ರಾಷ್ಟ್ರೀಯ

ನ್ಯಾಯಾಲಯದ ಆವರಣದಲ್ಲಿಯೇ ಪತ್ನಿಯ ಪ್ರಿಯಕರನನ್ನು ಇರಿದು ಕೊಂದ ಪತಿ

Pinterest LinkedIn Tumblr

5235murder-representative-image-pti.jpg.image.784.410

ಕೇರಳ: ಪತ್ನಿ ಮತ್ತು ಆತನ ಪ್ರಿಯಕರನನ್ನು ನ್ಯಾಯಾಲಯದ ಆವರಣದಲ್ಲಿಯೇ ಪತಿಯೊಬ್ಬ ಇರಿದಿದ್ದು, ತೀವ್ರವಾಗಿ ಗಾಯಗೊಂಡಿದ್ದ ಪತ್ನಿಯ ಪ್ರಿಯಕರ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರೆ, ಪತ್ನಿ ಜೀವನ್ಮರಣದ ಹೋರಾಟ ನಡೆಸುತ್ತಿದ್ದಾಳೆ.

ಕೇರಳದಲ್ಲಿ ಈ ಘಟನೆ ನಡೆದಿದ್ದು, ಸುನೀಲ್ ಎಂಬಾತನ ಪತ್ನಿ ಬಿಂದು ತನ್ನ ಪತಿಯನ್ನು ತೊರೆದು ಪ್ರಿಯಕರ ಜಿಂಟು ಎಂಬವನ ಜೊತೆ ತನ್ನ ಮಗುವಿನೊಂದಿಗೆ ವಾಸಿಸುತ್ತಿದ್ದಳೆನ್ನಲಾಗಿದೆ. ಮಗುವನ್ನು ತನ್ನ ವಶಕ್ಕೆ ಪಡೆಯುವ ಸಲುವಾಗಿ ಸುನೀಲ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದು, ಇದರ ವಿಚಾರಣೆಗೆಂದು ಬಂದ ವೇಳೆ ಈ ಕೃತ್ಯವೆಸಗಿದ್ದಾನೆ.

ಗುರುವಾರದಂದು ವಿಚಾರಣೆಗಾಗಿ ಬಿಂದು ತನ್ನ ಪ್ರಿಯಕರ ಜಿಂಟು ಜೊತೆ ನ್ಯಾಯಾಲಯಕ್ಕೆ ಆಗಮಿಸಿದ್ದು, ಮೊದಲೇ ಸಿದ್ದನಾಗಿ ಬಂದಿದ್ದ ಆಕೆಯ ಪತಿ ಸುನೀಲ್, ಪತ್ನಿ ಮತ್ತಾಕೆಯ ಪ್ರಿಯಕರನನ್ನು ಚಾಕುವಿನಿಂದ ಇರಿದಿದ್ದಾನೆ. ಕುಸಿದು ಬಿದ್ದ ಇವರಿಬ್ಬರನ್ನು ಅಲ್ಲಿದ್ದವರು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಜಿಂಟು ಸಾವನ್ನಪ್ಪಿದ್ದಾನೆ. ಬಿಂದು ಚಿಂತಾಜನಕ ಸ್ಥಿತಿಯಲ್ಲಿದ್ದಾಳೆಂದು ಹೇಳಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Write A Comment