ರಾಷ್ಟ್ರೀಯ

ಯೋಗಾಸನದಿಂದ ದೂರ ಉಳಿದ ಅಮಿತ್‌ ಷಾ

Pinterest LinkedIn Tumblr

amith shah

ಪಟ್ನಾ (ಐಎಎನ್‌ಎಸ್‌): ಅಂತರರಾಷ್ಟ್ರೀಯ ಯೋಗ ದಿನದ ಅಂಗವಾಗಿ ಪಟ್ನಾದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಷಾ ಅವರು ಯೋಗಾಸನ ಮಾಡುವುದರಿಂದ ದೂರ ಉಳಿದಿದ್ದಾರೆ.

ಮೊಯ್ನುಲ್‌ ಹಖ್‌ ಕ್ರೀಡಾಂಗಣದಲ್ಲಿ ನಡೆದ ಸಾಮೂಹಿಕ ಯೋಗ ಕಾರ್ಯಕ್ರಮದಲ್ಲಿ ಅಮಿತ್‌ ಷಾ ಭಾಗವಹಿಸಿದ್ದರು. ಆದರೆ, ಅವರು ಯಾವುದೇ ಆಸನಗಳನ್ನು ಮಾಡಲಿಲ್ಲ. ಅಮಿತ್‌ ಷಾ ಯೋಗ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಆದರೆ, ಆಸನಗಳಿಂದ ದೂರ ಉಳಿದರು. ಇದರಿಂದ ನೂರಾರು ಜನರಿಗೆ ನಿರಾಸೆಯಾಯಿತು ಎಂದು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದವರೊಬ್ಬರು ತಿಳಿಸಿದ್ದಾರೆ.

ಬಿಹಾರದ ಮುಖ್ಯಮಂತ್ರಿ ನಿತೀಶ್‌ ಕುಮಾರ್‌, ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್‌ ಯಾದವ್‌, ಬಿಹಾರ ರಾಜ್ಯ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಅಶೋಕ್‌ ಚೌಧರಿ ಸೇರಿದಂತೆ ಹಲವರು ಯೋಗ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರಲಿಲ್ಲ.

Write A Comment