ರಾಷ್ಟ್ರೀಯ

ಉದ್ಯೋಗ ಕೊಡಿಸ್ತೀನಿ ಬಾ ಎಂದು ಮಂಚ ಹತ್ತಿಸಿದ ಕಾಮುಕ !

Pinterest LinkedIn Tumblr

7084Rape-3

ಉದ್ಯೋಗ ನೀಡುವ ಭರವಸೆ 23 ವರ್ಷದ ನೀಡಿ ಮಹಿಳೆಯೊಬ್ಬಳನ್ನು ಕರೆದೊಯ್ದ ಕಾಮುಕನೊಬ್ಬ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಲ್ಲದೇ ತನ್ನ ಆರು ಮಂದಿ ಸ್ನೇಹಿತರನ್ನೂ ಕರೆಯಿಸಿ ಸಾಮೂಹಿಕವಾಗಿ ಅತ್ಯಾಚಾರ ನಡೆಸಿದ ಅಮಾನವೀಯ ಘಟನೆಯೊಂದು ವರದಿಯಾಗಿದೆ.

ಪಶ್ಚಿಮ ಬಂಗಾಲದಲ್ಲಿ ಈ ಘಟನೆ ನಡೆದಿದ್ದು ಇಲ್ಲಿನ ಬರ್‌ದ್ವಾನ್‌ನಿಂದ ಪತಿಯಿಂದ ದೂರವಾಗಿ ಉದ್ಯೋಗ ಅರಿಸಿ ಬಂದಿದ್ದ ಮಹಿಳೆ ಇಲ್ಲಿನ ಪ್ರಸಿದ್ಧ ಸುಶಾಂತ್‌ ಲೋಕ್‌-1ರಲ್ಲಿರುವ ವ್ಯಾಪಾರ ಕೇಂದ್ರ ಮಾರುಕಟ್ಟೆಗೆ ಹೋಗಿದ್ದಳು. ಈ ಸಮಯದಲ್ಲಿ  ಜ್ಯೂಸ್‌ ಅಂಗಡಿಯೊಂದರಲ್ಲಿ ಆಕೆ ಅದೇ ಅಂಗಡಿಗೆ ಬಂದಿದ್ದ ಕಪಿಲ್‌ ಯಾದವ್‌ ಎಂಬಾತನ ಪರಿಚಯವಾಗಿ ತಾನು ಉದ್ಯೋಗ ಅರಸುತ್ತಿರುವುದಾಗಿ ಮಹಿಳೆ ತಿಳಿಸಿದ್ದು ಆಕೆಯನ್ನು ನೋಡಿದ ಕಾಮುಕ ತನ್ನ ಕಚೇರಿಯಲ್ಲಿ ಉದ್ಯೋಗ ಖಾಲಿಯಿದ್ದು ಕೊಡಿಸುತ್ತೇನೆ ಎಂದು ಪುಸಲಾಯಿಸಿ ಕರೆದೊಯ್ದಿದ್ದಾನೆ.

ಆದರೆ ಕಪಿಲ್‌ ಯಾದವ್‌ ಆಕೆಯನ್ನು ಹ್ಯಾಮಿಲ್ಟನ್‌ ಕೋರ್ಟ್‌ಗೆ ಸಮೀಪವಿರುವ ಡಿಎಲ್‌ಎಫ್ – ನಾಲ್ಕನೇ ಗೆಸ್ಟ್‌ ಹೌಸ್‌ಗೆ ಒಯ್ದ. ಅಲ್ಲಿ 304ನೇ ಕೋಣೆಗೆ ಆಕೆಯನ್ನು ಕರೆದೊಯ್ದು ಅಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದು ಆಕೆಯನ್ನು ಬೆದರಿಸಿದ್ದಲ್ಲದೇ  ತನ್ನ ಆರು ಮಂದಿ ಸ್ನೇಹಿತರಿಗೆ ಫೋನ್‌ ಮಾಡಿ ರಾತ್ರಿ 10 ಗಂಟೆಯ ಹೊತ್ತಿಗೆ ಬರಮಾಡಿಕೊಂಡು ರಾತ್ರಿಯಿಡೀ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಬೆಳಗ್ಗೆ  ಆಕೆಯನ್ನು ಆಕೆಯ ಮನೆ ಸಮೀಪ ಬಿಟ್ಟು ಹೋಗಿದ್ದಾರೆ.

ಅತ್ಯಾಚಾರಕ್ಕೊಳಗಾದ ಮಹಿಳೆ ಸ್ಥಳೀಯ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಗೆಸ್ಟ್‌ಹೌಸ್‌ ಮೇಲೆ ದಾಳಿ ನಡೆಸಿ ವಿಚಾರಣೆ ನಡೆಸಿದ್ದು ನಾಪತ್ತೆಯಾಗಿರುವ ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Write A Comment