ರಾಷ್ಟ್ರೀಯ

ಅಂಡರ್ಸನ್, ಕುಟ್ರೋಚಿಗೆ ಕಾಂಗ್ರೆಸ್ ನೆರವಾದಂತೆ ಸುಷ್ಮಾ ಸ್ವರಾಜ್ ಲಲಿತ್ ಮೋದಿಗೆ ನೆರವು ನೀಡಿಲ್ಲ: ಅಮಿತ್ ಶಾ

Pinterest LinkedIn Tumblr

ami

ನವದೆಹಲಿ: ಮಾನವೀಯತೆಯ ಆಧಾರದ ಮೇಲೆ ಐಪಿಎಲ್ ಮಾಜಿ ಮುಖ್ಯಸ್ಥ ಲಲಿತ್ ಮೋದಿಗೆ ನೆರವಾಗಿದ್ದಾರೆ. ಕಾಂಗ್ರೆಸ್‌ ಪಕ್ಷದಂತೆ ವಾರನ್ ಆಂಡರ್ಸನ್ ಮತ್ತು ಕುಟ್ರೋಚಿಯವರಿಗೆ ನೆರವಾಗಿಲ್ಲ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ವಿಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್ ಪಕ್ಷದ ನಾಯಕರಿಗೆ ತಿರುಗೇಟು ನೀಡಿದ ಅಮಿತ್ ಶಾ, ವಾರನ್ ಅಂಡರ್ಸನ್ ಮತ್ತು ಒಟ್ಟಾವೋ ಕುಟ್ರೋಚಿಯವರಿಗೆ ಕಾಂಗ್ರೆಸ್ ಸಹಾಯ ಹಸ್ತ ನೀಡಿದಂತೆ ಸುಷ್ಮಾ ಸ್ವರಾಜ್ ಲಲಿತ್ ಮೋದಿಗೆ ನೀಡಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಭಾರತೀಯ ನಾಗರಿಕನೊಬ್ಬನಿಗೆ ಆತನ ಪತ್ನಿಯ ಚಿಕಿತ್ಸೆಗಾಗಿ ನೆರವಾಗಲು ಬ್ರಿಟನ್ ಸಚಿವರಿಗೆ ಅವರ ದೇಶದ ಕಾನೂನಿನಡಿಯಲ್ಲಿ ನೆರವಾಗಲು ಕೋರಿದ್ದಾರೆ ಎಂದು ಈಗಾಗಲೇ ಟ್ವಿಟ್ಟರ್‌ನಲ್ಲಿ ಸ್ಪಷ್ಟನೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ಲಲಿತ್ ಮೋದಿ ಬ್ರಿಟನ್‌ಗೆ ಪ್ರಯಾಣಿಸಲು ಕೋರಿ ಬ್ರಿಟನ್ ಸಂಸದ ಕೈಥ್ ವಾಜ್ ಮತ್ತು ಬ್ರಿಟನ್ ರಾಯಭಾರಿಯೊಂದಿಗೆ ಮಾತನಾಡಿರುವುದಾಗಿ ಸುಷ್ಮಾ ಒಪ್ಪಿಕೊಂಡಿದ್ದಾರೆ.

ಕಳೆದ 2014ರ ಜುಲೈ ತಿಂಗಳಲ್ಲಿ ನನಗೆ ಕರೆ ಮಾಡಿದ ಲಲಿತ್ ಮೋದಿ, ಕ್ಯಾನ್ಸರ್‌ನಿಂದ ಬಳಲುತ್ತಿರುವ ತಮ್ಮ ಪತ್ನಿಗೆ ಆಗಸ್ಟ್ 4 ರಂದು ಪೋರ್ಚ್‌ಗಲ್‌ನಲ್ಲಿ ಶಸ್ತ್ರಚಿಕಿತ್ಸೆಗಾಗಿ ದಿನಾಂಕ ನಿಗದಿಯಾಗಿದೆ. ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ  ನಾನು ಆಸ್ಪತ್ರೆಯಲ್ಲಿನ ದಾಖಲಾತಿ ಪತ್ರಗಳ ಮೇಲೆ ಸಹಿ ಮಾಡಲು ಉಪಸ್ಥಿತರಿರುವುದು ಅವಶ್ಯಕವಾಗಿದೆ ಎಂದು ಹೇಳಿದ್ದರಿಂದ ನಾನು ಅವರ ಬ್ರಿಟನ್ ಪ್ರಯಾಣಕ್ಕೆ ನೆರವಾಗಿದ್ದೆ ಎಂದು ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ.

Write A Comment