ರಾಷ್ಟ್ರೀಯ

ಜಮ್ಮು: ಕಾಶ್ಮೀರದಲ್ಲಿ ಮತ್ತೊಬ್ಬ ನಾಗರಿಕ ಗುಂಡಿಗೆ ಬಲಿ: ಜನರಲ್ಲಿ ಆತಂಕ

Pinterest LinkedIn Tumblr

anather-civilian

ಜಮ್ಮು, ಜೂ.15: ಜಮ್ಮು ಕಾಶ್ಮೀರದ ಸೋಪೂರ ಜಿಲ್ಲೆಯಲ್ಲಿ ದಿನವೂ ಅಪರಿಚಿತ ಉಗ್ರರು ನಾಗರೀಕರನ್ನು ಗುಂಡಿಟ್ಟು ಸಾಯಿಸುವುದು ಅವ್ಯಾಹತವಾಗಿ ನಡೆಯುತ್ತಿದೆ. ಇಂದು ಬೆಳಗ್ಗೆ ಕೂಡ ಅಪರಿಚಿತ ಬಂದೂಕುಧಾರಿಯೊಬ್ಬ ವ್ಯಕ್ತಿಯೊಬ್ಬನನ್ನು ನಿರ್ದಯವಾಗಿ ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ನಡೆದಿದೆ.

ಗುಂಡಿಗೆ ಬಲಿಯಾದ ವ್ಯಕ್ತಿ ಒಬ್ಬ ಮಾಜಿ ಉಗ್ರನಾಗಿದ್ದು, ಕಳೆದ ಹಲವು ವರ್ಷಗಳಿಂದ ಹಿಂಸೆ ತ್ಯಜಿಸಿ ಸಮಾಜದ ಮುಖ್ಯವಾಹಿನಿಯಲ್ಲಿ ಬದುಕುತ್ತಿದ್ದ. ಈ ವಾರದಲ್ಲಿ ನಡೆದ ನಾಲ್ಕನೆ ಹತ್ಯಾಕಾಂಡ ಇದಾಗಿದೆ. ನಿನ್ನೆ ಕೂಡ ಒಬ್ಬ ಅಂಗಡಿ ಮಾಲಿಕನನ್ನು ಅಪರಿಚಿತ ಬಂದೂಕುಧಾರಿ ಅಂಗಡಿಯಲ್ಲೇ ಹತ್ಯೆ ಮಾಡಿದ. ಮಾಜಿ ಉಗ್ರ ಕೂಡ ಸೊಪೊರ ಪಟ್ಟಣದಲ್ಲಿ ಅಂಗಡಿ ಇಟ್ಟಿದ್ದು, ವ್ಯಾಪಾರ ಮಾಡಿ ಬದುಕುತ್ತಿದ್ದಾನೆ. ಪ್ರತಿನಿತ್ಯ ಮಾಮೂಲಿಯಾಗಿರುವ ಈ ಘಟನೆಗಳಿಂದ ಈ ಪ್ರದೇಶದ ಜನ ಭಯಭೀತರಾಗಿ ಮನೆ ಸೇರುತ್ತಿದ್ದಾರೆ. ಹಂತಕರಿಗಾಗಿ ಪೊಲೀಸರು ಶೋಧಕಾರ್ಯ ಮುಂದುವರಿಸಿದ್ದಾರೆ. ಆದರೆ ಇದುವರೆಗೆ ಯಾರನ್ನೂ ಬಂಧಿಸಿಲ್ಲ.

Write A Comment