ರಾಷ್ಟ್ರೀಯ

20 ವರ್ಷದಲ್ಲಿ ಮೊದಲ ಬಾರಿಗೆ ಭಾರತೀಯ ಮೊಬೈಲ್ ಮಾರಾಟ ಕುಸಿತ

Pinterest LinkedIn Tumblr

mobile

ನವದೆಹಲಿ: ಕಳೆದ 20 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಭಾರತೀಯ ಮೊಬೈಲ್ ಫೋನ್ಗಳ ಮಾರಾಟದಲ್ಲಿ ಕುಸಿತ ಕಂಡಿದೆ.

ಕಳೆದ ನಾಲ್ಕನೆ ತ್ರೈಮಾಸಿಕ(ಅಕ್ಟೋಬರ್-ಡಿಸೆಂಬರ್ 2014)ಕ್ಕೆ ಹೋಲಿಕೆ ಮಾಡಿದರೆ ಈ ವರ್ಷದ ಮೊದಲ ತ್ರೈಮಾಸಿಕ (ಜನವರಿ-ಮಾರ್ಚ್ 2015)ದಲ್ಲಿ ಮೊಬೈಲ್ ಮಾರಾಟದಲ್ಲಿ ಶೇ.14.5 ರಷ್ಟು ಕಡಿಮೆಯಾಗಿದೆ. ಕಳೆದ ತ್ರೈಮಾಸಿಕದಲ್ಲಿ 62 ಮಿಲಿಯನ್ ಹ್ಯಾಂಡ್ಸೆಟ್ಗಳು ಮಾರಾಟವಾಗಿದ್ದವು. ಆದರೆ ಈ ತ್ರೈಮಾಸಿಕದಲ್ಲಿ ಕೇವಲ 53 ಮಿಲಿಯನ್ ಹ್ಯಾಂಡ್ಸೆಟ್ಗಳು ಮಾರಾಟವಾಗಿವೆ ಎಂದು ಸೈಬರ್ಮೀಡಿಯಾ ರಿಸರ್ಚ್ ವರದಿ ತಿಳಿಸಿದೆ.

ಈ ತ್ರೈಮಾಸಿಕದಲ್ಲಿ ಸ್ಮಾರ್ಟ್ಫೋನ್ ಮಾರಾಟದಲ್ಲಿ 7.14ರಷ್ಟು ಹಾಗೂ ಕಡಿಮೆ ಬೆಲೆಯ ಫೋನ್ಗಳ ಮಾರಾಟದಲ್ಲಿ ಶೇ.18.3ರಷ್ಟು ಇಳಿಕೆಯಾಗಿದೆ.

2014ರಲ್ಲಿ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಭಾರತ ಏಷ್ಯಾದಲ್ಲಿ ಅತಿ ಹೆಚ್ಚು ವೇಗವಾಗಿ ಬೆಳೆಯುತ್ತಿರುವ ದೇಶವಾಗಿತ್ತು. ಅಲ್ಲದೆ 2016ರ ವೇಳೆ 204 ಮಿಲಿಯನ್ ಸ್ಮಾರ್ಟ್ ಫೋನ್ ಬಳಕೆದಾರರನ್ನು ಹೊಂದುವ ಮೂಲಕ ಜಗತ್ತಿನ ಎರಡನೇ ಅತಿ ದೊಡ್ಡ ಸ್ಮಾರ್ಟ್ ಮಾರುಕಟ್ಟೆಯನ್ನು ಹೊಂದಿರುವ ಅಮೆರಿಕವನ್ನೇ ಹಿಂದಿಕ್ಕಲಿದೆ ಎನ್ನಲಾಗಿತ್ತು.

ಸೈಬರ್ಮೀಡಿಯಾ ವರದಿಯನ್ನು ಗಮನಸಿದರೆ ಭಾರತ ಮೊಬೈಲ್ ಮಾರುಕಟ್ಟೆ ಕುಂಟಿತಗೊಳ್ಳುತ್ತಿದೆ ಎಂಬ ಅನುಮಾನಗಳು ಮೂಡುತ್ತಿವೆ. ತೆರಿಗೆ ಹಾಗೂ ಹೆಚ್ಚಾದ ಸ್ಪರ್ಧೆಯಿಂದ ಮೊಬೈಲ್ ಮಾರಾಟ ಕಡಿಮೆಯಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Write A Comment