ರಾಷ್ಟ್ರೀಯ

ಗಣರಾಜ್ಯೋತ್ಸವ ದಿನಾಚರಣೆ ಮಾದರಿಯಲ್ಲಿ ಯೋಗ ದಿನಾಚರಣೆ ಕಾರ್ಯಕ್ರಮದ ಪ್ರಸಾರ

Pinterest LinkedIn Tumblr

yogaday

ನವದೆಹಲಿ: ನವದೆಹಲಿಯಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಕಾರ್ಯಕ್ರಮವನ್ನು ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದ ಮಾದರಿಯಲ್ಲಿ ಪ್ರಸಾರ ಮಾಡಲು ಸಾರ್ವಜನಿಕ ಪ್ರಸಾರಕ ದೂರದರ್ಶನ ನಿರ್ಧರಿಸಿದೆ.

ಪ್ರಧಾನಿ ನರೇಂದ್ರ ಮೋದಿಯೂ ಭಾಗವಹಿಸಲಿರುವ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಐತಿಹಾಸಿಕವಾಗಿಸಲು ಕೇಂದ್ರ ಸರ್ಕಾರ ಯೋಜನೆ ರೂಪಿಸಿದ್ದು, ಇದರ ಭಾಗವಾಗಿ  ಗಣರಾಜ್ಯೋತ್ಸವ ದಿನಾಚರಣೆ  ಕಾರ್ಯಕ್ರಮದ ಮಾದರಿಯಲ್ಲಿ ಪ್ರಸಾರ ಮಾಡಲು ಸಿದ್ಧತೆ ನಡೆಸಲಾಗಿದೆ.  ಇದಕ್ಕಾಗಿ 20  ಹೈ ಡೆಫನಿಷನ್  ಕ್ಯಾಮರಾಗಳನ್ನು ಬಳಕೆ ಮಾಡಲಾಗುತ್ತದೆ.  ಹೈಡೆಫನಿಷನ್ ಕ್ಯಾಮರಾಗಳನ್ನು ಇಂಡಿಯಾ ಗೇಟ್ ಮೇಲೆ  ನಿಯೋಜಿಸಲಾಗುತ್ತದೆ. ಜಿಬ್ಸ್ ಮೂಲಕ ಮತ್ತಷ್ಟು ಕ್ಯಾಮರಾಗಳು ರಾಜಪಥದಲ್ಲಿ ನಡೆಯಲಿರುವ ಯೋಗ ಕಾರ್ಯಕ್ರಮವನ್ನು ರೆಕಾರ್ಡ್ ಮಾಡಲಿವೆ. ಹೈಡ್ರಾಲಿಕ್ ಕ್ರೇನ್  ಮೂಲಕ ಮತ್ತೊಂದು ಕ್ಯಾಮರ  ರಾಜಪಥದಿಂದ ವಿಜಯ್ ಚೌಕ ವರೆಗೂ ನಡೆಯಲಿರುವ ಕಾರ್ಯಕ್ರಮವನ್ನು ಪ್ರಸಾರ ಮಾಡಲಿದೆ.

ಪ್ರಥಮ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ದಾಖಲೆಯ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಲಿದ್ದು, ಗಣರಾಜ್ಯೋತ್ಸವ ಕಾರ್ಯಕ್ರಮದ ಮಾದರಿಯಲ್ಲೇ ಮುಖ್ಯವೇದಿಕೆಯ ಕಾರ್ಯಕ್ರಮವನ್ನು ಸುಮಾರು 8 ಕ್ಯಾಮರಾಗಳು ರೆಕಾರ್ಡ್ ಮಾಡಲಿವೆ.

ಕಾರ್ಯಕ್ರಮದ ನೇರಪ್ರಸಾರಕ್ಕಾಗಿ ಹಲವು ಇಂಜಿನಿಯರ್ ಗಳು, ಛಾಯಾಗ್ರಾಹಕರು ದೃಶ್ಯ ತಜ್ಞರು ಕಾರ್ಯನಿರ್ವಹಿಸಲಿದ್ದಾರೆ. ಕಾರ್ಯಕ್ರಮದ ಪ್ರಸಾರಕ್ಕಾಗಿ ಆಯುಷ್ ಇಲಾಖೆ ಎಲ್.ಇ.ಡಿ  ಸ್ಕ್ರೀನ್ ಗಳ ಸೌಲಭ್ಯ ಒದಗಿಸಲಿದೆ. ದೃಶ್ಯ ಮಾಧ್ಯಮದೊಂದಿಗೆ ಆಲ್ ಇಂಡಿಯಾ ರೇಡಿಯೋ ಸಹ ಯೋಗ ದಿನಾಚರಣೆಗೆ ಸಂಬಂಧಿಸಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ.

Write A Comment