ರಾಷ್ಟ್ರೀಯ

ಗಡಿಯಲ್ಲಿ ಉಗ್ರರ ರಕ್ತ ಹರಿಸಿದ ಭಾರತೀಯ ಯೋಧರು

Pinterest LinkedIn Tumblr

8914kupwara-terrorists-killed-384x288

ಭಾರತದ ಗಡಿಯಲ್ಲಿ ಉಗ್ರರ ಅಟ್ಟಹಾಸ ಮುಂದುವರೆದಿದ್ದು ಉತ್ತರ ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಮಚಿಲ್ ಸೆಕ್ಟರ್‌ನಲ್ಲಿ ಭಾರತದ ಗಡಿಯೊಳಗೆ ನುಸುಳುತ್ತಿದ್ದ ಇಬ್ಬರು ಉಗ್ರರನ್ನು ಗಡಿಭದ್ರತಾ ಪಡೆಯ ಯೋಧರು ಹತ್ಯೆ ಮಾಡಿದ್ದಾರೆ.

ಶನಿವಾರ ರಾತ್ರಿಯಿಂದ ಈ ಪ್ರದೇಶದಲ್ಲಿ ಉಗ್ರರು ಸುಳಿದಾಡುವುದನ್ನು ಗಮನಿಸಿದ  ಬಿಎಸ್‌ಎಫ್ ಯೋಧರು ಗುಂಡಿನ ದಾಳಿ ನಡೆಸಿದ್ದು ಇದಕ್ಕೆ ಪ್ರತಿಯಾಗಿ ಉಗ್ರರೂ ಸಹ ಗುಂಡಿನ ದಾಳಿ ನಡೆಸಿದ್ದಾರೆ. ಈ ಗುಂಡಿನ ಚಕಮಕಿಯಲ್ಲಿ ಶನಿವಾರ ರಾತ್ರಿ ಒಬ್ಬ ಹತನಾದರೆ ಭಾನುವಾರ ಮುಂಜಾನೆ ಮತ್ತೊಬ್ಬ ಉಗ್ರ ಬಲಿಯಾಗಿದ್ದಾನೆ ಎಂಬ ಮಾಹಿತಿ ಲಭಿಸಿದೆ.

ಕೆಲ ದಿನಗಳಿಂದ ಭಾರತಕ್ಕೆ ನುಸುಳಲು ಉಗ್ರರು ಸಂಚು ರೂಪಿಸುತ್ತಿದ್ದು ಇದಕ್ಕೆ ಪಾಕ್ ಸೇನೆ ಸಹಕರಿಸುತ್ತಿದೆ ಎನ್ನಲಾಗಿದೆ. ಮಚಿಲ್ ಸೆಕ್ಟರ್‌ನ ಸರದಾರಿ ನಾರ್‌ನ ಗಡಿ ನಿಯಂತ್ರಣಾ ರೇಖೆ ಬಳಿ ಉಗ್ರರ ಗುಂಪೊಂದು ಒಳ ನುಸುಳುವ ಯತ್ನದಲ್ಲಿದ್ದಾಗಲೇ ಸೇನಾಪಡೆಗಳು ದಾಳಿ ನಡೆಸಿ ಹಿಮ್ಮೆಟ್ಟಿಸಿದ್ದಾರೆ ಎಂದು ಸೇನಾಪಡೆ ಮೂಲಗಳು ಸ್ಪಷ್ಟಪಡಿಸಿವೆ.

Write A Comment