ರಾಷ್ಟ್ರೀಯ

ಮುಸ್ಲಿಂ ಗುರುವಿನಿಂದ ಅಮಿತ್‌ ಶಾಗೆ ಯೋಗ ಪಾಠ

Pinterest LinkedIn Tumblr

Amit-Shah

ಪಟನಾ: ಅಂತಾರಾಷ್ಟ್ರೀಯ ಯೋಗ ದಿನದಂದು ಇಲ್ಲಿ ನಡೆಯಲಿರುವ ವಿಶೇಷ ಶಿಬಿರದಲ್ಲಿ ಮುಸ್ಲಿಂ ಯೋಗ ಶಿಕ್ಷಕರಿಂದ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ತರಬೇತಿ ಪಡೆಯಲಿದ್ದಾರೆ.

‘ಕಾರ್ಯಕ್ರಮದಲ್ಲಿ ಯೋಗ ಪರಿಣಿತರಾದ ಮೊಹಮ್ಮದ್‌ ತಮನ್ನಾ ಹಾಗೂ ಅಶೋಕ್‌ ಸರಕಾರ್‌ ಅವರಿಂದ ಅಮಿತ್ ಶಾ ಯೋಗ ಕಲಿಯಲಿದ್ದಾರೆ,’ ಎಂದು ಬಿಹಾರ-ಜಾರ್ಖಂಡ್‌ ಪತಂಜಲಿ ಯೋಗ ಪೀಠದ ಮುಖ್ಯಸ್ಥರಾದ ಅಜಿತ್‌ ಕುಮಾರ್‌ ತಿಳಿಸಿದ್ದಾರೆ.

ರವಿಶಂಕರ್‌ ಪ್ರಸಾದ್‌, ರಾಜೀವ್‌ ಪ್ರತಾಪ್‌ ರೂಢಿ, ರಾಧಾ ಮೋಹನ್‌ ಸಿಂಗ್‌, ರಾಮ್‌ ಕೃಪಾಲ್‌ ಯಾದವ್‌ ಸೇರಿದಂತೆ ಬಿಹಾರ ಮೂಲದ ಕೇಂದ್ರ ಸಚಿವರು ಪಟನಾದಲ್ಲಿ ನಡೆಯಲಿರುವ ಯೋಗ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ.

ನಿತೀಶ್‌ ಕಿಡಿ:

ಪಟನಾದ ಯೋಗ ಶಿಬಿರದಲ್ಲಿ ಶಾ ಪಾಲ್ಗೊಳ್ಳುತ್ತಿರುವುದು ರಾಜಕೀಯ ವಲಯದಲ್ಲಿ ಭಾರಿ ಚರ್ಚೆ ಹುಟ್ಟುಹಾಕಿದೆ. ಬಿಜೆಪಿ ಹಾಗೂ ಪ್ರಧಾನಿಯನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿರುವ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್, ‘ಯೋಗವನ್ನು ಪ್ರಚಾರ ಹಾಗೂ ಪ್ರದರ್ಶನದ ವಿಷಯವನ್ನಾಗಿಸಿಕೊಂಡಿದ್ದಾರೆ,’ ಎಂದು ಕುಟುಕಿದ್ದಾರೆ.

ಯೋಗ ಮಾಡುವಂತೆ ಕೇಂದ್ರ ಸಚಿವ ರವಿ ಶಂಕರ್‌ ಪ್ರಸಾದ್‌ ನಿತೀಶ್ ಕುಮಾರ್‌ ಸಲಹೆ ನೀಡಿರುವ ಬೆನ್ನಿಗೇ ಜೂನ್‌ 21ರ ಯೋಗ ಶಿಬಿರವನ್ನು ನಿತೀಶ್ ಕುಮಾರ್, ‘ದೊಡ್ಡ ಡ್ರಾಮಾ’ ಎಂದಿದ್ದಾರೆ.

Write A Comment