ರಾಷ್ಟ್ರೀಯ

ಜೂನ್ 1ರಿಂದ ಏರಿಕೆಯಾಗಲಿದೆ ಎಸಿ, ಮೊದಲ ದರ್ಜೆ ರೈಲು ಪ್ರಯಾಣ ದರ

Pinterest LinkedIn Tumblr

Train

ನವದೆಹಲಿ: ಸೇವಾತೆರಿಗೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಎಸಿ ರೈಲು ಹಾಗೂ ಮೊದಲ ದರ್ಜೆ ರೈಲು ಪ್ರಯಾಣ ದರವು ಏರಿಕೆಯಾಗಿರುವುದಾಗಿ ತಿಳಿದುಬಂದಿದೆ.

ಜೂನ್ 1ರಿಂದ ದೇಶಾದ್ಯಂತ ರೈಲು ಪ್ರಯಾಣ ದರ ಏರಿಕೆಯಾಗಲಿದ್ದು, ಶೇ. 0.5ರಷ್ಟು ಸೇವಾತೆರಿಗೆಯನ್ನು ಏರಿಕೆಯಾದ ಪರಿಣಾಮ ಇದೀಗ ರೈಲು ಪ್ರಯಾಣ ದರ ಏರಿಕೆಯಾಗಲು ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

ಪ್ರಸ್ತುತ ಎಸಿ ಕ್ಲಾಸ್ ಹಾಗೂ ಪ್ರಥಮ ದರ್ಜೆಯ ಸರಕು ಸಾಗಣೆ ದರಗಳ ಮೇಲೆ ಶೇ.3.708 ಸೇವಾ ತೆರಿಗೆ ಹೇರಲಾಗಿದ್ದು, ಜೂನ್‌ನಿಂದ ಸೇವಾ ತೆರಿಗೆಯ ದರ ಶೇ. 4.2ರಷ್ಟು ಬದಲಾಗುವುದರಿಂದ ಶೇ. 0.5ರಷ್ಟು ಸೇವಾತೆರಿಗೆ ಏರಿಕೆಯಾಗಲಿದೆ ಎಂದು  ಹಿರಿಯ ರೈಲ್ವೆ ಸಚಿವಾಲಯದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಉದಾಹರಣೆಗೆ ಎಸಿ ಪ್ರಯಾಣದರವು ರು.1000ಗಳಿದ್ದರೆ, ರು.10 ಹೆಚ್ಚಿಗೆ ನೀಡಬೇಕಾಗುತ್ತದೆ. ಜೂನ್ 1ರ ನಂತರ ಖರೀದಿಸಿದ ಟಿಕೆಟ್‌ಗಳಿಗೆ ಸೇವಾತೆರಿಗೆ ದರ ಅನ್ವಯವಾಗಲಿದ್ದು, ಪ್ರಯಾಣ ದರ ಏರಿಕೆಯಾದ ನಂತರ ಎಸಿ ಹಾಗೂ ಪ್ರಥಮ ದರ್ಜೆಗೆ ಅನ್ವಯವಾಗಲಿದೆ. ಜೂನ್ 1ರ ನಂತರ ಸೇವಾತೆರಿಗೆಯು ರೈಲ್ವೆ ಸಾಗಿಸುವ ಎಲ್ಲಾ ಸರಕುಗಳಿಗೆ ಹೇರಲಾಗುತ್ತದೆ.

Write A Comment