ರಾಷ್ಟ್ರೀಯ

ಮೊದಲ ಬಾರಿಗೆ ‘ವಿಶ್ವ ಯೋಗ ದಿನ’ ಆಚರಣೆ : ‘ಯೋಗಪಥ’ವಾದ ರಾಜಪಥ್; ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿ ತಾವೂ ಯೋಗದಲ್ಲಿ ಮಗ್ನ

Pinterest LinkedIn Tumblr

Yoga_June 21_2015-002

ನವದೆಹಲಿ, ಜೂ.21: ಇಂದು ವಿಶ್ವದಾದ್ಯಂತ ಇದೆ ಮೊದಲ ಬಾರಿಗೆ ‘ವಿಶ್ವ ಯೋಗ ದಿನ’ ವನ್ನು ಆಚರಿಸಲಾಗುತ್ತಿದ್ದು. ಭಾರತ ಸೇರಿದಂತೆ ವಿಶ್ವದ 177 ರಾಷ್ಟ್ರಗಳಲ್ಲಿ ಯೋಗ ಅಭ್ಯಾಸವನ್ನು ಮಾಡುವ ಮೂಲಕ ಯೋಗದಿನವನ್ನ ಆಚರಿಸಲಾಗುತ್ತಿದೆ. ದೆಹಲಿಯಲ್ಲಿ 40 ಸಾವಿರಕ್ಕೂ ಅಧಿಕ ಮಂದಿ ಸಾಮೂಹಿಕ ಯೋಗ ಮಾಡುವ ಮೂಲಕ ಯೋಗದ ಮಹತ್ವ ಸಾರಿದರು.

ಬೆಳಿಗ್ಗೆ 7 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಯೋಗ ದಿನಾಚರಣೆಗೆ ಚಾಲನೆ ನೀಡಿ ತಾವೂ ಯೋಗದಲ್ಲಿ ಮಗ್ನರಾದರು. ಬಹುತೇಕ ಜನರು ಯೋಗ ಎಂದರೆ ಕೇವಲ ದೈಹಿಕ ವ್ಯಾಯಾಮ ಎಂದಷ್ಟೆ ಭಾವಿಸಿದ್ದಾರೆ. ಅದೇ ದೊಡ್ಡ ತಪ್ಪು. ಅದು ದೇಹ ಮತ್ತು ಮನಸ್ಸುಗಳನ್ನು ಬೆಸೆಯುವ ಆಧ್ಯತ್ಮಿಕ ಪ್ರಕ್ರಿಯೆ ಎಂದು ಪ್ರಧಾನಿ ನರೇಂದ್ರಮೋದಿ ಹೇಳಿದ್ದಾರೆ.

Yoga_June 21_2015-003

Yoga_June 21_2015-004

Yoga_June 21_2015-005

Yoga_June 21_2015-006

Yoga_June 21_2015-007

Yoga_June 21_2015-008

ದೈಹಿಕ ವ್ಯಾಯಾಮ, ಪೆಸಿಫಿಕ್ ಫಿಟ್‌ನೆಸ್ ಹೊರತಾಗಿ ವಿಶೇಷವಾದ್ದು ಯೋಗದಲ್ಲಿದೆ. ದೈಹಿಕ ವ್ಯಾಯಾಮವಷ್ಟೇ ಯೋಗ ಆಗಿದ್ದರೆ, ಬೀದಿ ಬದಿಯಲ್ಲಿ ಸರ್ಕಸ್ ಮಾಡುವ ದೊಂಬರಾಟದ ಮಕ್ಕಳೆಲ್ಲ ಯೋಗಿಗಳು ಆಗಬೇಕಿತ್ತು ಎಂದು ಅವರು ಅಭಿಪ್ರಾಯಪಟ್ಟರು.

