ರಾಷ್ಟ್ರೀಯ

ಭಾರತ ಮತ್ತು ಯುರೋಪ್ ನಲ್ಲಿ ದಾವೂದ್ ಗ್ಯಾಂಗ್ ನ ಸಾವಿರಾರು ಕೋಟಿ ರೂ. ಆಸ್ತಿ : ಇಡಿ

Pinterest LinkedIn Tumblr

Dawood Ibrahim

ನವದೆಹಲಿ: ಭೂಗತ ಪಾತಕಿ ಹಾಗೂ ಮೋಸ್ಟ್ ವಾಂಟೆಡ್ ಕ್ರಿಮಿನಲ್ ದಾವೂದ್ ಇಬ್ರಾಹಿಂ ಭಾರತ ಹಾಗೂ ಯುರೋಪ್ ನಲ್ಲಿ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿರುವುದನ್ನು ಜಾರಿ ನಿರ್ದೇಶನಾಲಯ ಪತ್ತೆ ಮಾಡಿದೆ.

ನಿನ್ನೆಯಷ್ಟೇ ಭಾರತೀಯ ಗುಪ್ತಚರ ಇಲಾಖೆ ದಾವೂದ್ ಇಬ್ರಾಹಿಂ ಪಾಕಿಸ್ತಾನದ ಮುರ್ರೇ ಎಂಬಲ್ಲಿ ಇರುವುದನ್ನು ಪತ್ತೆ ಹಚ್ಚಿದ್ದ ಬೆನ್ನಲ್ಲೇ ಜಾರಿ ನಿರ್ದೇಶನಾಲಯ ಆಘಾತಕಾರಿ ಮಾಹಿತಿ ಹೊರಹಾಕಿದೆ.

ಮೂಲಗಳ ಪ್ರಕಾರ, ದಾವೂದ್ ಇಬ್ರಾಹಿಂ ಭಾರತದಲ್ಲಿ ಇಕ್ಬಾಲ್ ಮಿರ್ಚಿ ಎಂಬುವನ ಮೂಲಕ ತನ್ನ ವ್ಯವಹಾರಗಳನ್ನು ನಡೆಸುತ್ತಿದ್ದ ಎಂಬುದು ತಿಳಿದು ಬಂದಿದೆ. ಇಕ್ಬಾಲ್ ಮಿರ್ಚಿ, 2013, ಆಗಸ್ಟ್ 14ರಂದು ಲಂಡನ್ ನಲ್ಲಿ ಮೃತಪಟ್ಟಿದ್ದ. ಈತ ಸಾಯುವ ಮುನ್ನ ಮುಂಬಯಿಯಲ್ಲಿ ದಾವೂದ್ ಗೆ ಸೇರಿದ ನಾಲ್ಕು ಆಸ್ತಿಗಳನ್ನು 1 ಸಾವಿರ ಕೋಟಿಗೂ ಹೆಚ್ಚಿನ ಹಣಕ್ಕೆ ಮಾರಾಟ ಮಾಡಿ. ಆ ಹಣದಿಂದ ಯೂರೋಪ್ ನಲ್ಲಿ ಆಸ್ತಿ ಖರೀದಿಸಿದ್ದ ಎನ್ನಲಾಗಿದೆ.

ಯುಕೆ, ಟರ್ಕಿ, ಸ್ಪೇನ್, ಸಿಪ್ರಸ್,ದುಬೈಸ ಮೊರಾಕ್ಕೋ ಸೇರಿದಂತೆ ಹಲವು ದೇಶಗಳಲ್ಲಿ ಇಕ್ಬಾಲ್ ಮಿರ್ಚಿ ಆಸ್ತಿ ಹೊಂದಿರುವುದನ್ನು ಜಾರಿ ನಿರ್ದೇಶನಾಲಯ ಬಹಿರಂಗ ಪಡಿಸಿದೆ.

ಇನ್ನು ವಿದೇಶಿ ಸರ್ಕಾರಗಳ ನೆರವು ಪಡೆದು ದಾವೂದ್ ಗ್ಯಾಂಗ್ ಆಸ್ತಿ ಎಲ್ಲೆಲ್ಲಿ ಇದೆ ಎಂಬುದನ್ನು ಪತ್ತೆ ಹಚ್ಚಲು ಜಾರಿ ನಿರ್ದೇಶನಾಲಯ ಯೋಜನೆ ರೂಪಿಸುತ್ತಿದೆ.

ಭಾರತ ಸರ್ಕಾರಕ್ಕಿರುವ ಮಾಹಿತಿ ಪ್ರಕಾರ, ಪಾಕಿಸ್ತಾನ ಸರ್ಕಾರ ದಾವೂದ್ ಇಬ್ರಾಹಿಂ ಮತ್ತು ಆತನ ಕುಟುಂಬಸ್ಥರಿಗೆ ಮೂರು ಪಾಸ್ ಪೋರ್ಟ್ ನೀಡಿರುವುದು ತಿಳಿದು ಬಂದಿದೆ.

Write A Comment