ್ರಕರ್ತ ಜೋಗಿಂದರ್ ಸಿಂಗ್ ಹತ್ಯೆಯಲ್ಲಿ ಸಚಿವ ವರ್ಮಾ ಅವರ ಕೈವಾಡವಿದೆ ಎನ್ನುವ ಬಗ್ಗೆ ಸಂಪೂರ್ಣ ತನಿಖೆಯ ವಿವರ ಬಹಿರಂಗವಾಗುವವರೆಗೆ ಅವರ ವಿರುದ್ಧ ಕ್ರಮಕೈಗೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಅಖಿಲೇಶ್ ಯಾದವ್ ತಳ್ಳಿಹಾಕಿದ್ದರು.

ಜೋಗಿಂದರ್ ಸಿಂಗ್ ಹತ್ಯೆ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವಂತೆ ಒತ್ತಾಯಿಸಿ ಸಿಂಗ್ ಕುಟುಂಬದ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ. ಇದೇ ಸಂದರ್ಭದಲ್ಲಿ ಯಾರಿಗೂ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಸಿಎಂ ಅಖಿಲೇಶ್ ಘೋಷಿಸಿದ್ದಾರೆ.

Write A Comment