ಯೋಗದಿನ ಆಚರಣೆ ಪರಿಕಲ್ಪನೆಗೆ ಸ್ಪಂದಿಸಿದ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಬಾನ್-ಕಿ-ಮೂನ್, ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಸೇರಿದಂತೆ ಯೋಗದಿನಕ್ಕೆ ಕೈ ಜೋಡಿಸಿದ ಎಲ್ಲ ಅಂತಾರಾಷ್ಟ್ರೀಯ ನಾಯಕರಿಗೂ ಮೋದಿ ಕೃತಜ್ಞತೆ ಹೇಳಿದರು. ವಿಶ್ವದ ಜನತೆಗೆ ಶಾಂತಿ-ಸದ್ಭಾವನೆಗಳನ್ನು ನೀಡುವ ನೂತನ ಯುಗವೊಂದರ ಮುಂಬೆಳಕು ಇದಾಗಿದೆ ಎಂದು ನರೇಂದ್ರಮೋದಿ ಅಂತಾರಾಷ್ಟ್ರೀಯ ಯೋಗ ದಿನವನ್ನು ಬಣ್ಣಿಸಿದರು. 191 ರಾಷ್ಟ್ರಗಳಲ್ಲಿ ಇಂದು ಏಕಕಾಲದಲ್ಲಿ ಯೋಗದಿನದ ಆಚರಣೆ ಅತ್ಯಂತ ಯಶಸ್ವಿಯಾಗಿ ನಡೆದಿರುವುದು ಸಂತಸ ಉಂಟುಮಾಡಿದೆ ಎಂದು ಅವರು ಹೇಳಿದರು.

Yoga_June 21_2015-009

Yoga_June 21_2015-010

Yoga_June 21_2015-011

Yoga_June 21_2015-012

Yoga_June 21_2015-013

Yoga_June 21_2015-014

Yoga_June 21_2015-015

Yoga_June 21_2015-016

ಸಭೆಯನ್ನುದ್ದೇಶಿಸಿ ಮಾತನಾಡುವುದಕ್ಕಷ್ಟೇ ಪ್ರಧಾನಿಗಳು ಭಾಗವಹಿಸುತ್ತಾರೆ ಎಂದು ಭಾವಿಸಿದ್ದ ಜನತೆಗೆ ಅಚ್ಚರಿ ನೀಡಿದ ಮೋದಿ ನಂತರ ಎಲ್ಲರೊಂದಿಗೆ ಸಾಮೂಹಿಕ ಯೋಗಾಸನದಲ್ಲಿ ಪಾಲ್ಗೊಂಡು ವಿವಿಧ ಆಸನಗಳನ್ನು ಮಾಡಿದರು.

ರಾಜ್‌ಪಥ್‌ನಲ್ಲಿ ಸೇರಿದ್ದ ಸುಮಾರು 40 ಸಾವಿರ ಯೋಗಪಟುಗಳಲ್ಲಿ ಮಕ್ಕಳೂ ಇದ್ದರು. ಸೇನಾ ಮುಖ್ಯಸ್ಥ ದಲ್‌ಬೀರ್‌ಸಿಂಗ್ ಸುಹಾಗ್, ಏರ್‌ಚೀಫ್ ಮಾರ್ಷಲ್ (ವಾಯುಪಡೆ ಮುಖ್ಯಸ್ಥ) ಅರುಪ್‌ರಹಾನ್ ಮತ್ತು ವಾಯುಪಡೆ ಮುಖ್ಯಸ್ಥ ಆರ್.ಕೆ.ಧೋವನ್ ಅವರು ಪ್ರಧಾನಿಯ ಜತೆ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ವಿಶ್ವದ ಅತ್ಯಂತ ಎತ್ತರದ ಯುದ್ಧಭೂಮಿ ಎಂದೇ ಪರಿಗಣಿಸಲಾಗಿರುವ ಸಿಯಾಚಿನ್‌ನಿಂದ ದಕ್ಷಿಣ ಚೀನಾ ಸಮುದ್ರದವರೆಗೆ ಭಾರತೀಯ ಸಶಸ್ತ್ರ ಪಡೆಗಳ ಯೋಧರು ಇಂದು ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಕಾರ್ಗಿಲ್, ಲಡಾಖ್ ಸೇರಿದಂತೆ ಎಲ್ಲ ಪ್ರದೇಶಗಳಲ್ಲಿ ಕೊರೆಯುವ ಚಳಿಯಲ್ಲೂ ಯೋಧರು ಬೆಳಗ್ಗೆ 7 ಗಂಟೆಗೆ ಯೋಗಾಭ್ಯಾಸ ಮಾಡಿದರು. ವಿಶೇಷವೆಂದರೆ ರಾಜ್‌ಪಥ್‌ನಲ್ಲಿ ಇಂದು ನಡೆದ ಯೋಗ ಕಾರ್ಯಕ್ರಮದಲ್ಲಿ ಬೆಂಗಳೂರಿನ ಸ್ವಾಮಿ ವಿವೇಕಾನಂದ ಕೇಂದ್ರದ ಮುಖ್ಯಸ್ಥ ನಾಗೇಂದ್ರ ಅವರು ಉಪಸ್ಥಿತರಿದ್ದರು. ಹಾಗೆಯೇ ದೇಶದ ವಿವಿಧ ಯೋಗ ಶಾಲೆಗಳ ಮುಖ್ಯಸ್ಥರೂ ಭಾಗವಹಿಸಿದ್ದರು.

