ರಾಷ್ಟ್ರೀಯ

ರೂ.55 ಕೋಟಿಯ ವಿದ್ಯುತ್ ಬಿಲ್ ಕಂಡು ಹೃದಯಾಘಾತಕ್ಕೊಳಗಾದ ಮನೆ ಯಜಮಾನಿ

Pinterest LinkedIn Tumblr

current bill

ರಾಂಚಿ (ಜಾರ್ಖಂಡ್), ಮೇ 31: ಪ್ರತಿ ತಿಂಗಳೂ ಬರುವಂತೆ ಆ ತಿಂಗಳೂ ಅವರ ಮನೆಗೆ ವಿದ್ಯುತ್ ಬಿಲ್ ಬಂತು. ಆದರೆ, ಆ ಬಿಲ್ ನೋಡಿದ ಮನೆ ಯಜಮಾನಿ ಹೃದಯಾಘಾತಕ್ಕೊಳಗಾಗಿ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿರುವ ಘಟನೆ ಜಾರ್ಖಂಡ್‌ನ ರಾಂಚಿಯಲ್ಲಿ ನಡೆದಿದೆ.

ಕೃಷ್ಣ ಪ್ರಸಾದ್ ಎಂಬುವರ ಮನೆಗೆ ಅಂದು ಕರೆಂಟ್‌ಬಿಲ್ ಬಂತು. ಕೃಷ್ಣಪ್ರಸಾದ್ ಮನೆಯಲ್ಲಿರಲಿಲ್ಲ. ಬಾಗಿಲಲ್ಲಿ ಬಿದ್ದಿದ್ದ ಆ ಕರೆಂಟ್ ಬಿಲ್ಲನ್ನು ಪ್ರಸಾದ್ ಅವರ ತಾಯಿ ನೋಡಿ ಕೈಗೆತ್ತಿಕೊಂಡರು. ಬಿಲ್ ಮೇಲೆ ಕಣ್ಣಾಡಿಸಿದ್ದೇ ತಡ ಅಮ್ಮಾ ಎಂದು ಚೀರಿಕೊಂಡು ಕುಸಿದು ಬಿದ್ದರು. ಅವರಿಗೆ ಹೃದಯಾಘಾತವಾಗಿತ್ತು. ಅಕ್ಕಪಕ್ಕದವರು ತಕ್ಷಣ ಆಸ್ಪತ್ರೆಗೆ ಕರೆದೊಯ್ದರು. ಒಂದು ಕ್ಷಣ ವಿಳಂಬವಾಗಿದ್ದರೂ ಅವರ ಜೀವ ಉಳಿಯುತ್ತಿರಲಿಲ್ಲ. ಸುದ್ದಿ ತಿಳಿದ ಕೃಷ್ಣಪ್ರಸಾದ್ ಆಸ್ಪತ್ರೆಗೆ ನೇರವಾಗಿ ದಾವಿಸಿದರು. ತಮ್ಮ 55 ವಷರದ ತಾಯಿ ಮೈ ಮೇಲೆ ಎಚ್ಚರವಿಲ್ಲದೆ ಬೆಡ್‌ನಲ್ಲಿ ಮಲಗಿದ್ದಾರೆ. ಕಾರಣ ಆಮೇಲೆ ಗೊತ್ತಾಯಿತು. ಈ ಹೃದಯಾಘಾತಕ್ಕೆ ಕಾರಣ ಕರೆಂಟ್ ಬಿಲ್..! ಏಕೆ ಗೊತ್ತೆ..? ಆ ಬಿಲ್‌ನಲ್ಲಿದ್ದದ್ದು ಬರೋಬ್ಬರಿ 55 ಕೋಟಿ ರೂಪಾಯಿಗಳು..!

ಇದನ್ನು ಕಂಡು ಕೃಷ್ಣಪ್ರಸಾದ್‌ರಿಗೂ ಎದೆ ಹಿಂಡಿದಂತಾಯಿತು ಹೇಗೋ ಚೇತರಿಸಿಕೊಂಡರು. ಈಗ ವಿದ್ಯುತ್ ಇಲಾಖೆ ವಿರುದ್ಧ ಪ್ರಸಾದ್ ಕೋರ್ಟ್‌ಗೆ ಹೊರಟಿದ್ದಾರೆ. ನನ್ನ ತಾಯಿ ಸತ್ತಿದ್ದರೆ ಇಲಾಖೆಯವರು ತಂದುಕೊಡುತ್ತಿದ್ದರೇ ಎಂಬುದು ಅವರ ಪ್ರಶ್ನೆ. ಕೃಷ್ಣಪ್ರಸಾದ್ ಅವರದು ಐದು ಜನರಿರುವ ಎರಡು ಬೆಡ್‌ರೂಂ ಮನೆ. ಇವರ ಮನೆಗೆ ಬಿಲ್ ಗರಿಷ್ಠ ಅಂದರೆ ಎಷ್ಟು ಬರಬಹುದು..? ಅದು ಪ್ರಿಂಟ್ ಮಿಸ್ಟೇಕ್ ಎಂಬುದು ವಿದ್ಯುತ್ ಇಲಾಖೆಯ ಸಿದ್ಧ ಉತ್ತರ. ತನಿಖೆ ನಡೆಸದಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

Write A Comment