ರಾಷ್ಟ್ರೀಯ

ವಿಮಾನ ದುರ್ಘಟನೆಯ ನಂತರ ನೇತಾಜಿ ಭೇಟಿಯಾಗಿದ್ದೆ ಎಂದ 114 ವರ್ಷದ ತಾತ

Pinterest LinkedIn Tumblr

netaji

ನೇತಾಜಿ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂಬುದು ಸುಳ್ಳು, ಘಟನೆಯ 4 ತಿಂಗಳ ನಂತರ ನಾನು ಅವರನ್ನು ಭೇಟಿಯಾಗಿದ್ದೆ ಎಂದು ಅವರ ಚಾಲಕರಾಗಿ ಕಾರ್ಯ ನಿರ್ವಹಿಸಿದ್ದ ನಿಜಾಮುದ್ದೀನ್ ಹೇಳಿದ್ದಾರೆ.

ನೇತಾಜಿ ಅವರ ಮೊಮ್ಮಗಳಾದ ರಾಜ್ಯಶ್ರೀ ಚೌಧರಿ ಕಳೆದ ಸೋಮವಾರ ತಮ್ಮ ತಾತನ ಬಳಿ ಚಾಲಕರಾಗಿ ಸೇವೆ ಸಲ್ಲಿಸಿದ್ದ ನಿಜಾಮುದ್ದೀನ್ ಅವರನ್ನು ಭೇಟಿಯಾದರು. ಆ ಸಂದರ್ಭದಲ್ಲಿ ಆಜಮ್‌ಗಡ್ ನಿವಾಸಿಯಾದ 114 ವರ್ಷದ ತಾತ ನೇತಾಜಿ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಸುದ್ದಿ ಸೃಷ್ಟಿಸಿದ ಕಾಂಗ್ರೆಸ್ ಸರಕಾರದ ವಿರುದ್ಧ ಆಕ್ರೋಶವನ್ನು ವ್ಯಕ್ತ ಪಡಿಸಿದ್ದಾರೆ.

ನಿಜಾಮುದ್ದೀನ್ ಹೇಳುವ ಪ್ರಕಾರ ತಥಾಕಥಿತ ವಿಮಾನ ಅಪಘಾತದ ನಂತರ  ತಾನು ಬೋಸ್ ಅವರನ್ನು ಭೇಟಿಯಾಗಿದ್ದೆ. ನಾನೇ ಸ್ವತಃ ಅವರನ್ನು ಬರ್ಮಾ ಗಡಿವರೆಗೆ, ಸಿತಾಂಗಾಪರ ನದಿ ತೀರದಲ್ಲಿ ಬಿಟ್ಟು ಬಂದಿದ್ದೆ. ಅವರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುವ ವಿಮಾನ ದುರ್ಘಟನೆಯ 3, 4 ತಿಂಗಳ ಬಳಿಕ ಇದು ನಡೆದಿತ್ತು ಎಂದು ನಿಜಾಮುದ್ದೀನ್ ಹೇಳಿದ್ದಾರೆ ಎಂದು ರಾಜ್ಯಶ್ರೀಯವರು ತಿಳಿಸಿದ್ದಾರೆ.

ಅಜಮಗಡ್‌ನ ಇಸ್ಲಾಂಪುರ್‌ನಲ್ಲಿ ವಾಸವಾಗಿರುವ ನಿಜಾಮುದ್ದೀನ್ 1943 ರಿಂದ 1945ರವರೆಗೆ ಆಜಾದ್ ಹಿಂದ್ ಫೌಜ್‌ನಲ್ಲಿ ಚಾಲಕರಾಗಿ ನೇತಾಜಿ ಜತೆ ಇದ್ದರು.

ನಿಜಾಮುದ್ದೀನ್ ಭೇಟಿಯ ನಂತರ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ ರಾಜ್ಯಶ್ರೀ, ಈಗ ತಮ್ಮ ತಾತನ ಸಾವಿಗೆ ಸಂಬಂಧಿಸಿದ ಎಲ್ಲ ಗೌಪ್ಯ ಕಡತಗಳನ್ನು ಸಾರ್ವಜನಿಕಗೊಳಿಸಲು ತಮ್ಮ ಹೋರಾಟವನ್ನು ತೀವೃಗೊಳಿಸುವುದಾಗಿ ಘೋಷಿಸಿದ್ದು,ತಮ್ಮ ಈ ಕಾರ್ಯದಲ್ಲಿ ನಿಜಾಮುದ್ದೀನ್ ಸಹಾಯವನ್ನು ಅಪೇಕ್ಷಿಸಿದ್ದಾರೆ.

ಭಾರತ ಸ್ವಾತಂತ್ರ್ಯ ಹೋರಾಟದ ಮಹಾನ್ ನಾಯಕ ಸುಭಾಷ್ ಚಂದ್ರ ಬೋಸ್ ಸಾವು ಇಂದಿಗು ಕೂಡ ರಹಸ್ಯವಾಗಿ ಉಳಿದಿದೆ.

Write A Comment