ರಾಷ್ಟ್ರೀಯ

ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಅಯೋಧ್ಯೆಯನ್ನು ಮರೆತಿದ್ದಾರೆ: ವಿಎಚ್‌ಪಿ ಆಕ್ರೋಶ

Pinterest LinkedIn Tumblr

rama

ಅಯೋಧ್ಯೆ: ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅಧಿಕಾರಕ್ಕೆ ಬಂದ ಮೇಲೆ ರಾಮಮಂದಿರ ವಿಷಯವನ್ನು ಮರೆತಿದ್ದಾರೆ. ಸಂಸತ್ತಿನಲ್ಲಿ ಕೂಡಲೇ ರಾಮಮಂದಿರ ನಿರ್ಮಾಣಕ್ಕಾಗಿ ಮಸೂದೆಯನ್ನು ಮಂಡಿಸಬೇಕು ಎಂದು ವಿಶ್ವ ಹಿಂದು ಪರಿಷತ್ ಅಂಗ ಸಂಸ್ಥೆಯಾದ ರಾಮಜನ್ಮಭೂಮಿ ನ್ಯಾಸ್ ಅಸಮಾಧಾನ ವ್ಯಕ್ತಪಡಿಸಿದೆ.

ಪ್ರಧಾನಿ ಮೋದಿ ವಾರಣಾಸಿ, ಮಥುರಾ, ನೇಪಾಳ ಮತ್ತು ಬಾಂಗ್ಲಾದೇಶಗಳಿಗೆ ತೆರಳಿದ್ದಾರೆ. ಆದರೆ ಅಯೋಧ್ಯೆಗೆ ಭೇಟಿ ನೀಡುವುದು ಮರೆತಿದ್ದಾರೆ ಎಂದು ನ್ಯಾಸ್ ಸಮಿತಿಯ ಹಿರಿಯ ಸದಸ್ಯರಾದ ರಾಮ್ ವಿಲಾಸ್ ವೇದಾಂತಿ ವಿಷಾದ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಅಯೋಧ್ಯೆಗೆ ಭೇಟಿ ನೀಡಿದ್ದರು. ಆದರೆ,ಇದೀಗ ಅವರೂ ಮರೆತಿದ್ದಾರೆ. ರಾಮಮಂದಿರ ನಿರ್ಮಾಣಕ್ಕಾಗಿ ಸರಕಾರ ಆದಷ್ಟು ಶೀಘ್ರ ಸಂಸತ್ತಿನಲ್ಲಿ ಮಸೂದೆ ಮಂಡಿಸಬೇಕು ಎಂದು ಒತ್ತಾಯಿಸಿದರು.

ರಾಮಮಂದಿರ ನಿರ್ಮಾಣದ ಉನ್ನತ ಸಮಿತಿ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತದೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಬೇಕು ಎನ್ನುವುದು ಕೋಟಿ ಕೋಟಿ ಜನತೆಯ ಬಯಕೆಯಾಗಿದೆ. ಆದರೆ, ಅಧಿಕಾರರೂಢ ಬಿಜೆಪಿ ಸರಕಾರ ರಾಮಮಂದಿರ ನಿರ್ಮಾಣವನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತಿದೆ ಎಂದು ಆರೋಪಿಸಿದರು.

ರಾಮಜನ್ಮಭೂಮಿ ನ್ಯಾಸ್ ಆಯೋಜಿಸಿದ ಸಭೆಯಲ್ಲಿ ವಿಎಚ್‌ಪಿ ನಾಯಕ ಅಶೋಕ್ ಸಿಂಘಾಲ್ ಉಪಸ್ಥಿತರಿದ್ದು ಮಾತನಾಡಿದ ಅವರು, ರಾಮಮಂದಿರ ನಿರ್ಮಾಣ ಮತ್ತು ಹರಿದ್ವಾರದಲ್ಲಿ ದೇವಾಲಯ ನಿರ್ಮಾಣದ ವಿಷಯಗಳು ಪ್ರಸ್ತು ನ್ಯಾಯಾಲಯದಲ್ಲಿರುವುದರಿಂದ ನ್ಯಾಯಾಲಯದ ಆದೇಶ ಬರುವವರೆಗೆ ತಾಳ್ಮೆ ಕಾಯಬೇಕಾಗುತ್ತದೆ. ನಾವು ಕಾನೂನಿಗಿಂತ ದೊಡ್ಡವರಲ್ಲ ಎಂದು ತಿಳಿಸಿದ್ದಾರೆ.

Write A Comment