ರಾಷ್ಟ್ರೀಯ

ಸಮರಕ್ಕಿಲ್ಲ ಮಹಿಳಾ ಯೋಧರು: ಪಾರಿಕ್ಕರ್‌

Pinterest LinkedIn Tumblr

PARRIKAR_2385759f

ಹೊಸದಿಲ್ಲಿ: ಮಹಿಳಾ ಯೋಧರನ್ನು ನೇರ ಯುದ್ಧಕ್ಕೆ ನಿಯೋಜಿಸಲಾಗದು ಎಂದು ರಕ್ಷಣಾ ಸಚಿವ ಮನೋಹರ್ ಪರಿಕರ್ ತಿಳಿಸಿದ್ದಾರೆ.

ಸಶಸ್ತ್ರಪಡೆಗಳಲ್ಲಿ ಮಹಿಳೆಯರಿಗೆ ಪುರುಷರಷ್ಟೇ ಸಮಾನ ಪಾತ್ರ ನೀಡಬೇಕು ಎಂಬ ವಾದವನ್ನು ಖಂಡತುಂಡವಾಗಿ ತಳ್ಳಿ ಹಾಕಿದ ಪರಿಕರ್, ಮಹಿಳೆಯರ ಸುರಕ್ಷತೆ ದೃಷ್ಟಿಯಿಂದ ನೇರವಾಗಿ ಯದ್ಧದಲ್ಲಿ ಭಾಗಿಯಾಗುವ ಬದಲು ಅನ್ಯ ಕಾರ್ಯಾಚರಣೆಗಳಲ್ಲಿ ಅವಕಾಶ ನೀಡಲಾಗುತ್ತದೆ ಎಂದರು.

”ಮಹಿಳಾ ಯೋಧರನ್ನು ನೇರ ಯುದ್ಧಕ್ಕೆ ಕಳಿಸಲು ಖಂಡಿತವಾಗಿಯೂ ಆಗದು. ಒಂದು ವೇಳೆ ಯುದ್ಧದಲ್ಲಿ ಮಹಿಳಾ ಯೋಧರು ಶತ್ರುಪಡೆಗಳ ಕೈಗೆ ಸಿಲುಕಿ ಬಂಧಿಯಾದರೆ ಆಗಬಹುದಾದ ಅನಾಹುತಗಳ ಬಗ್ಗೆ ಯೋಚಿಸಿ,” ಎಂದು ಎಚ್ಚರಿಸುವ ಮೂಲಕ ಶತ್ರುಗಳು ಮಹಿಳೆಯರಿಗೆ ನೀಡಬಹುದಾದ ಚಿತ್ರಹಿಂಸೆಗಳ ಕುರಿತು ಪರೋಕ್ಷವಾಗಿ ತಿಳಿಸಿದರು.

ಸಮರಾಂಗಣಕ್ಕೆ ನೇರವಾಗಿ ಕಳಿಸುವ ಬದಲು ಯುದ್ಧದ ಸಂದರ್ಭದಲ್ಲಿ ನಡೆಸಲಾಗುವ ಇತರೆ ಪೂರಕ ಕಾರ್ಯಾಚರಣೆಗಳಲ್ಲಿ ಮಹಿಳೆಯರಿಗೆ ಹೆಚ್ಚಿನ ಪಾತ್ರ ನೀಡಲಾಗುತ್ತದೆ ಎಂದು ಪರಿಕರ್ ವಿವರಿಸಿದರು.

ಪುಣೆ ಸಮೀಪದ ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯಲ್ಲಿ ಶನಿವಾರ ಯೋಧರ ಪಾಸಿಂಗ್ ಪರೇಡ್ ನೇಪಥ್ಯದಲ್ಲಿ ಸಚಿವರು ಮಾತನಾಡಿದರು.

ಸೇನೆಯಲ್ಲಿ ಅಧಿಕಾರಿಗಳ ಕೊರತೆಯ ಬಗೆಗಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೊರತೆಯ ಅಂತರವನ್ನು ಕಡಿಮೆ ಮಾಡಲು ಪ್ರಯತ್ನಿಸಲಾಗುತ್ತಿದ್ದು, ಹಿಂದಿದ್ದ 11 ಸಾವಿರ ಅಧಿಕಾರಿಗಳ ಕೊರತೆ ಈಗ 7 ಸಾವಿರಕ್ಕಿಳಿದಿದೆ ಎಂದರು.

Write A Comment