ರಾಷ್ಟ್ರೀಯ

‘ಅಮ್ಮ’ನ ಬೆನ್ನಿಗೆ ವಿದೇಶಕ್ಕೆ ಹೋದ ರಾಹುಲ್ !

Pinterest LinkedIn Tumblr

479317-rahul-sonia-gandhi-priyanka1

ಮೋದಿ ಸರ್ಕಾರದ ವಿರುದ್ದ ಇತ್ತೀಚೆಗಷ್ಟೇ ಕಿಡಿ ಕಾರಲು ಪ್ರಾರಂಭಿಸಿದ್ದ ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ಅವರು ತಾಯಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಸಹೋದರಿ ಪ್ರಿಯಾಂಕಾ ಗಾಂಧಿ ಅವರ ಜತೆ ಮತ್ತೆ ವಿದೇಶ ಪ್ರವಾಸ ಕೈಗೊಂಡಿದ್ದಾರೆ.

ವೈಯಕ್ತಿಕ ಕಾರಣಗಳಿಂದಾಗಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಿದೇಶ ಪ್ರವಾಸಕ್ಕೆ ತೆರಳಿದ್ದಾರೆ ಎನ್ನಲಾಗುತ್ತಿದ್ದು  ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಮೊದಲು ವಿದೇಶಕ್ಕೆ ತೆರಳಿದರೆ, ನಂತರ ರಾಹುಲ್ ಗಾಂಧಿ ಪ್ರಯಾಣ ಬೆಳೆಸಿದ್ದಾರೆ ಎನ್ನಲಾಗಿದೆ.

ಬಲ್ಲ ಮೂಲಗಳ ಪ್ರಕಾರ ಸೋನಿಯಾ ಕುಟುಂಬದ ವಿದೇಶ ಪ್ರವಾಸದ ಕಾರಣ ತಿಳಿದು ಬಂದಿಲ್ಲವಾದರೂ ಒಂದು  ವಾರಗಳ ಕಾಲ ವಿದೇಶದಲ್ಲಿಯೇ ತಂಗಲಿದ್ದಾರೆ ಎಂಬ ಮಾಹಿತಿ ಲಭಿಸಿದೆ.

Write A Comment