Yoga_June 21_2015-017

Yoga_June 21_2015-018

Yoga_June 21_2015-019

Yoga_June 21_2015-020

ಸಂಭ್ರಮ -ಸಡಗರದಿಂದ ಭಾಗವಹಿಸಿದ್ದ ಮಕ್ಕಳು
ಸಾವಿರಾರು ಮಂದಿ ಶಾಲಾ ಮಕ್ಕಳಿಗೆ ಇಂದು ಅತ್ಯಂತ ಸಡಗರದ ದಿನವಾಗಿತ್ತು. ರಾಜಪತ್‌ನಲ್ಲಿ ಅಂತಾರಾಷ್ಟ್ರೀಯ ಯೋಗ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ಮಾತ್ರವಲ್ಲದೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹತ್ತಿರದಲ್ಲಿ ಕಾಣುವ ಮತ್ತು ಅವರೊಂದಿಗೆ ಆಸನಗಳನ್ನು ಪ್ರದರ್ಶಿಸುವ ಆ ಘಳಿಗೆಯನ್ನು ನೆನೆದು ರೋಮಂಚಿತರಾಗಿದ್ದರು. ಕಾರ್ಯಕ್ರಮದ ನಂತರ ತಮ್ಮತ್ತ ಸಾಗಿಬಂದ ಪ್ರಧಾನಿಯವರನ್ನು ಅಭಿನಂದಿಸಲು ಮಕ್ಕಳು ಉದ್ವಿಗ್ನತೆಯಿಂದ ಕಾಯುತ್ತಿದ್ದರು. ಸರ್ವೋದಯ ಕನ್ಯ್ ವಿದ್ಯಾಲಯದ 6ನೇ ತರಗತಿ ವಿದ್ಯಾರ್ಥಿನಿ ಊರ್ವಶಿಗೆ ಮೋದಿ ಭೇಟಿ ಮಾಡುವ ಬಹುದಿನಗಳ ಕನಸು ಇಂದು ನನಸಾಗಿತ್ತು.

ನಾವು ಕಳೆದ ಒಂದು ತಿಂಗಳಿನಿಂದ ಯೋಗಾಭ್ಯಾಸದಲ್ಲಿ ತೊಡಗಿದ್ದೆವು. ಯೋಗದಿಂದ ನಮಗೆ ಒಳ್ಳೆಯ ಶಿಸ್ತು ಆರೋಗ್ಯ ಸಿಕ್ಕಿದೆ ಎನ್ನುತ್ತಾಳೆ 8ನೇ ತರಗತಿ ವಿದ್ಯಾರ್ಥಿನಿ ತೃಷ್ಣಾ. ಮಕ್ಕಳಂತೆಯೇ ನಮಗೂ ಇದೊಂದು ಮರೆಯಲಾಗದ ಘಟನೆ. ನಮ್ಮ ಇಡೀ ಜೀವಮಾನದಲ್ಲಿ ಇದೊಂದು ಅಚ್ಚಳಿಯದೆ ನೆನಪಿನಲ್ಲುಳಿಯುವ ಘಳಿಗೆ ಎನ್ನುವುದು ಮಕ್ಕಳ ಜೊತೆ ಬಂದಿರುವ ಶಿಕ್ಷಕಿಯೊಬ್ಬರ ಅನುಭವ. ಇಂದಿನ ಈ ಸಂತಸದ ಕ್ಷಣಕ್ಕಿಂತ ಮಿಗಿಲಾದದ್ದು, ಇನ್ನು ನಮ್ಮ ಬದುಕಿನಲ್ಲಿ ಬೇರಾವುದೂ ಇರಲಾರದು. ನಮ್ಮಂತಹ ಗೃಹಿಣಿಯರಿಗೆ ಇದೊಂದು ಸುವರ್ಣಾವಕಾಶ ಎನ್ನುತ್ತಾರೆ. ಮಹಿಳಾ ಸಂಘದ ಮುಖ್ಯಸ್ಥೆಯೊಬ್ಬರು ಈ ಕಾರ್ಯಕ್ರಮದಲ್ಲಿ ಸುಮಾರು 35 ಸಾವಿರಕ್ಕೂ ಹೆಚ್ಚು ಜನ ಸೇರಿದ್ದರು.

Write A Comment