ರಾಷ್ಟ್ರೀಯ

ಬಿಗ್‌ಬಿ, ಮಾಧುರಿ, ಪ್ರೀತಿ ವಿರುದ್ಧ ಎಫ್‌ಐಆರ್ ದಾಖಲಿಸಲು ಕೋರ್ಟ್ ನಿರ್ದೇಶನ

Pinterest LinkedIn Tumblr

maggi_amitabh

ಮುಜಾಫರ್‌ಪುರ್, (ಬಿಹಾರ) ಜೂ.2: ಮ್ಯಾಗಿ ಜಾಹೀರಾತಿನಲ್ಲಿ ಪ್ರಚಾರದ ರಾಯಬಾರಿಗಳಾಗಿ ಪಾಲ್ಗೊಂಡಿದ್ದ ಬಾಲಿವುಡ್ ತಾರೆಗಳಾದ ನಟ ಅಮಿತಾಬ್ ಬಚನ್, ನಟಿಯರಾದ ಮಾಧುರಿ ದೀಕ್ಷಿತ್, ಪ್ರೀತಿ ಝಿಂಟಾ ಹಾಗೂ ಮ್ಯಾಗಿ ಕಂಪೆನಿಯ ಇಬ್ಬರು ಅಧಿಕಾರಿಗಳ ವಿರುದ್ಧ ಕೂಡಲೇ ಎಫ್‌ಐಆರ್ ದಾಖಲಿಸಬೇಕು ಮತ್ತು ಅಗತ್ಯವಿದ್ದರೆ ಅವರನ್ನು ಬಂಧಿಸಬೇಕು ಎಂದು ಬಿಹಾರದ ಮುಜಾಫರ್‌ಪುರ ಜಿಲ್ಲಾ ನ್ಯಾಯಾಲಯವೊಂದು ಪೊಲೀಸರಿಗೆ ನಿರ್ದೇಶನ ನೀಡಿದೆ.

ಈ ಐವರ ವಿರುದ್ಧ ಎಫ್‌ಐಆರ್ ದಾಖಲಿಸಿ ಅವರನ್ನು ತನಿಖೆಗೆ ಗುರಿಪಡಿಸಬೇಕು, ದೂರನ್ನು ಆಧರಿಸಿ ಅಗತ್ಯವೆನಿಸಿದರೆ ಬಂಧಿಸಬೇಕು ಎಂದು ಮುಜಾಫರ್‌ಪುರ ಹೆಚ್ಚುವರಿ ಮುಖ್ಯ ನ್ಯಾಯಾಧೀಶ ರಾಮಚಂದ್ರ ಪ್ರಸಾದ್ ಅವರು ಇಲ್ಲಿನ ಖಾಜಿ ಮಹಮ್ಮದ್‌ಪುರ ಠಾಣಾ ಪೊಲೀಸ್‌ರಿಗೆ ಖಡಕ್ ನಿರ್ದೇಶನ ನೀಡಿದ್ದಾರೆ.

ನ್ಯಾಯವಾದಿ ಸುಧೀರ್‌ಕುಮಾರ್‌ ಓಝಾರವರು ನಿನ್ನೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನಂತರ ಈ ನಿರ್ದೇಶನ ನೀಡಿರುವ ನ್ಯಾಯಾಲಯ ತನಿಖೆ ವೇಳೆ ಅಗತ್ಯವೆನಿಸಿದರೆ ಅವರನ್ನು ಬಂಧಿಸಬೇಕು ಎಂದು ಹೇಳಿದರು.

Write A Comment